ನವದೆಹಲಿ: ಕಳೆದ ಹತ್ತು ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿರುವ ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ಅಮೃತಪಾಲ್ ಸಿಂಗ್ ಪೊಲೀಸರಿಗೆ ಶರಣಾಗಲಿದ್ದಾನೆ ಎಂಬ ಮಾಹಿತಿ ಹರಿದಾಡುತ್ತಿದ್ದು ಅಲ್ಲದೆ ಅಮೃತ್ ಪಾಲ್ ಪೊಲೀಸರಿಗೆ ಶರಣಾಗಲು ಪಂಜಾಬ್‌ಗೆ ಮರಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೋಶಿಯಾರ್‌ಪುರದ ಹಳ್ಳಿಯೊಂದರಲ್ಲಿ ಅಮೃತಪಾಲ್ ಸಿಂಗ್ ಮತ್ತು ಅವರ ಸಹಾಯಕರು ಅಲ್ಲಿ ಅಡಗಿರುವ ಸಾಧ್ಯತೆಯಿದೆ ಎಂಬ ಮಾಹಿತಿಯ ಮೇರೆಗೆ ಪಂಜಾಬ್ ಪೊಲೀಸರು ಮಂಗಳವಾರ ಹೋಶಿಯಾರ್‌ಪುರದ ಹಳ್ಳಿ ಸೇರಿದಂತೆ ಅನೇಕ ನೆರೆಯ ಪ್ರದೇಶಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿದ್ದು ಈ ವೇಳೆ ಅಮೃತಪಾಲ್ ಸಿಂಗ್ ಮತ್ತು ಅವರ ಸಹಾಯಕರು ತಮ್ಮ ವಾಹನವನ್ನು ಮರ್ನಾಯನ್ ಗ್ರಾಮದ ಗುರುದ್ವಾರದ ಬಳಿ ಬಿಟ್ಟು ಪರಾರಿಯಾಗಿದ್ದರೆಂದು ಹೇಳಲಾಗಿದೆ.
ಸದ್ಯ ಪೊಲೀಸರು ಅಮೃತ್ ಪಾಲ್ ಸಿಂಗ್ ಗಾಗಿ ಶೋಧ ಕಾರ್ಯ ಮುಂದುವರೆಸಿದ್ದು ಒಂದು ಮೂಲಗಳ ಪ್ರಕಾರ ಸಿಂಗ್ ಪಂಜಾಬ್ ಗೆ ಮರಳಿ ಬಂದಿದ್ದು ತಾನೇ ಪೊಲೀಸರ ಮುಂದೆ ಶರಣಾಗಲಿದ್ದಾನೆ ಎಂದು ಹೇಳಲಾಗುತ್ತಿದೆ ಆದರೂ ಪೊಲೀಸರು ಮಾತ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಇದನ್ನೂ ಓದಿ: ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ