ಹುಣಸೂರು: ಸರಕಾರದ ಮಹತ್ವಾಕಾಂಕ್ಷೆಯ ಅಮೃತ ಆರೋಗ್ಯ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು.
ಹುಣಸೂರು ತಾ.ಪಂ.ಸಭಾಂಗಣದಲ್ಲಿ ತಾಲೂಕಿನ 41 ಗ್ರಾ.ಪಂ.ಗಳ ಅಧ್ಯಕ್ಷರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಿ ಮಾತನಾಡಿದ ಶಾಸಕರು ಪ್ರತಿ ಗ್ರಾ.ಪಂಗಳಿಗೆ ತಲಾ ಒಂದರಂತೆ ಕಿಟ್ ವಿತರಿಸಲಾಗಿದ್ದು. ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು.
ಬಿ.ಪಿ.ಸಕ್ಕರೆ ಕಾಯಿಲೆಯಿಂದ ಬಳಲುವವರ ಮೇಲೆ ನಿಗಾ ವಹಿಸಲು ಆಶಾ ಕಾರ್ಯಕರ್ತೆಯರು ಶ್ರಮ ಹಾಕಬೇಕು. ಸರಕಾರಗಳು ಯೋಜನೆಯನ್ನು ಜಾರಿಗೊಳಿಸುತ್ತದೆ. ಆದರೆ ಮೇಂಟೆನೆನ್ಸ್( ನಿರ್ವಹಣೆ) ಗಾಗಿ ಅನುದಾನ ನೀಡಿತ್ತಿಲ್ಲ. ಹೀಗಾಗಿ ದಾನಿಗಳು ಈ ಯೋಜನೆಗೆ ನೆರವಾಗಬೇಕೆಂದು ಮನವಿ ಮಾಡಿದರು.
ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಜಿಲ್ಲಾ ಉದ್ತುವಾರಿ ವಿದ್ಯಾ ಚರಣ್ ಮಾತನಾಡಿ ಕೊರೋನಾ ನಂತರದಲ್ಲಿ ಜನರಲ್ಲಿ ಹೆಚ್ಚಾಗಿ ಆರೋಗ್ಯ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಸರಕಾರ ಯೋಜನೆ ಜಾರಿಗೊಳಿಸಿದೆ. ಪ್ರತಿ ಗ್ರಾ.ಪಂ.ಗೊಂದರಂತೆ ತಲಾ 15 ಸಾವಿರ ಬೆಲೆಯ ಕಿಟ್ ನೀಡಲಾಗುತ್ತಿದ್ದು. ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾರ್ಯಕರ್ತೆಯರು ತಪಾಸಣೆ ನಡೆಸಿದ ನಂತರ ಗ್ರಾ.ಪಂ. ಡೇಟಾ ಎಂಟ್ರಿ ಆಪರೇಟರ್ ಬಳಿ ನೊಂದಾಯಿಸಬೇಕು. ತಾಲೂಕು ಮಟ್ಟದಲ್ಲಿ ಸಂಸ್ಥೆ ವತಿಯಿಂದ ನಿರ್ವಹಣೆ ಮಾಡಿ ಆರೋಗ್ಯ ಇಲಾಖೆಗೆ ಸಮಗ್ರ ಮಾಹಿತಿ ರವಾನಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಗಿರೀಶ್. ತಹಸೀಲ್ದಾರ್ ಅಶೋಕ್ ಕುಮಾರ್ ಪಾಟೀಲ್. ಕೆ ಎಚ್ ಪಿ ಟಿ ಸಂಸ್ಥೆಯ ನವೀನ್. ವಸಂತಕುಮಾರ್ .ಜ್ಯೋತಿ. ಸಿಡಿಪಿಓ ರಶ್ಮಿ. ಗ್ರಾ.ಪಂ ಅಧ್ಯಕ್ಷರು. ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.