Advertisement
ಈಗ ಕಾಲೇಜಿನಲ್ಲಿ ಹೇಗಿದೆಯೋ ಗೊತ್ತಿಲ್ಲ. ನಾವು ಓದುವಾಗ-ಅಂದರೆ, ಎರಡೂವರೆ ದಶಕಗಳ ಹಿಂದೆ ಕಾಲೇಜಿನಲ್ಲಿ ಪರೀಕ್ಷೆಗೆ ಕೂರಲು ಶೇಕಡಾ ಅರವತ್ತರಷ್ಟು ಹಾಜರಾತಿ ಕಡ್ಡಾಯವಾಗಿತ್ತು. ಹಾಗೆಂದು ಮೊದಲೇ ತಿಳಿಸಿದ್ದರೂ ಹುಡುಗರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಏಕೆಂದರೆ ವರ್ಷದ ಕೊನೆಯಲ್ಲಿ ಅಧ್ಯಾಪಕರು, ಕನಿಕರದಿಂದ ಹೇಗೋ ಅಡ್ಜÓr… ಮಾಡಿ ಪರೀಕ್ಷೆಗೆ ಕೂರಿಸುತ್ತಿದ್ದರು. ಆದರೆ ಆ ಸಲ ಮಾತ್ರ ನಮ್ಮ ತರಗತಿಯ ಹುಡುಗರು ಸಿಕ್ಕಾಪಟ್ಟೆ ಬುದ್ಧಿವಂತರೂ, ಅಸಾಧ್ಯ ಹುಡುಗಾಟದವರೂ ಆಗಿದ್ದರು. ಲೆಕ್ಚರರ್‌ಗಳಿಗೆ ಏನೇನೋ ಕೇಳಿ ತಬ್ಬಿಬ್ಬು ಮಾಡುವುದು, ಕ್ಲಾಸಿನಲ್ಲಿ ಪಟಾಕಿ ಹಚ್ಚುವುದು, ಲೇಡಿ ಲೆಕ್ಚರರ್‌ಗೆ ಪ್ರೇಮಗೀತೆ ಹಾಡುವುದು… ಇಂಥವೇ ತರಲೆ ಕೆಲಸಗಳಿಗೆ ನಮ್ಮ ಕ್ಲಾಸು ಒಂದು ರೀತಿಯಲ್ಲಿ ವರ್ಲ್ಡ್ ಫೇಮಸ್ ಆಗಿತ್ತು ಎಂದರೆ ತಪ್ಪಾಗಲಾರದು. ಈ ತರಲೆ ಹುಡುಗರು ಕಾಲೇಜಿಗೆ ಬರುತ್ತಿದ್ದದ್ದು ಕೆಲವೇ ದಿನಗಳಾದರೂ, ಕೊಡುತ್ತಿದ್ದ ಕಾಟ ಹೇಳತೀರದು. ಅವರು ಓದಿನಲ್ಲೂ ಜಾಣರಿದ್ದರು, ಹಾಗಾಗಿ ಏನೂ ಮಾಡುವಂತಿರಲಿಲ್ಲ. ಕಡೆಗೆ, ತರಲೆ ಬುದ್ಧಿಯ ಜಾಣರಿಗೆ ಬುದ್ಧಿ ಕಲಿಸಲು ನಮ್ಮ ಲೆಕ್ಚರರ್ ಎಲ್ಲಾ ಸೇರಿ ಈ ರೀತಿ ಅಟೆಂಡೆನ್ಸ್ ಕಡ್ಡಾಯ ಮಾಡಿಸಿ ಶಾಕ್ ನೀಡಿದ್ದರು. ಹುಡುಗರೊಂದಿಗೆ ನಾವು ಮಾತನಾಡುತ್ತಿರಲಿಲ್ಲ. ಏಕೆಂದರೆ ಆ ಕಾಲದಲ್ಲಿ ಅದು ಅಪರಾಧವೇ. ಆದರೂ ದಿಕ್ಕೇ ತೋಚದೇ ಸುಮ್ಮನೇ ಚಿಂತಿಸುತ್ತಿದ್ದವರನ್ನು ಕಂಡು ಪಾಪ ಅನ್ನಿಸಿದ್ದು ಸುಳ್ಳಲ್ಲ. ಆ ದಿನ ಲೈಬ್ರರಿ, ಸೈಕಲ…ಸ್ಟಾÂಂಡ್, ಕ್ಯಾಂಟೀನ್ ಎಲ್ಲಾ ಕಡೆ ಇದೇ ಚರ್ಚೆ. “ಲೋ ಅಪ್ಪ- ಅಮ್ಮನಿಗೆ ಹೇಗೋ ಹೇಳ್ಳೋದು? ಮುಖಕ್ಕೆ ಮಂಗಳಾರತಿ ಗ್ಯಾರಂಟಿ’ ಎಂದು ಒಬ್ಬನೆಂದರೆ ಮತ್ತೂಬ್ಬ “ಬಯ್ಯೋದಿರಲಿ, ಚರ್ಮ ಸುಲೀತಾರೆ’ ಎಂದು ಕಂಗಾಲು. ಅಂತೂ ಹತ್ತು ಹನ್ನೆರಡು ಹುಡುಗರ ತಂಡ ಗುಂಪು ಕಟ್ಟಿಕೊಂಡು ಮುಂದೇನು ಎಂದು ಸಮಾಲೋಚನೆ ನಡೆಸಿದ್ದರು.
ಇದಾಗಿ ಎರಡು ದಿನಗಳಲ್ಲಿ ಆಫೀಸ್ ರೂಮಿನ ಬಳಿ ಎಲ್ಲಾ ಹುಡುಗರು ತಂತಮ್ಮ ಅಪ್ಪಅಥವಾ ಅಮ್ಮಂದಿರೊಂದಿಗೆ ಹಾಜರು. ಯಾರಿಗೂ ಮಕ್ಕಳ ಮೇಲೆ ಸಿಟ್ಟಿದ್ದಂತೆ ಏನೂ ಕಾಣಲಿಲ್ಲ. ಬದಲಿಗೆ ಖುಷಿಯಾಗಿ ನಮ್ಮನ್ನು ನೋಡಿ ಗೊತ್ತಿದ್ದವರಂತೆ ನಗುತ್ತಾ ಇದ್ದರು. ಮಕ್ಕಳೊಡನೆ ಸ್ನೇಹಿತರಂತೆ ಮಾತನಾಡುತ್ತಾ ಇದ್ದ ಅವರನ್ನು ಕಂಡು ನಮಗೆ ಒಂದು ಕ್ಷಣ ಆಶ್ಚರ್ಯದ ಜತೆ ಅಸೂಯೆಯೂ ಆಗಿತ್ತು. ಅಂತೂ ಎಲ್ಲರೂ, ಒಳಗೆ ಹೋಗಿ ಕಾರಣ ಬರೆದ ಪತ್ರ ಕೊಟ್ಟು, ಇನ್ನು ಹೀಗಾಗುವುದಿಲ್ಲ ಎಂಬ ಆಶ್ವಾಸನೆ ನೀಡಿದ್ದರು. ಅಲ್ಲಿಗೆ ಎಲ್ಲವೂ ಸರಿಯಾಯಿತು. ಮರುದಿನ ಲೆಕ್ಚರರ್ ತರಗತಿಗೆ ಬಂದು “ಅಪ್ಪ, ಅಮ್ಮ, ಅಜ್ಜಿ, ಅಜ್ಜ ಎಲ್ಲರಿಗೆ ಪೂಸಿ ಹೊಡೆದು ಟಿಬಿ, ನ್ಯುಮೋನಿಯಾ ಹೀಗೆ ಕಾಲೇಜಿಗೆ ಬಂದರೆ ಸತ್ತೇ ಹೋಗುತ್ತಿದ್ದಿರೇನೋ ಎನ್ನುವ ಕಾರಣ ನೀಡಿದ್ದೀರಿ. ದೊಡ್ಡವರಿಗೂ, ಮಕ್ಕಳ ಓದಿನ ಬಗ್ಗೆ ಚಿಂತೆ ಇದ್ದ ಹಾಗೆ ಕಾಣಲೇ ಇಲ್ಲ. ಪದೇ ಪದೇ ಈ ಸಲ ಪರೀಕ್ಷೆ ಬರೀಲಿ ಬಿಡಿ, ತುಂಬಾ ಒಳ್ಳೆ ಹುಡುಗರು ಅನ್ನುವ ರಾಗ ಬೇರೆ. ಹೋಗ್ಲಿ ಇನ್ನಾದರೂ ಸರಿಯಾದ ಶಿಸ್ತು ಕಲಿತು ಉದ್ಧಾರವಾಗಿ’ ಎಂದು ಫುಲ… ಫೀಲಿಂಗ್ ತುಂಬಿ ಹೇಳಿದ್ದರು.
Related Articles
Advertisement