Advertisement

ಮಹಿಳೆಯರಿಗೆ ಕಿರುಕುಳ ಸಲ್ಲದು

06:00 AM Oct 12, 2018 | Team Udayavani |

ಮುಂಬೈ/ಪೆನ್ಸೆಲ್ವೇನಿಯಾ: ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡುವುದು ಸಮಂಜಸ ಎನಿಸದು ಎಂದು ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಗುರುವಾರ ಹೇಳಿದ್ದಾರೆ. ಕೆಲಸದಲ್ಲಿ ಸ್ಥಳದಲ್ಲಿ ನಡೆಯುವ ಇಂಥ ಪ್ರಕರಣಗಳನ್ನು ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಇಂಥ ಪ್ರಕರಣಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್‌ ಮಾಡಿದ್ದಾರೆ. ತನುಶ್ರೀ ದತ್ತಾ ಪ್ರಕರಣದ ಆರಂಭದಲ್ಲಿ ಅವರು ಪ್ರತಿಕ್ರಿಯೆಗೆ ನಿರಾಕರಿಸಿದ್ದರು

Advertisement

ಎಫ್ಐಆರ್‌: ನಟಿ ತನುಶ್ರೀ ದತ್ತಾರಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟ ನಾನಾ ಪಟೇಕರ್‌, ನಿರ್ದೇಶಕ ರಾಕೇಶ್‌ ಸಾರಂಗ್‌, ನಿರ್ಮಾಪಕ ಸಮಿ ಸಿದ್ದಿಕಿ ಹಾಗೂ ನೃತ್ಯ ನಿರ್ದೇಶಕ ಗಣೇಶ್‌ ಆಚಾರ್ಯ ವಿರುದ್ಧ ಪೊಲೀಸರು ಎಫ್ಐಆರ್‌ ದಾಖಲಿಸಿದ್ದು, ಶೀಘ್ರವೇ ವಿಚಾರಣೆಗೆ ಕರೆ ಕಳುಹಿಸುವುದಾಗಿ ಹೇಳಿದ್ದಾರೆ.

ಅಮೀರ್‌ ಹೊರಕ್ಕೆ: ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್‌ ನಿರ್ದೇಶಕ ಸುಭಾಷ್‌ ಕಪೂರ್‌ ನಿರ್ಮಿಸಲು ಉದ್ದೇಶಿಸಿದ್ದ ಗುಲ್ಶನ್‌ ಕುಮಾರ್‌ ಬಯೋಪಿಕ್‌ ಯೋಜನೆಯಿಂದ ಹೊರಬರಲು ನಟ-ನಿರ್ಮಾಪಕ ಅಮೀರ್‌ ಖಾನ್‌- ಕಿರಣ್‌ ರಾವ್‌ ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅವರು ಕಪೂರ್‌ ಹೆಸರು ಮತ್ತು ಕಿರುಕುಳ ಪ್ರಕರಣದ ವಿವರ ಹೇಳಿಕೆಯಲ್ಲಿ ಪ್ರಸ್ತಾಪ ಮಾಡಿಲ್ಲ.  ಮಿ ಟೂ ವಿವಾದದ ಹಿನ್ನೆಲೆಯಲ್ಲಿ ನಮ್ಮ ಮುಂದಿನ ಯೋಜನೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದಿದ್ದಾರೆ. 

ಕಂಗನಾ ಕಿಡಿ: ನಟ ಹೃತಿಕ್‌ ರೋಷನ್‌ ವಿರುದ್ಧ ಲೈಂಗಿಕ ಆರೋಪ ಹೊರಿಸಿ ಕಳೆದ ವರ್ಷ ನ್ಯಾಯಾಲಯದ ಮೆಟ್ಟಿಲೇರಿದ್ದ ನಟಿ ಕಂಗನಾ ರಣಾವತ್‌, ಮತ್ತೆ ಕಿಡಿಕಾರಿದ್ದು, ನವ ನಟಿಯ ರನ್ನು ಹೆಂಡತಿಯಂತೆ ನಡೆಸಿಕೊಳ್ಳಲು ಆಶಿಸುವ ಹೃತಿಕ್‌ ಜತೆಗೆ ಯಾರೂ ಕೆಲಸ ಮಾಡಕೂಡದೆಂದು ಆಗ್ರಹಿಸಿದ್ದಾರೆ.

ಅಧ್ಯಕ್ಷ ಟ್ರಂಪ್‌ ಲೇವಡಿ
ಮಿ ಟೂ ಅಭಿಯಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಲೇವಡಿ ಮಾಡಿದ್ದಾರೆ. ಬುಧವಾರ ಅಮೆರಿಕದ ಪೆನ್ಸೆಲ್ವೇನಿಯಾದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, ಮಾತನಾಡುವುದಕ್ಕೆ ಮೊದಲು ಸ್ವಯಂ ನಿಷೇಧಕ್ಕೆ ಒಳಪಡಿಸಿಕೊಳ್ಳಬೇಕು. ಏಕೆಂದರೆ ಈ ಚಳವಳಿಯ ನಿಯಮಗಳು ಮಾಧ್ಯಮ ಗಳಿಂದ ರೂಪಿತಗೊಂಡಿವೆ ಎಂದಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಪೆನ್ಸೆಲ್ವೇನಿಯಾದಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಗೆ ಗೆಲುವು ಸಾಧ್ಯವಾಗಲಿಲ್ಲ. ಮಾಧ್ಯಮಗಳನ್ನು ಹೊರತು ಪಡಿಸಿ, ಆ ಪದ ಬಳಕೆ ಮಾಡುವುದಾಗಿ ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next