Advertisement

ಅಮಾನಿಭೈರಸಾಗರ ಕೆರೆ ತುಂಬಲು 3 ಅಡಿಗಳಷ್ಟೆ ಬಾಕಿ

07:45 PM Jul 29, 2021 | Team Udayavani |

ಗುಡಿಬಂಡೆ: ತಾಲ್ಲೂಕಿನ ಜೀವ ನಾಡಿಯಾಗಿರುವ ಅಮಾನಿಭೈರಸಾಗರ ಕೆರೆ ತುಂಬಲು ಇನ್ನು ಕೇವಲ 3 ಅಡಿಗಳಷ್ಟೆ ಬಾಕಿ ಇದ್ದು, ಹೆಚ್ಚಿನದಾಗಿ ಮಳೆ ಆಗುತ್ತಿರುವುದರಿಂದ ತಾಲ್ಲೂಕಿನ ಜನ ಈ ಕೆರೆ ಕೊಡಿ ಹರಿಯಲು ಕಾತುರದಿಂದ ಕಾದು ಕುಳಿತ್ತಿದ್ದಾರೆ.

Advertisement

ಜೂನ್ ತಿಂಗನಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಗೆ ತಾಲ್ಲೂಕಿನ ಬಹುತೇಕ ಎಲ್ಲಾ ಕೆರೆಗಳು ತುಂಬಿ ಕೊಡಿ ಹರಿಯಲು ಸನಿಹವಾಗಿವೆ.

ತಾಲ್ಲೂಕಿನ ಜೀವನಾಡಿಯಾಗಿರುವ ಅಮಾನಿಬೈರಸಾಗರ ಕೆರೆಗೆ ದಕ್ಷಿಣ ಭಾಗದ ದರಬೂರು, ಎದರುಪಲ್ಲಿ ಮತ್ತು ಇತರೆ ಸಣ್ಣ ಪುಟ್ಟ ಕೆರೆ ತುಂಬಿ ಕೊಡಿ ಹರಿದರೆ ಸಾಕು, ಈ ಕೆರೆಯು ಕೊಡಿ ಹೋಗುತ್ತದೆ ಎಂಬ ಹಿರಿಯರ ಮಾತಿದ್ದು, ಈ ಕೆರೆಗಳು ತುಂಬಿ ಕೊಡಿ ಹರಿಯಲು ಇನ್ನೂ ಕೆಲವಷ್ಟೆ ಅಡಿಗಳು ಬಾಕಿಯಲ್ಲಿವೆ.

ಸುಮಾರು 2 ವರ್ಷಗಳಿಂದಲೂ ಈ ಕೆರೆ ಇನ್ನೇನು ಇಂದು ರಾತ್ರಿ ಮಳೆ ಬಂದರೆ ಸಾಕು ಕೊಡಿ ಹರಿಯುತ್ತದೆ ಎನ್ನುವಷ್ಟರಲ್ಲಿ ಹಿಂಗಾರು ಮಳೆ ಕೈ ಕೊಟ್ಟ ಕಾರಣ ಕೊಡಿ ಹೋಗದೆ ನಿಂತು ಹೋಗಿರುತ್ತದೆ.

3 ಅಡಿಗಳಷ್ಟೆ ಬಾಕಿ: ಮುಂಗಾರು ಮಳೆ ಪ್ರಾರಂಭಕ್ಕೂ ಮುನ್ನಾ ಕೆರೆ ತುಂಬಲು ಸುಮಾರು 6 ಅಡಿಗೂ ಹೆಚ್ಚು ನೀರು ಬೇಕಿದ್ದು, ಮುಂಗಾರು ಪ್ರಾರಂಭವಾದ ನಂತರ ಬಿದ್ದ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದು, ಕೆರೆ ತುಂಬಲು ಇನ್ನೂರು 3 ಅಡಿಗಳಷ್ಟೆ ಬಾಕಿ ಇದೆ.

Advertisement

ಅಂತರ್ಜಲ ವೃದ್ಧಿ: ಅಮಾನಿಬೈರಸಾಗರ ಕೆರೆ ತುಂಬಿ ಕೊಡಿ ಹರಿಯುವ ನೀರಿನಿಂದ ಸುಮಾರು ಸಣ್ಣ ಪುಟ್ಟ ಕೆರೆ ತುಂಬಿ, ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರು ವೃದ್ಧಿಯಾಗುತ್ತದೆ.

ಪ್ರವಾಸಿ ತಾಣವಾದ ಅಮಾನಿಭೈರಸಾಗರ: ಗುಡಿಬಂಡೆ ಬೆಂಗಳೂರಿನಿಂದ 95 ಕಿ.ಮೀ ದೂರದಲ್ಲಿದ್ದು, ಬೆಂಗಳೂರಿಗೆ 100 ಕಿ.ಮೀ ಅಂತರ ಒಳಗಿನ ಒಂದು ದಿನದ ಪ್ರವಾಸಕ್ಕೆ ನಂದಿ ನಂತರದ ಪ್ರವಾಸಿ ತಾಣವಾಗಿ ಗುಡಿಬಂಡೆ ತಾಲ್ಲೂಕಿನ ಸುರಸದ್ಮಗಿರಿ ಬೆಟ್ಟ, ಆವುಲಬೆಟ್ಟ, ಹಾಗೂ ಹತ್ತಿರದ ವಾಟದಹೊಸಹಳ್ಳಿ ಕೆರೆ ಹಾಗೂ ಅಮಾನಿಭೈರಸಾಗರ ಕೆರೆಯೂ ಸೇರ್ಪಡೆಗೊಂಡು, ವಾರಾಂತ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗಳು ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಬೇಟಿ ನೀಡುತ್ತಿದ್ದಾರೆ.

ರೈತರಿಗಿಲ್ಲ ಉಪಯೋಗ: ಸುಮಾರು ಹತ್ತು-ಇಪ್ಪತ್ತು ವರ್ಷಗಳ ಹಿಂದೆ ಅಮಾನಿಬೈರ ಸಾಗರ ಕೆರೆ ತುಂಬಿದರೆ, ಕೆರೆಯ ನೀರನ್ನು ಕೆರೆ ಅಚ್ಚುಕಟ್ಟಿನ ರೈತರಿಗೆ ಬೆಳೆಗಳಿಗೆ ನೀರು ಬಿಡುತ್ತಿದ್ದರು, ಇದರಿಂದ ತಾಲ್ಲೂಕಿನ ಯಾವುದೇ ಕೆಲಸವಿಲ್ಲದ ಜನರಿಗೆ ಕೃಷಿಯಿಂದಾದರೂ ಒಂದಷ್ಟು ಅದಾಯ ಪಡೆಯಬಹುದಾಗಿದ್ದು, ಆದರೆ ಇತ್ತೀಚಿಗೆ ಇಲ್ಲಿನ ಅಧಿಕಾರಿ ವರ್ಗದವರ ಬೇಜಾವ್ದಾರಿ ತನದಿಂದ ಕೆರೆಯ ನೀರನ್ನು ಬೆಳೆಗಳಿಗೆ ಬಿಡದೆ ರೈತರಿಗೆ ಯಾವುದೇ ಉಪಯೋಗ ವಾಗುತ್ತಿಲ್ಲ.

ಕೊಡಿ ಹರಿದರೆ ಹಬ್ಬದ ವಾತವರಣ: ಅಮಾನಿಭೈರಸಾಗರ ಕೆರೆ ಮೇಲ್ಭಾಗದಿಂದ ಭಾರತದ ನಕ್ಷೆ ಹೋಲುವಂತಿದ್ದು, ಈ ಕೆರೆ ತುಂಬಿ ಕೊಡಿ ಹರಿದರೆ, ಕೊಡಿ ನೀರು ನಿಲ್ಲುವವರೆಗೂ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ನೀರು ನೆಂದು ತೇಲುತ್ತಾರೆ, ಸುಮಾರು ವರ್ಷಗಳ ಹಿಂದೆ ಕೊಡಿ ಹರಿದ ಕೆರೆ ಈ ಭಾರಿಯಾದರೂ ಕೊಡಿ ಹರಿಯುತ್ತಾದೆಯೇ ಎಂದು ಜನರು ಕಾದು ಕುಳಿತ್ತಿದ್ದಾರೆ.

 

-ನವೀನ್ ಕುಮಾರ್, ಗುಡಿಬಂಡೆ

Advertisement

Udayavani is now on Telegram. Click here to join our channel and stay updated with the latest news.

Next