Advertisement

ಪೋಲಿಯೋ ನಿಯಂತ್ರಣಕ್ಕೆ ಅಮೆರಿಕ ಹಲವು ಕ್ರಮ

09:25 PM Sep 11, 2022 | Team Udayavani |

ಕೊಲೊರೆಡೊ: ಅಮೆರಿಕದಲ್ಲಿ ಕಳೆದ 4 ದಶಕಗಳಲ್ಲೇ ಮೊದಲ ಪೋಲಿಯೋ ಪ್ರಕರಣ ಪತ್ತೆಯಾಗಿದ್ದು, ನಾಗರಿಕರು ಆತಂಕಕ್ಕೊಳಗಾಗಿದ್ದಾರೆ.

Advertisement

ನ್ಯೂಯಾರ್ಕ್ ನಲ್ಲಿ ಜು.21ರಂದು ವ್ಯಕ್ತಿಯೊಬ್ಬರಲ್ಲಿ ಪೋಲಿಯೋ ವೈರಸ್‌ ದೃಢಪಟ್ಟಿತ್ತು. ಕೂಡಲೇ ಎಚ್ಚೆತ್ತುಕೊಂಡಿರುವ ಅಮೆರಿಕ ಆರೋಗ್ಯ ಇಲಾಖೆ, ಪೋಲಿಯೋ ನಿಯಂತ್ರಣ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ.

ಮಗು ಎರಡು ತಿಂಗಳು ಇರುವಾಗ ಒಮ್ಮೆ, ಅದೇ ರೀತಿ ನಾಲ್ಕು ತಿಂಗಳು ಮತ್ತು 6ರಿಂದ 15 ತಿಂಗಳ ಒಳಗಾಗಿ ಒಟ್ಟು ಮೂರು ಡೋಸ್‌ ಪೊಲಿಯೊ ಲಸಿಕೆ ಪಡೆಯುವುದನ್ನು ಅಮೆರಿಕ ಸರ್ಕಾರ ಕಡ್ಡಾಯಗೊಳಿಸಿದೆ.

ಅಲ್ಲದೇ ಮಗುವಿದ್ದಾಗ ಲಸಿಕೆ ಪಡೆಯದ ವಯಸ್ಕರು ಕೂಡ ಈಗ ಲಸಿಕೆ ಪಡೆಯುವಂತೆ ಅಮೆರಿಕ ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next