Advertisement

ನಾಳೆ ಸಿದ್ದಾಪುರದಲ್ಲಿ ಅಮಿತ್‌ ಶಾ ರೋಡ್‌ ಶೋ: 10 ಸಾವಿರಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆ

01:01 AM Apr 28, 2023 | Team Udayavani |

ಕುಂದಾಪುರ/ಸಿದ್ದಾಪುರ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎ. 29ರಂದು ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಪೇಟೆಯಲ್ಲಿ ರೋಡ್‌ ಶೋ ನಡೆಸುವರು.

Advertisement

ಕಟಪಾಡಿಯಲ್ಲಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಸಿದ್ದಾಪುರಕ್ಕೆ ಬರಲಿದ್ದು, ಸಂಜೆ 4 ಗಂಟೆಗೆ ಪೇಟೆಯಲ್ಲಿ ರೋಡ್‌ ಶೋ ನಡೆಸಿ ಸಿದ್ದಾಪುರ ಸರ್ಕಲ್‌ನಲ್ಲಿ ತೆರೆದ ವಾಹನದಲ್ಲೇ ಜನರನ್ನುದ್ದೇಶಿಸಿ ಮಾತನಾಡುವರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಸಹಿತ ಹಲವರು ಪಾಲ್ಗೊಳ್ಳಲಿದ್ದು, 10 ಸಾವಿರಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಮಚ್ಚಿಂದ್ರ ಮತ್ತು ಡಿವೈಎಸ್‌ಪಿ ಬೆಳ್ಳಿಯಪ್ಪ ಅವರು ಭೇಟಿ ನೀಡಿ, ಭದ್ರತೆಯ ಪೂರ್ವ ತಯಾರಿಯ ಬಗ್ಗೆ ಪರಿಶಿಲಿಸಿದರು. ಶಂಕರನಾರಾಯಣ, ಅಮಾಸೆಬೈಲು ಮತ್ತು ಕಂಡೂÉರು ಪಿಎಸ್‌ಐಗಳು ಉಪಸ್ಥಿತರಿದ್ದರು.

ಸರಕಾರಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಸಚಿವರಿಗೆ ಜಡ್‌ ಪ್ಲಸ್‌ ಭದ್ರತೆ ಇರುವುದರಿಂದ 6 ಮಂದಿ ಇನ್‌ಸ್ಪೆಕ್ಟರ್‌ಗಳು, 20 ಮಂದಿ ಪಿಎಸ್‌ಐಗಳು, 160 ಮಂದಿ ಪೊಲೀಸ್‌ ಸಿಬಂದಿ, ಹಾಗೂ 100ಕ್ಕೂ ಹೆಚ್ಚು ಡಿಆರ್‌ ಪೊಲೀಸರನ್ನು ಬಿಗಿ ಭದ್ರತೆಗೆ ಬಳಸಲಾಗುತ್ತಿದೆ.

ಶನಿವಾರದಂದು ಸಿದ್ದಾಪುರ ಸುತ್ತಲಿನ ಬಾರ್‌ಗಳು ಬಂದ್‌ ಆಗಲಿವೆ. ಬಸ್‌ ನಿಲ್ದಾಣದಲ್ಲಿ ಮತಯಾಚನೆ ಮಾಡುವುದರಿಂದ ಬಸ್‌ ನಿಲ್ದಾಣದ ಪರಿಸರದ ಅಂಗಡಿ-ಮುಂಗಟ್ಟುಗಳು ಬಂದ್‌ ಆಗಲಿವೆ.

Advertisement

ಬದಲಿ ಸಂಚಾರ ವ್ಯವಸ್ಥೆ: ಸಿದ್ದಾಪುರ ಪೇಟೆಯಲ್ಲಿ ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ವಾಹನ ಸಂಚಾರ ಬದಲಿ ವ್ಯವಸ್ಥೆ ಮಾಡಲಾಗಿದೆ. ಕುಂದಾಪುರ ಹಾಗೂ ಉಡುಪಿ, ಬಾಕೂìರು ಮಾರ್ಗದಿಂದ ಆಗಮಿಸುವ ವಾಹನಗಳನ್ನು ಆಂಪಾರು ಪೇಟೆಯಲ್ಲಿ ಎಡ ಭಾಗಕ್ಕೆ ತಿರುಗಿಸಿ, ನೇರಳಕಟ್ಟೆಯ ಮೂಲಕ ಭಾಂಡ್ಯ, ಆಜ್ರಿಯ ಮೂಲಕ ಸಾಗಿ ಸಿದ್ದಾಪುರ ಕಮಲಶಿಲೆ ಕ್ರಾಸ್‌ನಲ್ಲಿ ರಾಜ್ಯ ಹೆದ್ದಾರಿಗೆ ಸೇರಿಕೊಳ್ಳಬೇಕು. ಶಿವಮೊಗ್ಗ ಹಾಗೂ ಘಟ್ಟದ ಮೇಲಿನಿಂದ ಬರುವ ವಾಹನಗಳನ್ನು ಕೂಡ ಇದೆ ಮಾರ್ಗವಾಗಿ ಸಾಗಿ, ಕುಂದಾಪುರ, ಬಾಕೂìರು, ಉಡುಪಿಗೆ ಸಾಗಬೇಕು.

ರೋಡ್‌ ಶೋಗೆ ಶಂಕರನಾರಾಯಣ ಮತ್ತು ಅಮಾಸೆ ಬೈಲು ಕಡೆಯಿಂದ ಬರುವವರಿಗೆ ಕಳಿನಜೆಡ್ಡು ರಸ್ತೆಯಲ್ಲಿರುವ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಅಂಪಾರು ಕಡೆಯಿಂದ ಬರುವ ವಾಹನಗಳಿಗೆ ಸಿದ್ದಾಪುರ ಪೇಟೆಯ ಹತ್ತಿರ ಇರುವ ಚಂದ್ರಮೌಳಿ ಕಾಂಪ್ಲೆಕ್‌ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ನಾಳೆ ಉಡುಪಿಗೆ ಶಾ ಭೇಟಿ
ಉಡುಪಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎ.29 ರಂದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಜಿಲ್ಲೆಗೆ ಆಗಮಿಸಲಿದ್ದು, ಕಾಪು ಕ್ಷೇತ್ರದ ಕಟಪಾಡಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಸಾವಿರಾರು ಜನ ಭಾಗವಹಿಸುವ ಸಾಧ್ಯತೆ ಇದೆ. ಕಟಪಾಡಿ ಸಮೀಪದ ಗ್ರೀನ್‌ವ್ಯಾಲಿ ಮೈದಾನಕ್ಕೆ ಗುರುವಾರ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ, ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್‌ ನಾಯಕ್‌, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್‌ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next