Advertisement

ಗೆಲುವು ಆಕಸ್ಮಿಕವಲ್ಲ: ಅಮಿತ್‌ ಪಂಘಲ್‌

06:00 AM Sep 06, 2018 | |

ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಬಾಕ್ಸಿಂಗ್‌ ಫೈನಲ್‌ನಲ್ಲಿ ಒಲಿಂಪಿಕ್‌ ಚಾಂಪಿಯನ್‌ ಹಸನ್‌ಬಾಯ್‌ ದುಸ್ಮತೋವ್‌ ವಿರುದ್ಧ ಸಾಧಿಸಿದ ಗೆಲುವು ಆಕಸ್ಮಿಕವಲ್ಲ, ಮತ್ತೆ ಅವರು ಎದುರಾದರೂ ಗೆದ್ದು ಬರುವ ವಿಶ್ವಾಸವಿದೆ ಎಂಬುದಾಗಿ ಅಮಿತ್‌ ಪಂಘಲ್‌ ಹೇಳಿದ್ದಾರೆ. 49 ಕೆಜಿ ವಿಭಾಗದ ಫೈನಲ್‌ ಹಣಾ ಹಣಿಯಲ್ಲಿ ದುಸ್ಮತೋವ್‌ ವಿರುದ್ಧ 3-2 ಗೆಲುವು ಸಾಧಿಸುವ ಮೂಲಕ ಪಂಘಲ್‌ ಭಾರತಕ್ಕೆ ಏಕೈಕ ಬಾಕ್ಸಿಂಗ್‌ ಚಿನ್ನ ತಂದಿತ್ತಿದ್ದರು. 

Advertisement

“ನಿಜ ಹೇಳಬೇಕೆಂದರೆ, ಅಂದು ನನ್ನ ಮೇಲೆ ಬಹಳ ಒತ್ತಡವಿತ್ತು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾನು ಅವರೆದುರು ಸೋತಿರುವುದೇ ಇದಕ್ಕೆ ಕಾರಣ. ಆದರೆ ಏಶ್ಯಾಡ್‌ಗಾಗಿ ಕಠಿನ ತರಬೇತಿ ಪಡೆದು ಆಗಮಿಸಿದ್ದೆ. ಹೀಗಾಗಿ ಅವರನ್ನು ಸೋಲಿಸಬಲ್ಲೆನೆಂಬ ವಿಶ್ವಾಸವಿತ್ತು. ಇದು ಆಕಸ್ಮಿಕವಲ್ಲ. ಮುಂದೆಂದಾದರೂ ದುಸ್ಮ ತೋವ್‌ ಎದುರಾದರೆ ಅವರನ್ನು ಮತ್ತೆ ಸೋಲಿಸಬಲ್ಲೆ’ ಎಂಬುದಾಗಿ ಭಾರತಕ್ಕೆ ಮರಳಿದ ಪಂಘಲ್‌ ಮಾಧ್ಯಮದವರ ಮುಂದೆ ವಿಶ್ವಾಸ ವ್ಯಕ್ತಪಡಿಸಿದರು.

“ನನ್ನ ಅಣ್ಣ ಕೂಡ ಬಾಕ್ಸರ್‌ ಆಗಿದ್ದ. ಆದರೆ ನನಗೋಸ್ಕರ ಇದನ್ನು ಬಿಟ್ಟುಕೊಟ್ಟ. ನಮ್ಮದು ಮಧ್ಯಮ ವರ್ಗದ ಕುಟುಂಬ. ಹೀಗಾಗಿ ಅಣ್ಣ ಸೇನೆಯನ್ನು ಸೇರಿಕೊಂಡು ಕುಟುಂಬಕ್ಕೆ ಆಧಾರವಾಗಿ ನಿಂತ. ನನ್ನ ತಂದೆ ಮತ್ತು ಕೋಚ್‌ ನಟ ಧಮೇಂದ್ರ ಅವರ ಕಟ್ಟಾ ಅಭಿಮಾನಿಗಳು. ಟಿವಿಯಲ್ಲಿ ಅವರ ಸಿನೆಮಾ ಬರುವಾಗ ಜಾಹೀರಾತು ಬ್ರೇಕ್‌ ವೇಳೆಯೂ ಚಾನೆಲ್‌ ಬದ ಲಿಸುತ್ತಿರಲಿಲ್ಲ. ಧರ್ಮೇಂದ್ರ ಅವರನ್ನು ಭೇಟಿ ಮಾಡುವುದು ನನ್ನ ಕನಸು…’ ಎಂದೂ ಪಂಘಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next