ಮಣಿಪಾಲ: ವಿಶ್ವಕ್ಕೆ ಎದುರಾದ ಸಾಂಕ್ರಾಮಿಕ ಪಿಡುಗಿನಿಂದ ಜಗತ್ತಿನ ಶೇ.81ರಷ್ಟು ಉದ್ಯೊಗಿಗಳು ಸಂಕಷ್ಟಕ್ಕೆ ಸಿಲುಕಲಿದ್ದು, 2ನೇ ಮಹಾಯುದ್ಧದ ನಂತರ ನಿರುದ್ಯೋಗದ ಪ್ರಮಾಣ ದಾಖಲೆ ಮಟ್ಟದಲ್ಲಿ ಹೆಚ್ಚಾಗಲಿದೆ ಎಂಬ ಸಂದೇಶ ಹೊರಬೀಳುತ್ತಲೇ ಇವೆ.
ಅದರಲ್ಲೂ ಅಮೆರಿಕ ಲಾಕ್‌ಡೌನ್‌ನಿಂದಾಗಿ ಆರ್ಥಿಕವಾಗಿ ನಲುಗಿದ್ದು, ನಿರುದ್ಯೋಗಿಗಳ ಸಂಖ್ಯೆ ದುಪ್ಪಟ್ಟಾಗಿರುವುದು ತಲೆನೋವಾಗಿದೆ. ಆದರೆ ಇದೀಗ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿಗೆ ಒಳಗಾಗಿರುವುದೂ ಅಮೆರಿಕ ಎಂಬುದೇ ವಿಪರ್ಯಾಸ.
ಕೋವಿಡ್ 19 ಆರಂಭವಾದ 5 ವಾರಗಳಲ್ಲಿ ಸರಿಸುಮಾರು 2.6 ಕೋಟಿ ಜನರು ನಿರುದ್ಯೋಗ ಸಹಾಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್ ಮಧ್ಯಂತರ ಬಳಿಕ ಅಮೆರಿಕದ ಆರು ಕಾರ್ಮಿಕರಲ್ಲಿ ಓರ್ವರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇದು ದಾಖಲೆಯಲ್ಲಿ ಸಿಕ್ಕದ್ದು. ಏಪ್ರಿಲ್‌ನಲ್ಲಿ ನಿರುದ್ಯೋಗ ದರವು ಶೇ.20ರಷ್ಟು ಹೆಚ್ಚಾಗಬಹುದು ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು.
ಆರ್ಥಿಕ ಹಿಂಜರಿತ ಆತಂಕಕ್ಕೆ ಒಳಗಾ ಅಮೆರಿಕದಲ್ಲಿ ಉದ್ಯೋಗ ಕಡಿತವು ಉಲ್ಬಣಗೊಂಡಿದೆ. ಕಳೆದ ವಾರ ನಿರುದ್ಯೋಗ ಸವಲತ್ತುಗಳಿಗೆ ಕೆಲಸದಿಂದ ವಜಾಗೊಂಡ 44 ಲಕ್ಷಕ್ಕೂ ಅಧಿಕ ಕಾರ್ಮಿಕರು ಅರ್ಜಿ ಸಲ್ಲಿಸಿದ್ದಾರೆ. ಉದ್ಯೋಗ ಕಡಿತದ ಅಗಾಧ ಪ್ರಮಾಣವು 1930ರ ಮಹಾ ಆರ್ಥಿಕ ಕುಸಿತದ ನಂತರ ಇದೇ ಮೊದಲ ಬಾರಿಗೆ ಇಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಮೂಲಕ 2008-2009ರ ಆರ್ಥಿಕ ಹಿಂಜರಿತ ಕೊನೆಗೊಂಡ ಬಳಿಕ ನಿರುದ್ಯೋಗ ಭತ್ಯೆ ಪಡೆಯು ತ್ತಿರುವ ಒಟ್ಟು ಜನರ ಸಂಖ್ಯೆ 16 ಮಿಲಿಯನ್ ತಲುಪಿದೆ. ಜಾರ್ಜಿಯಾದಲ್ಲಿ ಜಿಮ್, ಹೇರ್‌ಸಲೂನ್ ತೆರೆದಿ ದ್ದರೆ, ಟೆಕ್ಸಾಸ್ ರಾಜ್ಯ ಉದ್ಯಾನಗಳಲ್ಲಿ ವಿಹಾರಕ್ಕೆ ಅವಕಾಶ ನೀಡುತ್ತಿದೆ.