Advertisement

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

01:46 AM Oct 24, 2021 | Team Udayavani |

ಶ್ರೀನಗರ: ಜಮ್ಮು – ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಇದೇ ಮೊದಲ ಬಾರಿಗೆ ಅಲ್ಲಿಗೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಥಳೀಯ ಮಟ್ಟದ ಭದ್ರತ ವ್ಯವಸ್ಥೆ, ನಾಗರಿಕರ ಹತ್ಯೆ ಮತ್ತಿತರ ವಿಚಾರಗಳ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ.

Advertisement

ಜಮ್ಮು – ಕಾಶ್ಮೀರದ ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆಯ ಅನಂತರ ರಾಜ್ಯ ಸ್ಥಾನಮಾನವನ್ನು ಮರಳಿ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಶನಿವಾರ ಬೆಳಗ್ಗೆ ಶ್ರೀನಗರಕ್ಕೆ ಆಗಮಿಸಿದ ಶಾ ಅವರನ್ನು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಸ್ವಾಗತಿಸಿದರು. ಬಳಿಕ ಅಮಿತ್‌ ಶಾ ಅವರು ನಾಗರಿಕರ ಸರಣಿ ಹತ್ಯೆಯ ಬಗ್ಗೆ ರಾಜಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.

ಭಯೋತ್ಪಾದನೆಯ ನಿಯಂತ್ರಣದ ಬಗ್ಗೆ ಒತ್ತಿ ಹೇಳಿದ ಅಮಿತ್‌ ಶಾ, ಪೊಲೀಸರು ಮತ್ತು ಭದ್ರತ ಪಡೆಗಳ ನಡುವೆ ಸಮನ್ವಯ ಕಾಯ್ದುಕೊಳ್ಳುವಂತೆ ಸೂಚಿಸಿದರು. ಈ ಉನ್ನತ ಮಟ್ಟದ ಸಭೆಯಲ್ಲಿ ಭಯೋತ್ಪಾದನೆ, ಹೆಚ್ಚುತ್ತಿರುವ ಉಗ್ರವಾದದ ಆತಂಕ ಮತ್ತು ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಇದನ್ನೂ ಓದಿ:ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

Advertisement

ಬಳಿಕ ಭದ್ರತ ಪಡೆಗಳನ್ನು ಉದ್ದೇಶಿಸಿ ಮಾತನಾಡಿದ ಶಾ, ತ್ವರಿತಗತಿಯಲ್ಲಿ ಉಗ್ರರನ್ನು ಸದೆಬಡಿಯುವಂತೆ, ಜನರಲ್ಲಿ ಹೆಚ್ಚುತ್ತಿರುವ ಧರ್ಮಾಂಧತೆಯನ್ನು ನಿಯಂತ್ರಿಸುವಂತೆ, ಕಣಿವೆ ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಬೇಕು, ನಾಗರಿಕರ ಹತ್ಯೆಗಳನ್ನು ತಡೆಯಬೇಕು ಎಂದು ಸೂಚಿಸಿದರು.

ಸ್ಥಳೀಯರೊಂದಿಗೆ ಸಂವಾದ ನಡೆಸಿದ ಅಮಿತ್‌ ಶಾ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ಪ್ರಸ್ತಾವಿಸಿದರು. ಜಮ್ಮು – ಕಾಶ್ಮೀರಕ್ಕೆ ಇದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಇದು ಭಯೋತ್ಪಾದನೆ, ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ತೊಲಗಿಸಿದೆ. ಇಲ್ಲಿನ ಯುವಕರು ರಾಜ್ಯದ ಅಭಿವೃದ್ಧಿಯಲ್ಲಿ ಕೈಜೋಡಿಸ ಬೇಕು ಎಂದು ಕರೆ ನೀಡಿದರು. ಜೂ. 22ರಂದು ಉಗ್ರರ ಗುಂಡಿಗೆ ಬಲಿಯಾದ ಪೊಲೀಸ್‌ ಅಧಿಕಾರಿ ಪರ್ವೇಜ್‌ ಅಹ್ಮದ್‌ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next