Advertisement

ಎಲ್ಲರ ಕಣ್ಣು ಈಗ ದಿಲ್ಲಿ ಮೇಲೆ! ಅಮಿತ್‌ ಶಾ ಪ್ರವಾಸದ ವೇಳೆ ಸಿಗದ ಸ್ಪಷ್ಟ ಚಿತ್ರಣ

09:15 AM May 05, 2022 | Team Udayavani |

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ಹಾಗೂ ವಿಸ್ತರಣೆ ಕುರಿತು ಈಗ ಮುಖ್ಯಮಂತ್ರಿ ಸಹಿತ ರಾಜ್ಯ ಬಿಜೆಪಿ ನಾಯಕರು ದಿಲ್ಲಿ ಕಡೆ ಮುಖ ಮಾಡುವಂತಾಗಿದೆ.

Advertisement

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬೆಂಗಳೂರಿಗೆ ಬಂದು ಹೋದರೂ ರಾಜ್ಯದಲ್ಲಿ ಎದ್ದಿದ್ದ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗದೇ ಇರುವುದು ಸಚಿವಾಕಾಂಕ್ಷಿಗಳಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.

ಅಮಿತ್‌ ಶಾ ದಿಲ್ಲಿಗೆ ತೆರಳಿ ಪ್ರಧಾನಿ ಜತೆಗೆ ಚರ್ಚಿಸಿ ಸಂಪುಟ ಪುನಾರಚನೆ ಬಗ್ಗೆ ತಿಳಿಸುವುದಾಗಿ ಮುಖ್ಯಮಂತ್ರಿಗೆ ಹೇಳಿದ್ದಾರೆ ಎನ್ನಲಾಗಿದೆ. ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ  ಗುರುವಾರ ರಾತ್ರಿ ದಿಲ್ಲಿಗೆ ಮರಳಲಿದ್ದಾರೆ.

ಪ್ರಧಾನಿ ಒಪ್ಪಿದರೆ ಮೇ 6ರಿಂದ 10ರೊಳಗೆ ಸಂಪುಟಕ್ಕೆ ಹೊಸಬರ ಸೇರ್ಪಡೆಯಾಗಬಹುದು. ಆದ್ದ ರಿಂದಲೇ ಗುರುವಾರ ನಡೆಯಬೇಕಿದ್ದ ಸಂಪುಟ ಸಭೆಯನ್ನು ಮೇ 11ಕ್ಕೆ ಮುಂದೂಡಲಾಗಿದೆ ಎನ್ನಲಾಗಿದೆ.

ಬಿಎಸ್‌ವೈ ಬೇಸರ
ಅಮಿತ್‌ ಶಾ ಬಂದು ಹೋದರೂ  ಗೊಂದಲಗಳಿಗೆ ಸ್ಪಷ್ಟ ಉತ್ತರ ದೊರೆಯದೆ ಇರುವುದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂತಹ ಸಂದರ್ಭದಲ್ಲಿ  ಗೊಂದಲ ಮುಂದುವರಿಸಿದರೆ ಪಕ್ಷ ಸಂಘಟನೆ, ಪ್ರವಾಸ, ಸರಕಾರದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಯಾವುದಾದರೂ ಒಂದು ನಿರ್ಣಯವನ್ನು ಸ್ಪಷ್ಟಪಡಿಸಬೇಕಿತ್ತು ಎಂದು ಆಪ್ತರ ಬಳಿ ಹೇಳಿದ್ದಾರೆ ಎನ್ನಲಾಗಿದೆ.

Advertisement

ಯಾವುದೇ ಬದಲಾವಣೆಯಿಲ್ಲ
ಬಿಜೆಪಿಯ ಒಂದು ವರ್ಗದ ಪ್ರಕಾರ, ಅಮಿತ್‌ ಶಾ ಜತೆಗೆ  ಯಾವುದೇ ಗಂಭೀರ ಚರ್ಚೆ ನಡೆ ದಿಲ್ಲ. ಸಂಪುಟ ಪುನಾರಚನೆಯೂ ನಡೆಯುವುದಿಲ್ಲ. ಈಗಿರುವ ವ್ಯವಸ್ಥೆ ಯಲ್ಲಿ ಯಾವುದೇ ಬದಲಾವಣೆ ಯಿಲ್ಲ. ಪ್ರಸ್ತುತ  ಮುಂದಿನ ಚುನಾ ವಣೆಯ ಕಡೆಗೆ ಹೆಚ್ಚಿನ ಗಮನಹರಿಸಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next