Advertisement
ಈ ಮೂಲಕ ಈಗಾಗಲೇ ನೆರೆ ದೇಶಗಳ ಜತೆಗೆ ತಿಕ್ಕಾಟ ಆರಂಭಿಸಿರುವ ಚೀನಕ್ಕೆ ಪರೋಕ್ಷವಾಗಿ ಸಮರದ ಬೆದರಿಕೆಯೊಡ್ಡಿದೆ. ಅಷ್ಟೇ ಅಲ್ಲ, ಚೀನ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಐರೋಪ್ಯ ಒಕ್ಕೂಟದ ದೇಶಗಳ ಜತೆಗೆ ಮಾತುಕತೆ ಆರಂಭಿಸುವುದಾಗಿ ಅಮೆರಿಕ ಹೇಳಿದೆ.
ವಿಚಾರದಲ್ಲೂ ಭಾರತದ ಜತೆ ನಿಲ್ಲುವ ಮುನ್ಸೂಚನೆ ನೀಡಿರುವ ಅಮೆರಿಕವು ಸಮರಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದೆ. ಚೀನದಿಂದ ತೊಂದರೆ ಅನುಭವಿಸುತ್ತಿರುವ ಎಲ್ಲ ದೇಶಗಳಿಗೂ ಸೇನಾ ಬೆಂಬಲ ನೀಡುವುದಾಗಿ ಘೋಷಿಸಿದೆ.
Related Articles
Advertisement
ಚೀನದ ವಸ್ತು ಮುಕ್ತ ಹಬ್ಬಚೀನದ ಉತ್ಪನ್ನಗಳನ್ನು ಬಹಿಷ್ಕರಿಸಲು ಅಖೀಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ವಿನೂತನ ಹೆಜ್ಜೆ ಇಟ್ಟಿದೆ. ಚೀನ ಉತ್ಪನ್ನಮುಕ್ತ ಹಬ್ಬಕ್ಕೆ ಕರೆಕೊಟ್ಟಿದೆ. ರಕ್ಷಾಬಂಧನ, ಜನ್ಮಾಷ್ಟಮಿ, ಗಣೇಶ ಚತುರ್ಥಿ, ದೀಪಾವಳಿ ಸಹಿತ ಎಲ್ಲ ಉತ್ಸವಗಳಲ್ಲಿ ಚೀನದ ವಸ್ತುಗಳ ಬಳಕೆ ನಿಲ್ಲಿಸಲು ಸೂಚಿಸಿದೆ. ದೇಶೀ ನಿರ್ಮಿತ ವಸ್ತುಗಳನ್ನಷ್ಟೇ ಮಾರಲು ನಿರ್ಧರಿಸಿದೆ. ಶತಮಾನಗಳಷ್ಟು ಹಳೆಯದಾದ ಭಾರತೀಯ ಸಂಸ್ಕೃತಿಯಲ್ಲಿ ಚೀನದ ಸರಕುಗಳ ಹಾವಳಿ ಹೆಚ್ಚಾಗಿದೆ. ಅವು ಗಳನ್ನು ಬಹಿಷ್ಕರಿಸುವ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇವೆ ಎಂದು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಾಂಡೇಲ್ವಾಲ್ ಹೇಳಿದ್ದಾರೆ. ಲೇಹ್‌ನಲ್ಲಿ ಐಎಎಫ್ ಗಸ್ತು
ಭಾರತೀಯ ವಾಯುಪಡೆ ಲೇಹ್‌ನಲ್ಲಿ ಕಾರ್ಯಚಟುವಟಿಕೆ ಹೆಚ್ಚಿಸಿದೆ. ಎಲ್‌ಎಸಿ ಬಳಿ ಭಾರತದ ಸೇನಾ ಹೆಲಿಕಾಪ್ಟರ್ ಮತ್ತು ಯುದ್ಧ ವಿಮಾನಗಳ ಗಸ್ತು ತೀವ್ರವಾಗಿದೆ. ಸೇನೆಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ವಾಯುಪಡೆಯ ಸಮರ ವಿಮಾನಗಳು ಸಾಗಾಟ ಮಾಡುತ್ತಿವೆ. ಮೂರು ಸಮರ ನೌಕೆ ರವಾನೆ
ಅಮೆರಿಕದ ಮೂರು ಸಮರ ನೌಕೆಗಳು ದಕ್ಷಿಣ ಚೀನ ಸಮುದ್ರದತ್ತ ಸಾಗಿರುವುದು ಸೇನೆಯ ಮರುನಿಯೋಜನೆಗಿಂತ ಪ್ರಮುಖ ವಿಚಾರ. ಇವುಗಳಲ್ಲಿ ಥಿಯೊಡೋರ್ ರೂಸ್‌ವೆಲ್ಟ್ ಸಮರ ನೌಕೆ ಅತ್ಯಂತ ದೊಡ್ಡದು. ಇದನ್ನೇ ರವಾನಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಏನೇ ಪರಿಸ್ಥಿತಿ ಎದುರಾದರೂ ಎದುರಿಸಲೇಬೇಕು ಎಂಬ ನಿರ್ಧಾರಕ್ಕೆ ಅಮೆರಿಕ ಬಂದಂತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಸಮರನೌಕೆ ರೂಸ್‌ವೆಲ್ಟ್ ವಿಶೇಷ
ಯುಎಸ್‌ಎಸ್ ರೂಸ್‌ವೆಲ್ಟ್ ಸಮರ ನೌಕೆಯು ಭಾರತ ಮತ್ತು ಚೀನದ ಸಮರ ನೌಕೆಗಳಿಗಿಂತ ಮೂರು ಪಟ್ಟು ದೊಡ್ಡದು. ಇದರಲ್ಲಿ ಕ್ರೂéಸರ್ಸ್, ವಿನಾಶಕ ಸ್ಕ್ವಾಡ್ರನ್ ಮತ್ತು ಸಬ್‌ಮೆರಿನ್‌ಗಳನ್ನು ಒಯ್ಯಬಹುದು. ಒಂದು ವೇಳೆ ಚೀನ ಮತ್ತು ಪಾಕ್ ಒಂದಾಗಿ ದಾಳಿ ಮಾಡಿದರೂ ಇದೇ ನೌಕೆ ಬಳಸಿಕೊಂಡು ಪ್ರತಿದಾಳಿ ನಡೆಸಬಹುದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಎಲ್ಲೆಲ್ಲಿ ನಿಯೋಜನೆ?
ಜರ್ಮನಿಯಿಂದ ಬಂದಿರುವ ಈ ಮೂರು ಸಮರ ನೌಕೆಗಳನ್ನು ಬೇರೆ ಬೇರೆ ಕಡೆಗಳಲ್ಲಿ ನಿಯೋಜಿಸಲಾಗಿದೆ. ಒಂದು ನೌಕೆ ಪೆಸಿಫಿಕ್ ಕರಾವಳಿ, ಮತ್ತೂಂದು ಫಿಲಿಪ್ಪೀನ್ಸ್ ಬಳಿ ಮತ್ತು ಮೂರನೆಯದನ್ನು ವಿಯೆಟ್ನಾಂ ಬಳಿ ನಿಯೋಜಿಸಲಾಗಿದೆ. ಸಮರವೇನಾದರೂ ಆರಂಭವಾದರೆ ಈ ಮೂರನ್ನೂ ಮಲಕ್ಕಾ ಖಾರಿ ಮತ್ತು ಬಂಗಾಲಕೊಲ್ಲಿಗೆ ಕಳುಹಿಸಲಾಗುತ್ತದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಿಂಗ್ – ಜ| ನರವಾಣೆ ಭೇಟಿ
ರಷ್ಯಾದ ವಿಕ್ಟರಿ ಪರೇಡ್‌ನಲ್ಲಿ ಪಾಲ್ಗೊಂಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಭಾರತಕ್ಕೆ ಮರಳಿದ್ದಾರೆ. ಎರಡು ದಿನ ಲಡಾಖ್‌ನಲ್ಲಿದ್ದು ಎಲ್‌ಎಸಿಯ ವಾಸ್ತವ ಸ್ಥಿತಿ ಪರಿಶೀಲಿಸಿರುವ ಸೇನಾಪಡೆಗಳ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಅವರು ರಕ್ಷಣಾ ಸಚಿವರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಶೀಘ್ರವೇ ಸಚಿವರು, ಪ್ರಧಾನಿ ಅವರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆ ಇದೆ. ಜರ್ಮನಿಯಲ್ಲಿ ಸೈನಿಕರ ಇಳಿಕೆ
ಅಧ್ಯಕ್ಷ ಟ್ರಂಪ್ ನಿರ್ದೇಶನದ ಮೇರೆಗೆ ಸೇನೆ ನಿಯೋಜನೆಯ ಮರುಪರಿಶೀಲನೆ ನಡೆಸುತ್ತಿದ್ದೇವೆ. ಇದರ ಭಾಗವಾಗಿ ಅಮೆರಿಕ ಜರ್ಮನಿ ಯಲ್ಲಿ ಸೈನಿಕರ ಸಂಖ್ಯೆಯನ್ನು 52 ಸಾವಿರದಿಂದ 25 ಸಾವಿರಕ್ಕೆ ಇಳಿಸುತ್ತಿದೆ ಎಂದು ಪೋಂಪೆಯೊ ಹೇಳಿದ್ದಾರೆ. ಪೋಂಪೆಯೊ ಹೇಳಿದ್ದೇನು?
ಚೀನವು ಈಗ ಭಾರತದ ಜತೆ ಜಗಳಕ್ಕೆ ನಿಂತಿದೆ. ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌ಗಳಿಗೂ ಬೆದರಿಕೆ ಹಾಕುತ್ತಿದೆ. ಈ ರಾಷ್ಟ್ರಗಳಿಗೆ ಬೆಂಬಲವಾಗಿ ಅಮೆರಿಕ ಪಡೆಗಳು ಕೆಲಸ ಮಾಡಲಿವೆ. ಮಿತ್ರ ರಾಷ್ಟ್ರ ಮತ್ತು ಐರೋಪ್ಯ ರಾಷ್ಟ್ರಗಳ ಸಲಹೆ, ಬೆಂಬಲ ಪಡೆದೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ ಪೋಂಪೆಯೊ. ಚೀನ ಬಹಿಷ್ಕಾರ ಬಲವತ್ತರ!
ಭಾರತೀಯ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸುವ ಕಾನ್ಪುರ ನಗರವೂ ಚೀನದ ವಸ್ತುಗಳನ್ನು ಬಹಿಷ್ಕರಿಸಿದೆ. ಇಲ್ಲಿನ ಸಂಸ್ಥೆಗಳು ಚೀನದಿಂದ ಆಮದು ಮಾಡಿಕೊಂಡ ಕಚ್ಚಾವಸ್ತುಗಳನ್ನು ಈ ಜಾಕೆಟ್ ತಯಾರಿಗೆ ಬಳಸುತ್ತಿದ್ದವು. ಈಗ ಇವು ಯುರೋಪ್ ಮತ್ತು ಅಮೆರಿಕದ ಸಂಸ್ಥೆಗಳತ್ತ ಮುಖ ಮಾಡಿವೆ ಎಂದು ಪಿಟಿಐ ವರದಿ ಮಾಡಿದೆ.