Advertisement

ಬಿಜೆಪಿ ನಾಯಕರಿಗೆ ಅಮಿತ್‌ ಶಾ ಟಾಸ್ಕ್

06:00 AM Jul 18, 2018 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20 ರಿಂದ 25 ಸ್ಥಾನ ಗೆಲ್ಲುವ ಟಾರ್ಗೆಟ್‌ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌, ರಾಜ್ಯ ನಾಯಕರಿಗೆ 23 ಅಂಶಗಳ ಕಾರ್ಯಯೋಜನೆ ನೀಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ 19 ಅಂಶಗಳ ಕಾರ್ಯಯೋಜನೆ ನೀಡಿದ್ದ ಅಮಿತ್‌ ಶಾ, ಇದೀಗ ಇನ್ನೂ ನಾಲ್ಕು ಅಂಶ ಸೇರಿಸಿದ್ದಾರೆಂದು ಮೂಲಗಳು ತಿಳಿಸಿವೆ.

Advertisement

ಲೋಕಸಭೆ ಚುನಾವಣೆಗೆ ಸಿದಟಛಿತೆ ಆರಂಭಿಸುವಂತೆ ನಿರ್ದೇಶನ ನೀಡಿರುವ ಅವರು, ಪ್ರತಿ ಲೋಕಸಭೆ ಕ್ಷೇತ್ರಕ್ಕೆ ಶಾಸಕರು, ರಾಜ್ಯ ಪದಾಧಿಕಾರಿಗಳು, ಕೋರ್‌ ಕಮಿಟಿ ಸದಸ್ಯರನ್ನು ಉಸ್ತುವಾರಿಯಾಗಿ ನೇಮಿಸಲು ನಿರ್ದೇಶಿಸಿದ್ದಾರೆ ಎಂದು ಹೇಳಲಾಗಿದೆ. 23 ಅಂಶಗಳೇನು?: ಪ್ರಮುಖವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಂಸದರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿನ ವೈಫ‌ಲ್ಯಗಳ ಚಾರ್ಚ್‌ಶೀಟ್‌ ಸಿದಟಛಿಪಡಿಸುವುದು. ಜತೆಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ವೈಫ‌ಲ್ಯ ಅಂಕಿ-ಅಂಶಗಳ ಸಮೇತ ಜನರ ಮುಂದಿಡುವುದು. ಸಾಮಾಜಿಕ ಜಾಲತಾಣ ಪರಿಣಾಮಕಾರಿಯಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಆ ವಿಭಾಗ ನಿರ್ವಹಿಸುವವರ ಕಾರ್ಯಾಗಾರ ಮಾಡುವುದು.  ಸಾಮಾಜಿಕ ಜಾಲತಾಣ ಮೂಲಕ ಬಿಜೆಪಿ ಪ್ರಣಾಳಿಕೆ
ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಾರ್ಯಕ್ರಮ ಹಾಗೂ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಸಂಬಂಧ ಕ್ರಮ ಕೈಗೊಳ್ಳಲು
ಸೂಚಿಸಲಾಗಿದೆ.

ವಾಟ್ಸ್‌ಅಪ್‌ ಗ್ರೂಪ್‌ಗ್ಳ ರಚನೆ, ಚುನಾವಣೆ ವಿಸ್ತಾರಕರ ಜತೆ ವಿಚಾರ ವಿನಿಮಯ ಮಾಡಿಕೊಳ್ಳುವುದು. ಪೇಜ್‌ ಪ್ರಮುಖರಿಗೆ ಹೆಚ್ಚಿನ ಹೊಣೆಗಾರಿಕೆ
ವಹಿಸುವುದು. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 8 ರಿಂದ 10 ಪ್ರಮುಖರ ಕೋರ್‌ ಕಮಿಟಿ ರಚನೆ. ಮತಗಟ್ಟೆಯ ಪ್ರತಿ ಬೂತ್‌ ಅಧ್ಯಕ್ಷರಿಗೆ ಹೆಚ್ಚಿನ ಹೊಣೆಗಾರಿಕೆ ನೀಡುವುದು. ನವಶಕ್ತಿ ಸಮಾವೇಶ ಕಡ್ಡಾಯವಾಗಿ ಆಯೋಜಿಸುವುದು. ಉಸ್ತುವಾರಿಗಳು ವಾರದಲ್ಲಿ ವಾಸ್ತವ್ಯ ಸಹಿತ ಎರಡು ದಿನ ಪ್ರವಾಸ, ಪ್ರತಿ ಮತಗಟ್ಟೆಗೆ ಶಕ್ತಿಕೇಂದ್ರದ ಪ್ರಮುಖರ ನೇಮಕ, ನಿರಂತರ ಸಭೆ, ಶಕ್ತಿ ಕೇಂದ್ರದ ಪ್ರಮುಖರು ವಾರದಲ್ಲಿ ಎರಡು ದಿನ ಕಡ್ಡಾಯ ಪ್ರವಾಸ, ಕಳೆದ ಎರಡು ಲೋಕಸಭೆ ಚುನಾವಣೆ ಆಧಾರದ ಮೇಲೆ ಮತಗಟ್ಟೆಗಳನ್ನು ಎಬಿಸಿ ಎಂದು ವರ್ಗೀಕರಣ ಮಾಡುವುದು. ಬಿಜೆಪಿ ಮತಗಳಿಕೆ ಕಡಿಮೆ ಇದ್ದ ಕಡೆ ಮತದಾರರ ಮನವೊಲಿಕೆಗೆ ಕಾರ್ಯಕ್ರಮ ರೂಪಿಸುವುದು. ಪ್ರತಿ ಮತಗಟ್ಟೆಯಲ್ಲಿ ಎಸ್‌ಸಿ-ಎಸ್‌ಟಿ ಓಬಿಸಿ ಸಮುದಾಯದ 10 ಕಾರ್ಯಕರ್ತರ ಸೇರ್ಪಡೆ, ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರಬಹುದಾದ ಸಹಕಾರ ಸಂಘದ ನಿರ್ದೇಶಕರು ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರ ಪಟ್ಟಿ ಸಿದಟಛಿಪಡಿಸುವುದು. ಮಂದಿರ, ಮಠ,ಸಾಧು-ಸಂತರ ಮಾಹಿತಿ ಸಂಗ್ರಹಿಸುವುದು. ಪಂಚಾಯಿತಿ ಚುನಾವಣೆಯಲ್ಲಿ ಸೋತವರು ಹಾಗೂ ಬೇರೆ ಪಕ್ಷಗಳಲ್ಲಿರುವ ವೈಯಕ್ತಿಕ ಸಾಮರ್ಥ್ಯ ಇರುವವರನ್ನು ಗುರುತಿಸಿ ಬಿಜೆಪಿಗೆ ಸೇರಿಸಿಕೊಳ್ಳುವುದು. ಮತಗಟ್ಟೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಫೋನ್‌ ಹೊಂದಿರುವವರ ಪಟ್ಟಿ, ಮೋಟಾರ್‌ ಬೈಕ್‌ ಇರುವವರ ಪಟ್ಟಿ ಸಿದಟಛಿಪಡಿಸುವುದು. ಪ್ರತಿ ಮತಗಟ್ಟೆಯಲ್ಲಿ “ಈ ಬಾರಿಯೂ ಮತ್ತೆ ಬಿಜೆಪಿ’ ಎಂಬ
ಘೋಷಣೆಯುಳ್ಳ ಗೋಡೆ ಬರಹ ಬರೆಯುವುದು 23 ಅಂಶಗಳಲ್ಲಿ ಸೇರಿದೆ.

ತಕ್ಷಣದಿಂದಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಬೇಕು. ಲೋಕಸಭೆ ಕ್ಷೇತ್ರವಾರು ಉಸ್ತುವಾರಿ ಗಳ ನೇಮಕದ ಪಟ್ಟಿ ಸಿದಟಛಿಪಡಿಸಿ ಕಳುಹಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.ಈ ಮಧ್ಯೆ, ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋಗುತ್ತಿರುವುದರಿಂದ ಕಾರ್ಯತಂತ್ರ ಬದಲಾ ಯಿಸಿಕೊಳ್ಳುವುದು. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಕುರಿತು ಒತ್ತಾಯ
ಇರುವುದರಿಂದ ಆ ಬಗ್ಗೆಯೂ ವರದಿ ಸಿದಟಛಿಪಡಿಸಿ ಕೊಡಿ ಎಂದು ರಾಜ್ಯ ಘಟಕಕ್ಕೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರವಾಸ ಮುಂದೂಡಿಕೆ ಸಾಧ್ಯತೆ
ಅಮಿತ್‌ ಶಾ ಅವರು ಜು.28 ರಂದು ರಾಜ್ಯ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮ ನಿಗದಿಯಾಗಿತ್ತಾದರೂ ಲೋಕಸಭೆ ಅಧಿವೇಶನ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಎಲ್ಲ ಸಂಸದರ ಸಭೆ ಸಹ ಅದೇ ದಿನ ಕರೆಯಲಾಗಿದೆ. ಹೀಗಾಗಿ, ಪ್ರವಾಸ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ, ಅಧಿವೇಶನ  ನಡೆಯುವಾಗಲೇ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು ಹಾಗೂ ಸಂಸದರು, ರಾಜ್ಯಾಧ್ಯಕ್ಷರ ಜತೆ ದೆಹಲಿಯಲ್ಲೇ ಅಮಿತ್‌ ಶಾ ಸಭೆ ನಡೆಸುವ ಸಾಧ್ಯತೆಯೂ ಇದೆ. 

Advertisement

ಲೋಕಸಭೆ ಕ್ಷೇತ್ರವಾರು ಉಸ್ತುವಾರಿಗಳ ನೇಮಕದ ಪಟ್ಟಿ ಸಿದ್ಧಪಡಿಸಲು ಸೂಚನೆ
ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದಾಗಿ ಕಾರ್ಯತಂತ್ರ  ಬದಲಾಯಿಸಿಕೊಳ್ಳುವಂತೆ ಸಲಹೆ
ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ
ಕುರಿತು ಒತ್ತಾಯ ಇರುವುದರಿಂದ ಆ ಬಗ್ಗೆಯೂ ವರದಿ ಸಿದಟಛಿಪಡಿಸುವಂತೆ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next