Advertisement

ಲೋಕಸಭೆ ಜತೆಗೇ 11 ರಾಜ್ಯಗಳಿಗೆ ಚುನಾವಣೆ ?

06:00 AM Aug 14, 2018 | Team Udayavani |

ಹೊಸದಿಲ್ಲಿ: ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುವುದು ಖಚಿತ ಎನ್ನಲಾಗುತ್ತಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೋಮವಾರ ಕಾನೂನು ಆಯೋಗಕ್ಕೆ ಸಲಹೆ ನೀಡಿ 8 ಪುಟಗಳ ಪತ್ರ ಬರೆದಿರುವಂತೆಯೇ ಈ ಬೆಳವಣಿಗೆ ನಡೆದಿದೆ. 
ಹೆಸರು ಬಹಿರಂಗಪಡಿಸಲಿಚ್ಛಿಸದ ಬಿಜೆಪಿ ನಾಯಕ ರೊಬ್ಬರು ಈ ಮಾಹಿತಿ ನೀಡಿದ್ದಾರೆ ಎಂದು “ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

Advertisement

ಕೆಲವು ರಾಜ್ಯಗಳ ವಿಧಾನಸಭೆಗಳ ಚುನಾವಣೆ ಮುಂದೂಡುವುದು ಅಥವಾ ಅವಧಿಗೆ ಮುಂಚಿತ ವಾಗಿ ನಡೆಸುವುದು ಹೇಗೆ ಎಂಬ ಬಗ್ಗೆ ಸಮಾಲೋಚಿ ಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಛತ್ತೀಸ್‌ಗಢ ವಿಧಾನಸಭೆ ಅವಧಿ ಜ. 5, ಮಧ್ಯ ಪ್ರದೇಶದ್ದು ಜ. 7, ರಾಜಸ್ಥಾನದ್ದು ಜ. 20ರಂದು ಮುಕ್ತಾಯವಾಗಲಿದೆ. ಆಂಧ್ರಪ್ರದೇಶ ಜೂ. 18, ತೆಲಂಗಾಣ ಜೂ. 6, ಒಡಿಶಾ ಜೂ. 11, ಹರಿಯಾಣ ನ. 2, ಝಾರ್ಖಂಡ್‌ 2020 ಜ. 5, ಮಹಾರಾಷ್ಟ್ರ, 2019ರ ನ. 9, ಬಿಹಾರ 2020ರ ನ. 29ರಂದು ಮುಕ್ತಾಯವಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರಕಾರ ಪತನವಾಗಿರು ವುದರಿಂದ ಅಲ್ಲಿ ರಾಜ್ಯಪಾಲರ ಆಳ್ವಿಕೆ ಇದೆ.

ಕಾಂಗ್ರೆಸ್‌ ಆಡಳಿತದಲ್ಲಿರುವ ಮಿಜೋರಾಂ ವಿಧಾನಸಭೆ ಅವಧಿ ಡಿ.15ಕ್ಕೆ ಮುಕ್ತಾಯವಾಗಲಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ರಾಜ್ಯಗಳಲ್ಲಿ ಸದ್ಯ ಬಿಜೆಪಿ ಸರಕಾರ ಇದೆ. ಅಲ್ಪಾವಧಿಗೆ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ, ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆ ನಡೆಸಲಾಗುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಲೋಕಸಭೆಯ ನಿವೃತ್ತ ಸೆಕ್ರೆಟರಿ ಜನರಲ್‌ ಮತ್ತು ಸಾಂವಿಧಾನಿಕ ತಜ್ಞ ಪಿ.ಡಿ.ಟಿ. ಆಚಾರ್ಯ ಕೆಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಪ್ರಸ್ತಾಪದ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಮಾತ್ರ ಅಂಥ ಕ್ರಮ ಅನುಸರಿಸಲು ಅವಕಾಶವಿದೆ ಎಂದಿದ್ದಾರೆ. ಕಾಂಗ್ರೆಸ್‌, ಇತರ ಕೆಲವು ಪ್ರತಿಪಕ್ಷಗಳು ಈ ಪ್ರಸ್ತಾಪಕ್ಕೆ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿವೆ.

ಕಾನೂನು ಆಯೋಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಪತ್ರ
ಏಕಕಾಲದಲ್ಲಿ ಚುನಾವಣೆ ಸೂಕ್ತ. ಇದರಿಂದ ವರ್ಷವಿಡೀ ಚುನಾವಣೆಯ ಗುಂಗು ತಪ್ಪಿಸ ಬಹುದು ಎಂದು ಶಾ ಕಾನೂನು ಆಯೋಗಕ್ಕೆ 8 ಪುಟಗಳ ಪತ್ರ ಬರೆದಿದ್ದಾರೆ. ಇದು ಕಲ್ಪನೆಯಲ್ಲ. ಅನುಷ್ಠಾನಗೊಳಿಸಲು ಸಾಧ್ಯವಿದೆ ಎಂದು ಪತ್ರದಲ್ಲಿ ಪ್ರಸ್ತಾವಿಸಿದ್ದಾರೆ. ಈ ವಿಚಾರಕ್ಕೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next