Advertisement

ಕಾಂಗ್ರೆಸ್ ಸರ್ಕಾರ ಬಂದರೆ, ರಿವರ್ಸ್ ಗೇರ್ ಸರ್ಕಾರ ಆಗುತ್ತದೆ: ಅಮಿತ್‌ ಶಾ ವಾಗ್ದಾಳಿ

03:01 PM Apr 25, 2023 | Team Udayavani |

ರಬಕವಿ-ಬನಹಟ್ಟಿ(ಬಾಗಲಕೋಟೆ):  ಅಲ್ಲಮಪ್ರಭು, ಬಸವಣ್ಣ ಅವ್ರ ತತ್ವಗಳನ್ನು ಲೋಕಕ್ಕೆ ಸಾರಿದ ಅಲ್ಲಮ ಪ್ರಭು. ಜೀವನ ಪೂರ್ತಿ ಬಸವಣ್ಣನವರ ವಚನಗಳನ್ನ ಹೇಳ್ತಾ ಜೀವನ ಸಾಗಿಸಿದರು. ಇಲ್ಲಿಯ ಜನರಿಗೆ ನಾನು ವಿನಂತಿ ಮಾಡಿಕೊಳ್ಳಲು ಬಂದಿದ್ದೇನೆ. ಮೋದಿ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಬೇಕಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲಿದೆ. ಈ ಚುನಾವಣೆ ಕರ್ನಾಟಕದ ಭವಿಷ್ಯವನ್ನು ಮೋದಿಯವರ ಕೈಯಲ್ಲಿ ಕೊಡುವ ಚುನಾವಣೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

Advertisement

ರಬಕವಿ ಪಟ್ಟಣದ ರಾಮಪ್ಪ ಚಿಕ್ಕೋಡಿ ಮೈದಾನದಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಬಿಜೆಪಿ ಕಾರ್ಯಕರ್ತರನ್ನು ಮಾತನಾಡಿದ ಅವರು. ಇದು ನವ ಕರ್ನಾಟಕದ ಚುನಾವಣೆ. ಪ್ರಾಮಾಣಿಕ ರಾಜನೀತಿ ಹಾಗೂ ಅಭಿವೃದ್ಧಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಬಂದರೆ, ರಿವರ್ಸ್ ಗೇರ್ ಸರ್ಕಾರ ಆಗುತ್ತದೆ. ಯಾವುದೇ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೂರ್ಣ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತದೆ‌ ಎಂದರು.

ಇದನ್ನೂ ಓದಿ: Mukesh Ambani; ಸ್ನೇಹಿತ, ರಿಲಯನ್ಸ್‌ ಉದ್ಯೋಗಿಗೆ 1,500 ಕೋಟಿ ರೂ. ಮೌಲ್ಯದ ಬಂಗಲೆ ಉಡುಗೊರೆ

ಕಾಂಗ್ರೆಸ್ ನವರು ಪಿ.ಎಫ್.ಐ ಬ್ಯಾನ್ ಮಾಡುವ ಜರೂರತ್ತಿಲ್ಲ ಅಂತಾರೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣದ ಹಿಂದೆ ಬಿದ್ದಿದೆ. ಮುಸ್ಲಿಂಮರ ಮೀಸಲಾತಿ ರದ್ದು ಮಾಡಿ, ಎಸ್.ಸಿ, ಎಸ್.ಟಿ, ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಕಲ್ಪಿಸಿದ್ದೇವೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹೇಳುತ್ತಾರೆ. ಮೀಸಲಾತಿ ರದ್ದು ಮಾಡುತ್ತೀನಿ ಅಂತಾರೆ. ಹಾಗಾದ್ರೆ ಅಧ್ಯಕ್ಷರಿಗೆ ನಾನು ಕೇಳ್ತೇನೆ. ನಾಲ್ಕು ಪರ್ಸೆಂಟ್ ಮೀಸಲಾತಿ ಯಾರ ಮೀಸಲಾತಿ ಕಡಿಮೆ ಮಾಡ್ತೀರಾ. ಲಿಂಗಾಯತರ ಮೀಸಲಾತಿ ಕಡಿಮೆ ಮಾಡ್ತೀರಾ, ಒಕ್ಕಲಿಗರ ಮೀಸಲಾತಿ ಕಡಿಮೆ ಮಾಡ್ತಿರಾ? ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿ ಆಗಿದೆ.  ಇತ್ತೀಚೆಗೆ ನಮ್ಮ ನಾಯಕರೊಬ್ಬರು ಕಾಂಗ್ರೆಸ್ ಗೆ ಹೋಗಿದ್ದಾರೆ. ಅಲ್ಲಿ ಹೋದರೆ ಚಾನ್ಸ್ ಆಗುತ್ತದೆ ಎಂದು ಹೋಗಿದ್ದಾರೆ. ಲಿಂಗಾಯತರಿಗೆ ಅವಮಾನ ಮಾಡಿದ ಪಕ್ಷಕ್ಕೆ ಹೋಗಿದ್ದೀರಾ ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಗೆ ಟಾಂಗ್ ಕೊಟ್ಟರು.

Advertisement

ಮಹಾದಾಯಿ ಯೋಜನೆಯನ್ನು ಬಿಜೆಪಿ ಸರ್ಕಾರ ಮಾಡಿದೆ. ನಾಲ್ಕು ವರ್ಷದಲ್ಲಿ ಅನೇಕ ಕೆಲಸಗಳನ್ನು ಮಾಡಿದೆ ಬಿಜೆಪಿ. ಸಮಗ್ರ ಕರ್ನಾಟಕದ ಅಭಿವೃದ್ಧಿ ಗೆ ಕೆಲಸ ಕಾರ್ಯ ಗಳನ್ನು ಮಾಡಿದೆ. ನೇಕಾರರಿಗೆ 2 ಲಕ್ಷದಿಂದ 5 ಲಕ್ಷದ ವರೆಗೆ ಶೇಕಡಾ 3 ಪರ್ಸೆಂಟ್ ನಲ್ಲಿ ಲೋನ್ ನೀಡಲಾಗುತ್ತಿದೆ. 4 ಲಕ್ಷ ಬಡ ಕುಟುಂಬಗಳಿಗೆ ಮನೆ ನೀಡಿದೆ. 42 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಪರಿಹಾರ ನೀಡಲಾಗುತ್ತಿದೆ. ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ನೀಡಲಾಗ್ತಿದೆ. ಕಾಂಗ್ರೆಸ್ ನವರಿಗೆ ನಾನು ಕೇಳುತ್ತೇನೆ. ನಾವು ಮಾಡಿದ ಕೆಲಸಗಳಲ್ಲಿ ಕೇವಲ 10% ಕೆಲಸ ಮಾಡಿದರೆ,  ನೀವು ವೋಟ್ ಕೇಳಲು ಬರುವ ಅವಶ್ಯಕತೆ ಇರ್ತಿಲಿಲ್ಲ ಎಂದರು.

ಡಿಕೆಶಿ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಗುದ್ದಾಡ್ತಿದ್ದಾರೆ. ಆದ್ರೆ ಮುಖ್ಯಮಂತ್ರಿ ಆಗಲು ನಿಮ್ಮ ನಂಬರೇ ಬಂದಿಲ್ಲ. ಯಾಕೆ ಕಿತ್ತಾಡ್ತೀರಾ ಎಂದು ವ್ಯಂಗ್ಯವಾಡಿದರು.

ಈ ಬಾರಿಯೂ ಡಬಲ್ ಇಂಜಿನ್ ಸರ್ಕಾರಕ್ಕೆ ಮತ ನೀಡಿ, 2024 ರಲ್ಲಿ ಮತ್ತೇ ಮೋದಿ ನೇತೃತ್ವದ ಸರ್ಕಾರ ತಗೊಂಡು ಬನ್ನಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಮನವಿ‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next