Advertisement

ಕ್ಯಾಟ್‌ ಕ್ಯೂ ವೈರಸ್‌ ಪ್ರವೇಶ

02:21 PM Sep 29, 2020 | mahesh |

ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ವೈರಸ್‌ ಪ್ರಕರಣಗಳ ಸಂಖ್ಯೆ 60 ಲಕ್ಷ ದಾಟಿರುವಂತೆಯೇ ಮತ್ತೂಂದು ಆಘಾತಕಾರಿ ವಿಚಾರ ಹೊರಬಿದ್ದಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವಿಜ್ಞಾನಿಗಳು ನೀಡಿದ ಮಾಹಿತಿ ಪ್ರಕಾರ, ಚೀನ ದಿಂದ “ಕ್ಯಾಟ್‌ ಕ್ಯೂ ವೈರಸ್‌ (Cat Que Virus-CQV)’ ಭಾರತ ಪ್ರವೇಶಿಸಿದೆ. ಅದೂ ಕರ್ನಾಟಕದಲ್ಲಿ ನಡೆಸಲಾಗಿರುವ ಎರಡು ಮಾದರಿ ಪರೀಕ್ಷೆಯಲ್ಲಿ ದೃಢಪಟ್ಟಿದೆ.

Advertisement

ಉಣ್ಣೆ, ಸೊಳ್ಳೆ ಮೊದಲಾದ ಕೀಟಗಳಿಂದ ಹರಡುವ ರೋಗ ಇದಾಗಿದೆ. ಇದು ಹಂದಿಗಳಲ್ಲಿ, ಕೆಲವು ಜಾತಿಯ ಸೊಳ್ಳೆಗಳಲ್ಲಿ ಕಂಡುಬರುತ್ತವೆ. ಈಗಾಗಲೇ ಕ್ಯಾಟ್‌ ಕ್ಯೂ ವೈರಸ್‌ ವಿಯೆಟ್ನಾಂ ಮತ್ತು ಚೀನ ದ ಕೆಲವು ಭಾಗಗಳಲ್ಲಿ ಕಂಡು ಬಂದಿದೆ.

ಪುಣೆಯಲ್ಲಿರುವ ರಾಷ್ಟ್ರೀ ಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆ (ಎನ್‌ಐವಿ)ಯ ವಿಜ್ಞಾನಿಗಳು ನಡೆಸಿದ ಸಂಶೋಧನೆ ಪ್ರಕಾರ ವಿವಿಧ ರಾಜ್ಯಗಳಲ್ಲಿ ನಡೆಸಲಾಗಿರುವ 883 ಮಾನವರ ರಕ್ತದ ಮಾದರಿಗಳ ಪರೀಕ್ಷೆ ಪೈಕಿ ಎರಡರಲ್ಲಿ ಹೊಸ ಸೋಂಕು ದೃಢಪಟ್ಟಿದೆ.

ಕರ್ನಾಟಕದಲ್ಲಿ 2014 ಮತ್ತು 2017ರಲ್ಲಿ ನಡೆಸಲಾಗಿರುವ ಪರೀಕ್ಷೆಯ ಪ್ರಕಾರ, ಕರ್ನಾಟಕದ ಇಬ್ಬರಿಗೆ ಒಂದು ಹಂತದಲ್ಲಿ ಕ್ಯಾಟ್‌ ಕ್ಯೂ ವೈರಸ್‌ ತಗಲಿರುವ ಸಾಧ್ಯತೆ ಇದೆ. ನಂತರದ ದಿನಗಳಲ್ಲಿ ಕ್ಯಾಟ್‌ ಕ್ಯೂ ವೈರಸ್‌ಗೆ ಪ್ರತಿಕಾಯ (CQV IgG antibodies) ಪತ್ತೆಯಾಗಿದೆ ಎಂದು ಅವರು ಕಂಡುಕೊಂಡಿದ್ದಾರೆ.

“ಲೈವ್‌ ಮಿಂಟ್‌’ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, ಸಸ್ತನಿ ವರ್ಗಕ್ಕೆ ಸೇರಿದ ಪರಾವಲಂಬಿಯೇ ಅದನ್ನು ಪ್ರಧಾನವಾಗಿ ರವಾನೆ ಮಾಡುತ್ತದೆ. ಹೀಗಾಗಿ ಇದು ದೇಶದ ಆರೋಗ್ಯ ವ್ಯವಸ್ಥೆಗೆ ಸವಾಲಾಗಿ ಕಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಐಸಿಎಂಆರ್‌ ವಿಜ್ಞಾನಿಗಳು ಹೇಳಿದ್ದಾರೆ. ದೇಶದಲ್ಲಿರುವ ಸೊಳ್ಳೆಯ ವರ್ಗಗಳು ಸಿಕ್ಯೂವಿಗೆ ಬೇಗ ತುತ್ತಾಗುತ್ತವೆ ಎಂದೂ ಉಲ್ಲೇಖೀಸಲಾಗಿದೆ.

Advertisement

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

60 ಲಕ್ಷ ದಾಟಿದ ಕೇಸುಗಳು: ದೇಶದಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸೋಮವಾರ ಬೆಳಗ್ಗೆ 8 ಗಂಟೆವರೆಗೆ 82,170 ಹೊಸ ಕೇಸುಗಳು ಪತ್ತೆಯಾ ಗಿದ್ದು, 1,039 ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ.  ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 60 ಲಕ್ಷ ದಾಟಿದೆ. ರವಿವಾರ ಒಂದೇ ದಿನ 7.09 ಲಕ್ಷ ಸ್ಯಾಂಪಲ್‌ಗ‌ಳ ಪರೀಕ್ಷೆ ನಡೆಸಲಾಗಿದೆ.

ಮುಂದಿನ ವರ್ಷ ಲಸಿಕೆ
ದೇಶದಲ್ಲಿ ಕೊರೊನಾಕ್ಕೆ ಲಸಿಕೆ 2021ರ ಮೊದಲ ತ್ತೈಮಾಸಿಕದಲ್ಲಿ ಲಭಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್‌ ತಿಳಿಸಿದ್ದಾರೆ. ಇದೇ ವೇಳೆ ಸೋಂಕು ಮತ್ತು ಅದಕ್ಕೆ ಸಂಬಂಧಿಸಿದ ಲಸಿಕೆಗಳ ಸಂಶೋಧನೆ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್‌ https://vaccine.icmr.org.in/ ಅನ್ನು ಸಚಿವರು ಇದೇ ಸಂದರ್ಭದಲ್ಲಿ ಅನಾವರಣ ಗೊಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next