Advertisement
*ನಿಮ್ಮ ಹಿನ್ನೆಲೆ ಬಗ್ಗೆ ಏನು ಹೇಳುತ್ತೀರಿ?ನಾನು ಮೂಲತಃ ಬಳ್ಳಾರಿ ಜಿಲ್ಲೆ ಹೊಸಪೇಟೆಯವನು. ನಾನು ಯಾವುದೇ ಸಿನಿಮಾ ಹಿನ್ನೆಲೆಯಿಂದ ಬಂದವನಲ್ಲ. ನಮ್ಮ ಫ್ಯಾಮಿಲಿಯಲ್ಲಿ ಕೂಡ ಯಾರೂ ಸಿನಿಮಾರಂಗದಲ್ಲಿಲ್ಲ. ನಮ್ಮದು ವೈದ್ಯಕೀಯ ಹಿನ್ನೆಲೆಯ ಕುಟುಂಬ. ನಮ್ಮ ತಂದೆ-ತಾಯಿ, ತಮ್ಮ ಎಲ್ಲರೂ ಕೂಡ ವೃತ್ತಿಯಲ್ಲಿ ಡಾಕ್ಟರ್. ನಾನು ಕೂಡ ಎಂಬಿಬಿಎಸ್ ಸ್ಟಡೀಸ್ ಮಾಡಿದ್ದೇನೆ.
ನನಗೆ ಮೊದಲಿನಿಂದಲೂ ಆ್ಯಕ್ಟಿಂಗ್ ಅಂದ್ರೆ, ಅದೇನೋ ಒಂಥರಾ ಆಸಕ್ತಿ. ಆದ್ರೆ ನನಗೆ ಆ್ಯಕ್ಟಿಂಗ್ ಇಷ್ಟ ಅಂತ ಮನೇಲಿ ಹೇಳಿಕೊಳ್ಳೋದಕ್ಕೆ ತುಂಬ ಭಯವಿತ್ತು. ಹೀಗಾಗಿ ಮೆಡಿಕಲ್ ಓದುತ್ತಿರುವಾಗಲೇ, ಮನೆಯಲ್ಲಿ ಗೊತ್ತಿಲ್ಲದಂತೆ ಆ್ಯಕ್ಟಿಂಗ್ ಟ್ರೈನಿಂಗ್ ಪಡೆದುಕೊಂಡೆ. ಕೊನೆಗೆ ಮನೆಯವರನ್ನೂ ಒಪ್ಪಿಸಿ, ಅಂದುಕೊಂಡಂತೆ “ಲವ್ 360′ ಸಿನಿಮಾದ ಮೂಲಕ ಆ್ಯಕ್ಟರ್ ಆದೆ. *”ಲವ್ 360′ ಸಿನಿಮಾಕ್ಕೆ ಆಯ್ಕೆಯಾಗಿದ್ದು ಹೇಗೆ?
ನಮ್ಮ ಪರಿಚಿತರೊಬ್ಬರ ಮೂಲಕ ನಿರ್ದೇಶಕ ಶಶಾಂಕ್ ಅವರ ಪರಿಚಯವಾಯ್ತು. ಅವರು ಕೂಡ ಹೊಸ ಆರ್ಟಿಸ್ಟ್‌ಗಳ ಜೊತೆಗೆ ಒಂದು ಸಿನಿಮಾ ಮಾಡುವ ಯೋಚನೆಯಲ್ಲಿದ್ದರು. ಕೊನೆಗೆ ಸಿನಿಮಾದ ಸಬ್ಜೆಕ್ಟ್ ಮತ್ತು ಕ್ಯಾರೆಕ್ಟರ್‌ಗೆ ನಾನು ಹೊಂದಾಣಿಕೆಯಾಗುತ್ತೇನೆ ಎಂದು ನನ್ನನ್ನು ಈ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿ ಎರಡು ತಿಂಗಳು ರಿಹರ್ಸಲ್, ವರ್ಕ್‌ಶಾಪ್ ಮೂಲಕ ಸಿನಿಮಾಕ್ಕೆ ತಯಾರಿ ಮಾಡಿಕೊಂಡೆ.
Related Articles
ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಲವ್‌ಸ್ಟೋರಿ ಸಿನಿಮಾ. ಈ ಸಿನಿಮಾದಲ್ಲಿ ನಾನೊಬ್ಬ ಬೋಟ್ ಮೆಕ್ಯಾನಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿರುವಂಥ ಲವರ್ ಬಾಯ್ ಕ್ಯಾರೆಕ್ಟರ್ ನನ್ನದು. ಇದೊಂದು ಲವ್‌ಸ್ಟೋರಿ ಸಿನಿಮಾವಾದ್ರೂ, ಕಥೆಗೆ ಬೇರೆ ಬೇರೆ ಆಯಾಮಗಳಿವೆ. ಇಲ್ಲಿ ಲವ್ ಜೊತೆಗೆ ಕ್ರೈಂ-ಥ್ರಿಲ್ಲರ್, ಆ್ಯಕ್ಷನ್, ಸಸ್ಪೆನ್ಸ್ ಹೀಗೆ ಬೇರೆ ಬೇರೆ ಎಲಿಮೆಂಟ್ಸ್ ಇದೆ.
Advertisement
* ನಿರ್ದೇಶಕ ಶಶಾಂಕ್ ಅವರೊಂದಿಗೆ ಕೆಲಸ ಹೇಗಿತ್ತು?ಕನ್ನಡದಲ್ಲಿ ಅನೇಕ ಹೊಸ ಪ್ರತಿಭೆಗಳನ್ನು ಶಶಾಂಕ್ ತಮ್ಮ ಸಿನಿಮಾ ಮೂಲಕ ಬಿಗ್ ಸ್ಕ್ರೀನ್‌ಗೆ ಪರಿಚಯಿಸಿದ್ದಾರೆ. ಅವರೊಂದಿಗೆ ಕೆಲಸ ಮಾಡುವುದೇ ಒಂದು ವಿಶೇಷ ಅನುಭವ. ಪ್ರತಿದಿನ ಅವರಿಂದ ಹೊಸದೇನಾದ್ರೂ ಕಲಿತುಕೊಳ್ಳುತ್ತಿದ್ದೆ. ಹೊಸಬರ ಟ್ಯಾಲೆಂಟ್ ಹೇಗೆ ಶೋ ಕೇಸ್ ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ತುಂಬ ಸಪೋರ್ಟಿವ್ ಆಗಿದ್ದರಿಂದ, ಕಂಫರ್ಟ್ ಜೋನ್‌ನಲ್ಲಿ ಸಿನಿಮಾ ಮುಗಿದಿದ್ದೇ ಗೊತ್ತಾಗಲಿಲ್ಲ. * ರಿಲೀಸ್‌ಗೂ ಮುನ್ನ “ಲವ್ 360′ ಸಿನಿಮಾಕ್ಕೆ ರೆಸ್ಪಾನ್ಸ್ ಹೇಗಿದೆ?
ಈಗಾಗಲೇ “ಲವ್ 360′ ಸಿನಿಮಾದ ಟ್ರೇಲರ್, ಸಾಂಗ್ಸ್ ಎಲ್ಲವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಪ್ರಮೋಶನ್ಸ್ ಸಮಯದಲ್ಲೂ ಎಲ್ಲ ಕಡೆಗಳಿಂದ ಬಿಗ್ ರೆಸ್ಪಾನ್ಸ್ ಸಿಗ್ತಿದೆ. ಆಡಿಯನ್ಸ್, ಇಂಡಸ್ಟ್ರಿ ಕಡೆಯಿಂದ ಎಲ್ಲರೂ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಅಂತೆಯೇ ಥಿಯೇಟರ್‌ನಲ್ಲೂ ಸಿನಿಮಾ ಆಡಿಯನ್ಸ್‌ಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ.