Advertisement

ಅಮಿತ್ ಶಾ ಅವರು ಧರಿಸುವ ಮಫ್ಲರ್ ಬೆಲೆ 80,000 ರೂಪಾಯಿ :ಅಶೋಕ್ ಗೆಹ್ಲೋಟ್

09:57 PM Sep 12, 2022 | Team Udayavani |

ಜೈಪುರ: ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ಮುಂದುವರೆದಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಧರಿಸುವ ಮಫ್ಲರ್ ಬೆಲೆ 80,000 ರೂಪಾಯಿ ಎಂದು ತಿರುಗೇಟು ನೀಡಿದ್ದಾರೆ.

Advertisement

ಚುರುದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ಭಾರತ್ ಜೋಡೋ ಯಾತ್ರೆಗೆ ಜನರಿಂದ ಅಸಾಧಾರಣ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ಆಡಳಿತಾರೂಢ ಬಿಜೆಪಿ ಚಿಂತಿತವಾಗಿದೆ. ಅವರು ರಾಹುಲ್ ಗಾಂಧಿಯವರ ಟೀ ಶರ್ಟ್ ಬಗ್ಗೆ ಮಾತನಾಡುತ್ತಿದ್ದಾರೆ, ಅವರು ಸ್ವತಃ 2.5 ಲಕ್ಷ ರೂ. ಸನ್ ಗ್ಲಾಸ್ ಮತ್ತು 80,000 ರೂ. ಮಫ್ಲರ್ ಧರಿಸುತ್ತಾರೆ. ಗೃಹ ಸಚಿವರು ಧರಿಸಿರುವ ಮಫ್ಲರ್ ಬೆಲೆ 80,000 ರೂ.ಎಂದು ಹೇಳಿದ್ದಾರೆ.

”ಬಿಜೆಪಿಯವರು ಟಿ-ಶರ್ಟ್‌ನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಯಾತ್ರೆಗೆ ಸಾರ್ವಜನಿಕ ಪ್ರತಿಕ್ರಿಯೆ ಅಸಾಧಾರಣವಾಗಿದೆ. ಬಿಜೆಪಿ ನಾಯಕರು ವಿಚಲಿತರಾಗಿದ್ದಾರೆ.  ಪ್ರಧಾನಿ, ಗೃಹ ಸಚಿವರು ಮತ್ತು ಇತರ ನಾಯಕರು ತಮ್ಮ ಕೆಲಸವನ್ನು ಬಿಟ್ಟು ರಾಹುಲ್ ಗಾಂಧಿ ಅವರ ಟೀಕೆ ಮಾಡುತ್ತಿದ್ದಾರೆ” ಎಂದರು.

ಕಳೆದ ವಾರ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ 41,000 ರೂಪಾಯಿಗೂ ಹೆಚ್ಚು ಬೆಲೆಯ ಟೀ ಶರ್ಟ್ ಧರಿಸಿದ್ದರು ಎಂದು ಬಿಜೆಪಿ ಶುಕ್ರವಾರ ಆರೋಪಿಸಿದ ನಂತರ ಮಾತಿನ ಸಮರ ಪ್ರಾರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next