Advertisement
ನೈರ್ಮಲ್ಯ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಹಲವಾರು ಯೋಜನೆಗಳು ಜಾರಿಗೆ ತಂದು ಅದಕ್ಕಾಗಿ ಕೋಟ್ಯಂತರ ರೂ, ಖರ್ಚು ಮಾಡಿವೆ. ಸ್ವಚ್ಚತೆಗಾಗಿ ಎಲ್ಲ ರೀತಿಯ ಪ್ರಯತ್ನಗಳು ನಿರಂತರವಾಗಿ ಮಾಡುತ್ತಿದ್ದಾರೆ. ಆದರೆ ಸ್ಥಳಿಯ ಪಟ್ಟಣ ಪಂಚಾಯಿತಿಯಲ್ಲಿ ಶೌಚಾಲಯದ ತ್ಯಾಜ್ಯ ಹೀರುವ (ಸಕ್ಕಿಂಗ್) ಯಂತ್ರ ಕೆಟ್ಟು ನಿಂತು ಸುಮಾರು ಒಂದು ವರ್ಷಕ್ಕೂ ಹೆಚ್ಚು ದಿನ ಕಳೆದಿವೆ. ಇನ್ನುವರೆಗೆ ಸಕ್ಕಿಂಗ್ ಯಂತ್ರ ಸಿದ್ದವಾಗಿಲ್ಲ ಮತ್ತು ಹೊಸ ಯಂತ್ರ ಕೂಡಾ ಬಂದಿಲ್ಲ. ಇದರಿಂದ ಸೆಪ್ಟಿಕ್ ಟ್ಯಾಂಕ ತುಂಬಿ, ಗಬ್ಬೆದ್ದು ಹೋಗಿವೆ. ಇದಕ್ಕಾಗಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
Related Articles
ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
ಬಯಲು ಶೌಚಾಲಯದ ಆತಂಕ: ಬಯಲು ಶೌಚಾಲಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಸರ್ಕಾರಗಳು ಹಲವಾರು ಪ್ರಯತ್ನ ಮಾಡುತ್ತಿವೆ. ಇದರ ಫಲವಾಗಿ ಬಹುತೇಕ ಜನ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸ್ಥಳಿಯ ಪಪಂಯ ಶೌಚಾಲಯ ತ್ಯಾಜ್ಯ ಹೀರುವ (ಸಕ್ಕಿಂಗ್) ಯಂತ್ರದ ಸಮಸ್ಯೆ ಮತ್ತು ಸೆಪ್ಟಿಕ್ ಟ್ಯಾಂಕ್ ತುಂಬಿರುವ ಮನೆಯ ಕುಟುಂಬಗಳ ಪರಿಸ್ಥಿತಿ ಕಂಡು, ಬಯಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಪಪಂಯ ಸಕ್ಕಿಂಗ್ ಯಂತ್ರ ದುರಸ್ಥಿಗೊಳಿಸಿ ಸಾರ್ವಜನಿಕರ ಸೆಪ್ಟಿಕ್ ಟ್ಯಾಂಕ್ ಸಮಸ್ಯೆಬಗೆಹರಿಸಿ, ಬಯಲು ಶೌಚಾಲಯ ಮುಕ್ತ ಪಟ್ಟಣಕ್ಕೆ ಮುಂದಾಗಬೇಕು ಎಂಬುದು ಜನರ ಒತ್ತಾಯ. ಪಟ್ಟಣ ಪಂಚಾಯಿತಿಯ ಸಕ್ಕಿಂಗ್ ಯಂತ್ರ ತಾಂತ್ರಿಕ ತೊಂದರೆಯಿಂದ ಕೆಟ್ಟಿದೆ. ಹಲವಾರು ಭಾರಿ ಸಂಬಂಧಪಟ್ಟ ಸಿಬ್ಬಂದಿಗಳಿಗೆ ತಂದು ತೋರಿಸಲಾಗಿದೆ. ಆದರು ಅದು ಸಿದ್ದವಾಗುತ್ತಿಲ್ಲ. ಅದಕ್ಕಾಗಿ ಹಲವಾರು ರೀತಿಯ ಪ್ರಯತ್ನ ಮಾಡಲಾಗಿದೆ. ನಂತರ ಚುನಾವಣೆ ಘೋಷಣೆಯಾದ ಪರಿಣಾಮ ಚುನಾವಣೆ ಕಾರ್ಯದಲ್ಲಿ ನಿರತರಾಗಿದ್ದೇವೆ. ಈಗ ಚುನಾವಣೆ ಮುಗಿದಿದೆ. ಒಂದು ವಾರದಲ್ಲಿ ಸಕ್ಕಿಂಗ್ ಯಂತ್ರ ಸಮಸ್ಯೆ ಬಗೆಹರಿಸುತ್ತೇವೆ.
ಸಂತೋಷ ವ್ಯಾಪಾರಿಮಠ, ಕಿರಿಯ ಆರೋಗ್ಯ ನಿರೀಕ್ಷಕರು, ಪಪಂ ಅಮೀನಗಡ ಪಟ್ಟಣ ಪಂಚಾಯಿತಿಯ ಸಕ್ಕಿಂಗ್ ಯಂತ್ರದ ಸಮಸ್ಯೆ ಬಹಳ ದಿನದಿಂದ ಇದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ನಿಜ. ಸಂಬಂಧಪಟ್ಟ ಪಪಂ ಅಧಿಕಾರಿಗಳಿಗೆ ತಿಳಿಸಿ ಎರಡು-ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ತಿಳಿಸುತ್ತೇನೆ.
ರಮೇಶ ಮುರಾಳ, ಪಪಂ ಸದಸ್ಯರು ಸಕ್ಕಿಂಗ್ ಯಂತ್ರ ಪದೆ-ಪದೆ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ. ಸಾರ್ವಜನಿಕರು ಸಹಕರಿಸಬೇಕು.
ಮಹೇಶ ನೀಡಶೇಶಿ, ಮುಖ್ಯಾಧಿಕಾರಿ, ಪಪಂ *ಎಚ್.ಎಚ್.ಬೇಪಾರಿ