Advertisement

ಮತ್ತೆ ಚೀನ ಮೇಲೆ ಶಂಕೆ!

10:25 PM Mar 13, 2023 | Team Udayavani |

ನವದೆಹಲಿ: ಒಂದು ಕಡೆ ಭಾರತದೊಂದಿಗೆ ರಾಜತಾಂತ್ರಿಕವಾಗಿ ಗೆಳೆತನದ ಮಾತುಗಳನ್ನಾಡುತ್ತಿರುವ ಚೀನ, ಒಳಗೊಳಗೇ ಮತ್ತೊಂದು ಗಾಲ್ವಾನ್‌ ಘರ್ಷಣೆಗೆ ಸಜ್ಜಾಗುತ್ತಿದೆಯಾ? ಇಂತಹ ಗುಮಾನಿ ಈಗ ಹುಟ್ಟಿಕೊಂಡಿದೆ.

Advertisement

2020ರಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಚೀನೀ ಸೈನಿಕರು ಬಳಸಿದ್ದಂತಹದ್ದೇ ಆಯುಧಗಳನ್ನು, ಅಲ್ಲಿನ ಸರ್ಕಾರ ಮತ್ತೆ ಖರೀದಿಸುತ್ತಿರುವುದೇ ಈ ಶಂಕೆಗೆ ಕಾರಣ. ಕೈಬಳಕೆಯ ಈ ದಂಡಗಳಿಗೆ ಮುಳ್ಳುಗಳನ್ನು ಅಂಟಿಸಿ, ಚೂಪು ಮಾಡಿ ಬಳಸಬಹುದು.

ಈ ಆಯುಧಗಳನ್ನು ಮತ್ತೆ ಚೀನಿ ಸೇನೆ ನೈಜ ಗಡಿ ನಿಯಂತ್ರಣ ರೇಖೆಯಲ್ಲಿ ಬಳಸಬಹುದು ಎಂದು ಭದ್ರತಾತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವಾರವಷ್ಟೇ ನವದೆಹಲಿಯಲ್ಲಿ ನಡೆದ ಜಿ20 ಶೃಂಗದಲ್ಲಿ ಬಾಂಧವ್ಯ ವೃದ್ಧಿಸಿಕೊಳ್ಳುವ ಮಾತುಗಳನ್ನು ಚೀನ ಆಡಿತ್ತು.

ಗಡಿಯಲ್ಲಿ ಎರಡೂ ದೇಶಗಳು ಪರಿಸ್ಥಿತಿಯನ್ನು ಸುಸ್ಥಿರವಾಗಿಟ್ಟುಕೊಳ್ಳಬೇಕೆಂದು ಹೇಳಿತ್ತು. ಅದರ ಬೆನ್ನಲ್ಲೇ ಚೀನ ಈ ಖರೀದಿ ಮಾಡಿರುವುದು ಪ್ರಶ್ನೆಯಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next