Advertisement

ಸ್ವಪ್ರಯತ್ನದ 80 ಸಿರಿವಂತ ಅಮೆರಿಕನ್‌ ಮಹಿಳೆಯರಲ್ಲಿ ಮೂವರು ಭಾರತೀಯರು

11:30 AM Jun 08, 2019 | |

ಹೊಸದಿಲ್ಲಿ : ಸ್ವಪ್ರಯತ್ನದ 80 ಅತ್ಯಂತ ಸಿರಿವಂತ ಅಮೆರಿಕನ್‌  ಮಹಿಳೆಯರನ್ನು ಫೋರ್ಬ್ಸ್‌ ಗುರುತಿಸಿದ್ದು ಇವರಲ್ಲಿ ಮೂವರು ಭಾರತೀಯ ಮೂಲದವರಾಗಿದ್ದಾರೆ.

Advertisement

ಈ ಸಿರಿವಂತ ಉದ್ಯಮಶೀಲ ಮಹಿಳೆಯರು ತಮ್ಮದೇ ಹಿಂದಿನ ಸಿದ್ಧಿ-ಸಾಧನೆಯ ದಾಖಲೆಗಳನ್ನು ತಾವೇ ಮುರಿದು ಸೂರು ಹಾರಿ ಹೋಗುವ ರೀತಿಯ ನೂತನ ಸಾಧನೆ ಮಾಡಿದ್ದು, ಹೊಸ ಹೊಸ ಉದ್ಯಮಗಳನ್ನು ಕೈಗೊಂಡು ಅಪಾರ ಸಂಪತ್ತನ್ನು ಕಲೆಹಾಕಿದ್ದಾರೆ ಎಂದು ಫೋರ್ಬ್ಸ್‌ ಹೇಳಿದೆ.

ಈ 80 ಅತೀ ಸಿರಿವಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಮಹಿಳೆಯರೆಂದರೆ :

1. ಅರಿಷ್ಟಾ ನೆಟ್‌ ವರ್ಕ್‌ನ ಅಧ್ಯಕ್ಷೆ ಮತ್ತು ಸಿಇಓ ಆಗಿರುವ ಜಯಶ್ರೀ ಉಳ್ಳಾಲ್‌;

2. ಐಟಿ ಕನ್‌ಸಲ್ಟಿಂಗ್‌ ಮತ್ತು ಹೊರಗುತ್ತಿಗೆ ಸಂಸ್ಥೆಯಾಗಿರುವ ಸಿಂಟೆಲ್‌ ನ ಸಹ ಸ್ಥಾಪಕಿ ನೀರಜಾ ಸೇಟಿ;

Advertisement

3. ಸ್ಟ್ರೀಮಿಂಗ್‌ ಡೇಟಾ ಟೆಕ್ನಾಲಜಿ ಕಂಪೆನಿ Confluent ನ ಸಿಟಿಓ ಮತ್ತು ಸಹಸ್ಥಾಪಕಿಯಾಗಿರುವ ನೇಹಾ ನಾರ್‌ಖೇಡೆ.

ಸ್ವಪ್ರಯತದ ಸಿರಿವಂತ ಅಮೆರಿಕನ್‌ ಮಹಿಳೆಯರು 2019ರ ಪಟ್ಟಿಯಲ್ಲಿ ಭಾರತದ ಈ ಮೂವರು ಮಹಿಳೆಯರು ತಮ್ಮ ಅತ್ಯಪೂರ್ವ ಔದ್ಯಮಿಕ ಸಿದ್ಧಿ-ಸಾಧನೆಗಳಿಂದ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವವರು ಎಬಿಸಿ ಸಪ್ಲೆ„ ಕಂಪೆನಿಯ ಅಧ್ಯಕ್ಷೆ ಡಯನ್‌ ಹೆಂಡ್ರಿಕ್ಸ್‌. ಈಕೆಯ ಕಂಪೆನಿಯು ರೂಫಿಂಗ್‌, ಸೈಡಿಂಗ್‌ ಮತ್ತು ವಿಂಡೋಸ್‌ ಸಲಕರಣೆಗಳ ಅಮೆರಿಕದ ಅತೀ ದೊಡ್ಡ ವಿತರಣ ಸಂಸ್ಥೆಯಾಗಿದೆ. 72ರ ಹರೆಯದ ಈಕೆ ಏಳು ಶತಕೋಟಿ ಡಾಲರ್‌ ಸಂಪತ್ತಿನ ಒಡತಿ.

ಈ ಪಟ್ಟಿಯಲ್ಲಿರುವ 58ರ ಹರೆಯದ ಉಳ್ಳಾಲ್‌ 18ನೇ ಸ್ಥಾನಿ; ಈಕೆಯ ನೆಟ್‌ ವರ್ತ್‌ 1.4 ಶತಕೋಟಿ ಡಾಲರ್‌. ಈಕೆ ತನ್ನ ಅರಿಷ್ಟ ಕಂಪೆನಿಯ ಶೇ.5ರ ಒಡೆತನವನ್ನು ಹೊಂದಿದ್ದಾರೆ. ಈಕೆ ಹುಟ್ಟಿದ್ದು ಲಂಡನ್‌ನಲ್ಲಿ, ಬೆಳೆದದ್ದು ಭಾರತದಲ್ಲಿ.

23ನೇ ಸ್ಥಾನಿಯಾಗಿರುವ ಸೇಟಿ ಅವರು ಪತಿ ಭರತ್‌ ದೇಸಾಯಿ ಜತೆಗೂಡಿ 1980ರಲ್ಲಿ ಸಿಂಟೆಲ್‌ ಕಂಪೆನಿ ಸ್ಥಾಪಿಸಿದರು. ಈಕೆಯ ನೆಟ್‌ ವರ್ತ್‌ ಈಗ ಒಂದು ಶತಕೋಟಿ ಡಾಲರ್‌.

ಪಟ್ಟಿಯಲ್ಲಿ 60ನೇ ಸ್ಥಾನಿಯಾಗಿರುವ 34ರ ಹರೆಯದ ನಾರ್‌ಖೇಡೆ ಅವರ ನೆಟ್‌ ವರ್ತ್‌ 360 ದಶಲಕ್ಷ ಡಾಲರ್‌.

 

Advertisement

Udayavani is now on Telegram. Click here to join our channel and stay updated with the latest news.

Next