Advertisement

ಪಿಎಚ್‌.ಡಿ ಉಗ್ರ, ಆತನ ಬಂಟ ಫಿನಿಶ್‌

06:00 AM Oct 12, 2018 | |

ಶ್ರೀನಗರ: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ (ಎಎಂಯು)ದಲ್ಲಿ ಸಂಯುಕ್ತ ಭೂಗರ್ಭಶಾಸ್ತ್ರದಲ್ಲಿ ಪಿಎಚ್‌.ಡಿ ಪಡೆದು ಬಳಿಕ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಗೆ ಸೇರಿದ ಮನನ್‌ ಬಶಿರ್‌ ವಾನಿ (27) ಮತ್ತು ಆಶಿಕ್‌ ಹುಸೈನ್‌ ಎಂಬ ಇಬ್ಬರು ಭಯೋತ್ಪಾದಕರನ್ನು  ಹೊಡೆದು ಉರುಳಿಸಲಾಗಿದೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಗುರುವಾರ ನಡೆದ ಬಿರುಸಿನ ಗುಂಡಿನ ಚಕಮಕಿಯಲ್ಲಿ ಅವರಿಬ್ಬರನ್ನು ಸಾಯಿಸಲಾಗಿದೆ. ಹಂದ್ವಾರದ ಸಾತುಡ್‌ ಎಂಬಲ್ಲಿ ಬೆಳಗ್ಗೆ 9 ಗಂಟೆಗೆ ಇಬ್ಬರು ಉಗ್ರರು ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ಪೊಲೀಸರು ಮತ್ತು ಭದ್ರತಾ ಪಡೆಗಳು ಅವರನ್ನು ಸುತ್ತುವರಿದರು. ಅವರ ಜತೆಗಿನ ಗುಂಡಿನ ಕಾಳಗ 11 ಗಂಟೆಯ ವರೆಗೆ ನಡೆಯಿತು. ಅಂತಿಮವಾಗಿ ಅವರಿಬ್ಬರನ್ನು ಕೊಲ್ಲಲಾಯಿತು. ಪರಿಶೀಲನೆಯ ವೇಳೆ ಒಬ್ಟಾತ ಎಎಂಯುನಿಂದ ಪಿಎಚ್‌.ಡಿ ಪದವಿ ಪಡೆದ ಮನನ್‌ ಬಶೀರ್‌ ವಾನಿ ಆಗಿದ್ದ. ಆಶಿಕ್‌ ಹುಸೈನ್‌ ಎಂಬ ಉಗ್ರ ಹಂದ್ವಾರಾ ಪ್ರದೇಶದ ಲಾಂಗೇಟ್‌ ಪ್ರದೇಶಕ್ಕೆ ಸೇರಿದವನಾಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ.

Advertisement

ಈ ವರ್ಷದ ಜನವರಿಯಲ್ಲಿ ಆತ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ ಮನನ್‌ ಕಲಿಯುದರಲ್ಲಿ ಜಾಣನಾಗಿದ್ದ. ಪ್ರಾಥಮಿಕ ವಿದ್ಯಾಭ್ಯಾಸವನ್ನು  ಸೈನಿಕ್‌ ಸ್ಕೂಲ್‌ ಮತ್ತು ಜವಾಹರ್‌ ನವೋದಯ ವಿದ್ಯಾಲಯದಲ್ಲಿ ಪಡೆದುಕೊಂಡಿದ್ದ. ಆತನೇ ಉತ್ತರ ಕಾಶ್ಮೀರದಲ್ಲಿ ಹಿಜ್ಬುಲ್‌ ಸಂಘಟನೆಗೆ ಯುವಕರನ್ನು ನೇಮಿಸಲು ಪ್ರಮುಖ ಪಾತ್ರ ವಹಿಸುತ್ತಿದ್ದ. ಕಾನೂನು ಪ್ರಕ್ರಿಯೆಗಳ ಬಳಿಕ ವಾನಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಕುಪ್ವಾರ ಜಿಲ್ಲೆಯ ಟೇಕಿಪೊರಾದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಮುಫ್ತಿ ಖಂಡನೆ: ಈ ಬೆಳವಣಿಗೆ ನಡುವೆ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಘಟನೆಯನ್ನು ಖಂಡಿಸಿದ್ದಾರೆ. ಪಿಎಚ್‌.ಡಿ ಪದವೀಧರ ಸಾವು ದುಃಖ ತಂದಿದೆ. ಕಾಶ್ಮೀರ ಸಮಸ್ಯೆ ಪರಿಹರಿಸಲು ಪಾಕಿಸ್ತಾನ ಸೇರಿದಂತೆ ಸಂಬಂಧಿಸಿದ ಎಲ್ಲರ ಜತೆಗೂ ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next