Advertisement

PM Modi 2024 ರಲ್ಲಿ ಮತ್ತೆ ಪ್ರಧಾನಿ: ಅಮಿತ್ ಶಾ ಸೀಟ್ ಲೆಕ್ಕಾಚಾರ

10:17 PM May 25, 2023 | Team Udayavani |

ಗುವಾಹಟಿ: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ನಂತರ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ಗೆ ಈಗಿನ ಸ್ಥಾನವನ್ನು ಖಚಿತಪಡಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಗುರುವಾರ ಹೇಳಿದ್ದಾರೆ.

Advertisement

ಅಸ್ಸಾಂ ಸರ್ಕಾರಿ ಉದ್ಯೋಗಗಳಿಗಾಗಿ ಯಶಸ್ವಿ ಅಭ್ಯರ್ಥಿಗಳಿಗೆ 44,703 ನೇಮಕಾತಿ ಪತ್ರಗಳನ್ನು ವಿಧ್ಯುಕ್ತವಾಗಿ ವಿತರಿಸಿದ ನಂತರ ಇಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ಕಾಂಗ್ರೆಸ್ ನಕಾರಾತ್ಮಕ ಮನೋಭಾವ ಹೊಂದಿದೆ. ಹೊಸ ಸಂಸತ್ತಿನ ಕಟ್ಟಡದ ನಿಗದಿತ ಉದ್ಘಾಟನೆಯನ್ನು ಬಹಿಷ್ಕರಿಸುವ ಮೂಲಕ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಮುಂದಿನ ವರ್ಷ 300ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿದೆ ಮತ್ತು ಲೋಕಸಭೆಯಲ್ಲಿ ಈಗಿರುವ ಸ್ಥಾನಗಳ ಸಂಖ್ಯೆಯನ್ನು ಸಹ ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.

ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಆಯಾ ರಾಜ್ಯಪಾಲರ ಬದಲಿಗೆ ಆಯಾ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ನಾಯಕರಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಿಂದ ಹೊಸ ವಿಧಾನಸಭಾ ಕಟ್ಟಡಗಳಿಗೆ ಶಂಕುಸ್ಥಾಪನೆ ಮಾಡಿದ ಉದಾಹರಣೆಗಳಿವೆ ಎಂದು ಅವರು ಪ್ರತಿಪಾದಿಸಿದರು.ಕಾಂಗ್ರೆಸ್ ಸಂಸತ್ತಿನ ಒಳಗೆ ಪ್ರಧಾನಿಗೆ ಮಾತನಾಡಲು ಬಿಡುವುದಿಲ್ಲ, ಭಾರತೀಯರು ಮೋದಿಯವರಿಗೆ ಮಾತನಾಡಲು ಜನಾದೇಶ ನೀಡಿದ್ದಾರೆ. ಪ್ರಧಾನಿಯನ್ನು ಗೌರವಿಸದಿರುವುದು ಜನಾದೇಶವನ್ನು ಅವಮಾನಿಸಿದಂತೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next