ಪೆರು(ಲಿಮಾ): ಸುಮಾರು 22ವರ್ಷಗಳ ಹಿಂದೆ ಪೆರುವಿನಲ್ಲಿ ಪರ್ವತಾರೋಹಣ ಸಂದರ್ಭದಲ್ಲಿ ಸಂಭವಿಸಿದ ಭಾರೀ ಹಿಮಪಾತದಿಂದಾಗಿ ಕಣ್ಮರೆಯಾಗಿದ್ದ ಪರ್ವತಾರೋಹಿಯ ಶವ ಹವಾಮಾನ ವೈಪರೀತ್ಯದಿಂದ ಮಂಜುಗಡ್ಡೆ ಕರಗಿದ ಪರಿಣಾಮ ಮಮ್ಮಿ(ಶವ) ಪತ್ತೆಯಾಗಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Bigg Boss OTT 3: ಬಿಗ್ ಬಾಸ್ ಮನೆಯೊಳಗೆ ಹಾವು ಪ್ರತ್ಯಕ್ಷ; ವಿಡಿಯೋ ವೈರಲ್
2002ರ ಜೂನ್ ನಲ್ಲಿ ಪರ್ವತಾರೋಹಿ ವೀಲಿಯಮ್ ಸ್ಟ್ಯಾಂಫ್ಲ್ (59ವರ್ಷ) ಹಿಮಪಾತದಿಂದಾಗಿ ಜೀವಂತವಾಗಿ ಸಮಾಧಿಯಾಗಿದ್ದರು. ಈ ಘಟನೆ 22,000 ಸಾವಿರ ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ನಡೆದಿತ್ತು. ರಕ್ಷಣಾ ತಂಡ ಶೋಧ ಕಾರ್ಯ ನಡೆಸಿದ್ದರು ಕೂಡಾ ಶವ ಪತ್ತೆಯಾಗಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
ಕೊನೆಗೂ 22 ವರ್ಷಗಳ ನಂತರ ಆಂಡಿಸ್ ನ ಕಾರ್ಡಿಲ್ಲೆರಾ ಬ್ಲಾಂಕಾ ಪರ್ವತ ಶ್ರೇಣಿಯಲ್ಲಿ ಮಂಜುಗಡ್ಡೆ ಕರಗುವ ಮೂಲಕ ಪರ್ವತಾರೋಹಿಯ ಶವದ ಅವಶೇಷ ಪತ್ತೆಯಾಗಿರುವುದಾಗಿ ಪೆರು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಜುಗಡ್ಡೆಯಿಂದಾಗಿ ಸ್ಟ್ಯಾಂಫ್ಲ್ ದೇಹ, ಬಟ್ಟೆ ಕೊಳೆಯದೇ ಮಮ್ಮಿ ರೀತಿ ಸಂರಕ್ಷಿಸಲ್ಪಟ್ಟಿರುವುದಾಗಿ ಪೆರು ಪೊಲೀಸರು ತಿಳಿಸಿದ್ದಾರೆ. ಪ್ಯಾಂಟ್ ಕಿಸೆಯಲ್ಲಿದ್ದ ಪಾಸ್ ಪೋರ್ಟ್ ಮೂಲಕ ಗುರುತು ಪತ್ತೆಹಚ್ಚಲು ಸಾಧ್ಯವಾಗಿರುವುದಾಗಿ ವರದಿ ವಿವರಿಸಿದೆ.