ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಮೂಲಕ ಟ್ರೆಂಡ್ ನಲ್ಲಿರುವ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ ಅವರು ದೇಶದ ಉದ್ಯಮ ಕ್ಷೇತ್ರ ಮತ್ತು ಭಾರತದ ಆರ್ಥಿಕತೆ ಕುರಿತು ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿರುವ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪ್ರಸಕ್ತ ವಿದ್ಯಮಾನಗಳ ಕುರಿತು ನಡೆಯುತ್ತಿರುವ ಚರ್ಚೆಯ ನಿಟ್ಟಿನಲ್ಲಿ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ ಅವರು, “ ಭಾರತದ ವಿರುದ್ಧ ಎಂದಿಗೂ ಪಂಥ (ಬೆಟ್) ಕಟ್ಟಬೇಡಿ” ಎಂದು ಜಾಗತಿಕ ಮಾಧ್ಯಮಗಳಿಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ:ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ…
ಉದ್ಯಮ ಕ್ಷೇತ್ರದ ಸವಾಲುಗಳು ಹಾಗೂ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಭಾರತದ ಗುರಿಯನ್ನು ಹಾಳುಗಡೆವಬಹುದೆಂದು ಜಾಗತಿಕ ಮಾಧ್ಯಮಗಳು ಭಾವಿಸಿವೆಯೇ? ಭಾರತ ದೀರ್ಘಕಾಲದಿಂದ ಭೂಕಂಪಗಳು, ಬರಗಾಲ, ಆರ್ಥಿಕ ಹಿಂಜರಿತ, ಯುದ್ಧಗಳು, ಭಯೋತ್ಪಾದಕ ದಾಳಿಗಳನ್ನು ಎದುರಿಸಿರುವುದನ್ನು ನಾನು ಈ ದೇಶದಲ್ಲಿ ಕಂಡಿದ್ದೇನೆ. ನಾನು ಹೇಳುವುದೊಂದೇ..ಭಾರತದ ವಿರುದ್ಧ ಎಂದಿಗೂ ಪಣ(ಹಿಟ್) ಕಟ್ಟಬೇಡಿ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
ಅದಾನಿ ನೇತೃತ್ವದ ಸಮೂಹ ಸಂಸ್ಥೆಗಳು ಅವ್ಯವಹಾರದಲ್ಲಿ ತೊಡಗಿರುವುದಾಗಿ ಅಮೆರಿಕ ಮೂಲದ ಹಿಂಡನ್ ಬರ್ಗ್ ಸಂಸ್ಥೆ ವರದಿಯನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಅದಾನಿ ಗ್ರೂಪ್ ನ ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಾಣಲು ಪ್ರಾರಂಭವಾಗಿತ್ತು. ಈ ನಿಟ್ಟಿನಲ್ಲಿ ಮಾಧ್ಯಮಗಳಲ್ಲಿ ಭರ್ಜರಿ ಚರ್ಚೆ ನಡೆಯತೊಡಿದ್ದು, ಇದಕ್ಕೆ ಕೈಕಾರಿಕೋದ್ಯಮಿ ಆನಂದ್ ಮಹೀಂದ್ರ ಈ ಪ್ರತಿಕ್ರಿಯೆ ನೀಡಿದ್ದಾರೆ.