Advertisement
ಏನಿದು ಅಮಾಂಗ್ ಅಸ್?
Related Articles
Advertisement
ಈ ಗೇಮ್ ಪ್ರಸ್ತುತ ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಪ್ಲಾಟ್ ಫಾರ್ಮ್ ಲಭ್ಯವಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಉಚಿತವಾಗಿ ಲಭ್ಯವಿದೆ. ಹಾಗೆಯೇ, ವಿಂಡೋಸ್ ನಲ್ಲಿ ಬ್ಲೂಸ್ಟ್ಯಾಕ್ಸ್ ನಲ್ಲಿ ಉಚಿತ ಹಾಗೂ ಸ್ಟೀಮ್ ಸ್ಟೋರ್ ನಲ್ಲಿ 199 ರೂ ಗೆ ಲಭ್ಯವಿದೆ.
ಅಮಾಂಗ್ ಅಸ್ ಆಡುವುದು ಹೇಗೆ?
ಅಮಾಂಗ್ ಅಸ್ ಒಂದು ಚಾಣಾಕ್ಷರ ಆಟವಾಗಿದೆ. ಇದೊಂದು ಆನ್ಲೈನ್ ಗೇಮ್ ಆಗಿದ್ದು, ಇದರಲ್ಲಿ ಕೊನೆಯವರೆಗೆ ಬದುಕುಳಿಯುವವನೇ ವಿಜಯಿ. ಕನಿಷ್ಠ 4, ಗರಿಷ್ಠ 10 ಆಟಗಾರರು ಒಂದು ಕೋಣೆಯಲ್ಲಿ ಸೇರುತ್ತಾರೆ. ಅದರಲ್ಲಿ ಕನಿಷ್ಠ 1, ಗರಿಷ್ಠ 3 ಜನ ಇಂಪೋಸ್ಟರ್ ಆಗಿರುತ್ತಾರೆ. ಇದು ನಮ್ಮ ಆಯ್ಕೆಯಲ್ಲಿರುವುದಿಲ್ಲ. ಯಾಂತ್ರಿಕವಾಗಿಯೇ, 10 ಆಟಗಾರರಲ್ಲಿ 3 ಮಂದಿಯನ್ನು ಇಂಪೋಸ್ಟರ್ ಆಗಿ ಆಯ್ಕೆ ಮಾಡಲಾಗುತ್ತದೆ. ಆ ಮೂವರಿಗೆ ಬಿಟ್ಟರೆ, ಉಳಿದವರಿಗೆ ಇದು ಗೊತ್ತಿರುವುದಿಲ್ಲ. ಆ ಉಳಿದ ಆಟಗಾರರು, ‘ಇಂಪೋಸ್ಟರ್’ ಯಾರು ಎಂದು ಕಂಡುಹಿಡಿಯಬೇಕು.
ಕೋಣೆಯಲ್ಲಿ ಸೇರಿದ ಬಳಿಕ, ಗೇಮ್ ಹೋಸ್ಟ್ ಆಟಕ್ಕೆ ಚಾಲನೆ ನೀಡುತ್ತಾನೆ. ಆ ಮನೆಯೊಳಗೆ ಕೆಲವೊಂದಿಷ್ಟು ಟಾಸ್ಕ್ ಗಳು ಇರುತ್ತವೆ. ಎಲ್ಲಾ 10 ಆಟಗಾರರು ಅದನ್ನು ಮಾಡುತ್ತಾ ಇರಬೇಕು. ಈ ನಡುವೆ, ಇಂಪೋಸ್ಟರ್ ಗಳು ಕ್ರೀವ್ ಮೇಟ್ಸ್ ಗಳ ಮೇಲೆಯೇ ಕಣ್ಣಿಟ್ಟಿರುತ್ತಾರೆ. ಒಬ್ಬರೇ ಇರುವಾಗ ಅವರನ್ನು ಹೊಡೆದು ಬೀಳಿಸುತ್ತಾರೆ. ಇದನ್ನು ಯಾರಾದರೂ ಕಂಡರೆ, ಅವರು ತುರ್ತು ಸಭೆ ಕರೆದು, ಇಂಪೋಸ್ಟರ್ ಯಾರು ಎಂದು ಚರ್ಚಿಸಿ, ಅವರನ್ನು ಆಟದಿಂದ ಹೊರಗಟ್ಟುತ್ತಾರೆ. ಹೀಗೆ, ಇಂಪೋಸ್ಟರ್ ಆಗುರುವವರು ಕೊನೆಯವರೆಗೂ ಉಳಿದುಕೊಂಡರೆ ಅವರು ವಿಜಯಿ. ಹಾಗೆಯೇ, ಕ್ರೀವ್‌ಮೇಟ್‌ಗಳೂ, ಇಂಪೋಸ್ಟರ್ ಯಾರು ಎಂದು ಗುರುತಿಸಲು ಯಶಸ್ವಿಯಾದರೆ, ಅವರು ಗೆದ್ದಂತೆ.
ಇಂಪೋಸ್ಟರ್ ಎಂದರೇನು?
ಇಂಪೋಸ್ಟರ್ ಸಾಮಾನ್ಯವಾಗಿ ಎಲ್ಲರಂತೆ ಸಮಾನರಾಗಿ ಕಂಡರೂ, ಇತರರನ್ನು ಹೊಡೆಯುವ ಅವಕಾಶ ಆತನಲ್ಲಿರುತ್ತದೆ. ಆತನ ಕ್ರಿಯೆಯ ಮೂಲಕ ಮಾತ್ರ ಆತ ಇಂಪೋಸ್ಟರ್ ಎಂದು ಇತರರು ಪತ್ತೆಹಚ್ಚಬಹುದು.
ಒಟ್ಟಾರೆ, ಸಂಕ್ಷಿಪ್ತವಾಗಿ ಹೇಳುವುದಾದರೆ, ಅಮಾಂಗ್ ಅಸ್ ಒಂದು ಅತ್ಯಂತ ಸರಳ ಆನ್ಲೈನ್ ಮಲ್ಟಿಪ್ಲೇಯರ್ ಗೇಮ್ ಆಗಿದ್ದು, ಇದರಲ್ಲಿ ಮೋಸದಾಟ ಪ್ರಮುಖವಾಗಿದೆ. ತಮ್ಮ ಕ್ರೀವ್ ಮೇಟ್ಸ್‌ಗಳನ್ನೇ ವಂಚಿಸಿ, ಅವರನ್ನು ಹೊಡೆದುರುಳಿಸಿ, ಯಾರಿಗೂ ಶಂಕೆ ಬರದಂತೆ ನಟಿಸಿ ಆಡುವುದೇ ಅಮಾಂಗ್ ಅಸ್.