Advertisement

USA: ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿಂದೂ ನಂಬಿಕೆಯೇ ವಿವೇಕ್‌ ಶಸ್ತ್ರ !

09:22 PM Aug 06, 2023 | Team Udayavani |

ವಾಷಿಂಗ್ಟನ್‌:ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಭಾರತೀಯ ಮೂಲದವರಾದ ವಿವೇಕ್‌ ರಾಮಸ್ವಾಮಿ ಅವರ ವಾಕ್ಚಾತುರ್ಯಕ್ಕೆ ಅಮೆರಿಕದ ಮಂದಿ ತಲೆದೂಗುತ್ತಿರುವ ನಡುವೆಯೇ, ಇದೀಗ ಅಮೆರಿಕದ ಕ್ರಿಶ್ಚಿಯನ್ನರನ್ನು ಹಿಂದೂ ಧರ್ಮದ ಮೂಲಕ ವಿವೇಕ್‌ ಸೆಳೆಯುತ್ತಿದ್ದಾರೆ.

Advertisement

ಇತ್ತೀಚೆಗೆಷ್ಟೇ ವಿವೇಕ್‌ ತಮ್ಮ ಚುನಾವಣೆ ಪ್ರಚಾರದಲ್ಲಿ ತಾವು ಬಲವಾಗಿ ಪ್ರತಿಪಾದಿಸುವ 10 ವಿಚಾರಗಳನ್ನು ಜನರ ಮುಂದಿಟ್ಟಿದ್ದಾರೆ. ಅದರಲ್ಲಿ ಮೊದಲನೆಯದೇ “ದೇವರು ಇದ್ದಾನೆ’ ಎಂಬ ನಂಬಿಕೆ ! ಸಂವಾದವೊಂದರಲ್ಲಿ ಈ ಕುರಿತು ಮಾತನಾಡಿದ ಅವರು, ನಮ್ಮೆಲ್ಲರ ಸಾಮರ್ಥ್ಯಕ್ಕೆ ಅನುಗುಣವಾಗಿ ನಮಗೇನು ನೀಡಬೇಕೋ, ಅದನ್ನು ನೀಡುವ ಒಬ್ಬನಿದ್ದಾನೆ, ಆತನೇ ದೇವರು ಎನ್ನುವ ನಂಬಿಕೆ ಇರುವ ಸಂಸ್ಕೃತಿಯಲ್ಲಿ ನಾನು ಬೆಳೆದಿದ್ದೇನೆ, ಹಿಂದೂ ಧರ್ಮ ಎಲ್ಲರಲ್ಲೂ ಪರಮಾತ್ಮನಿದ್ದಾನೆ ಎಂದಿದೆ ! ಕ್ರೈಸ್ತ ಧರ್ಮ ನಮ್ಮೆಲ್ಲರನ್ನೂ ಪರಮಾತ್ಮ ಸೃಷ್ಟಿಸಿದ್ದಾನೆ ಎನ್ನುತ್ತದೆ! ಇವೆರಡೂ ಒಂದೇ.. ಹಾಗಾಗಿ ನಾನು ಕ್ರೈಸ್ತಪರ ರಾಷ್ಟ್ರವಾದಿ ಎಂದು ಹೇಳಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next