Advertisement

ಅಮೂಲ್ಯ ಪಟ್ನಾಯಕ್‌ ದೆಹಲಿ ಪೊಲೀಸ್‌ ಆಯುಕ್ತ

03:45 AM Jan 31, 2017 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪೊಲೀಸ್‌ ಆಯುಕ್ತರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಅಮೂಲ್ಯ ಕುಮಾರ್‌ ಪಟ್ನಾಯಕ್‌ ನೇಮಕಗೊಂಡಿದ್ದಾರೆ. 

Advertisement

ಅವರು 1985ನೇ ಸಾಲಿನ ಅರುಣಾಚಲ ಪ್ರದೇಶ-ಗೋವಾ-ಮಿಜೋರಾಮ್‌- ಕೇಂದ್ರಾಡಳಿತ ಪ್ರದೇಶ (ಎಜಿಎಂಯುಟಿ) ಕೇಡರ್‌ನ ಐಪಿಎಸ್‌ ಅಧಿಕಾರಿ. ನಿಕಟ ಪೂರ್ವ ಆಯುಕ್ತ ಅಲೋಕ್‌ ಕುಮಾರ್‌ ಸಿಬಿಐ ಮುಖ್ಯಸ್ಥರಾದ ಬಳಿಕ ಹುದ್ದೆ ತೆರವಾಗಿತ್ತು. ಗಮನಾರ್ಹ ಅಂಶವೆಂದರೆ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ಹಿಂದಿಕ್ಕಿ ಪಟ್ನಾಯಕ್‌ ನೇಮಕವಾಗಿದ್ದಾರೆ.ನೂತನ ಆಯುಕ್ತ ರಾಷ್ಟ್ರಪತಿ ಪೊಲೀಸ್‌ ಪದಕ ಪಡೆದಿದ್ದಾರೆ. ಉನ್ನತ ಸೇವೆಗಾಗಿ ಪೊಲೀಸ್‌ ಪದಕವನ್ನೂ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next