Advertisement
ನೀತಿಸಂಹಿತೆ ಜಾರಿಯಿಂದ ಅರ್ಜಿ ಸಲ್ಲಿಕೆ ಅವಧಿ ಪೂರ್ಣವಾಗಿರಲಿಲ್ಲ. ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೂ ಅಡ್ಡಿಯಾಗಿದೆ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತಂದು ಹೊಸದಾಗಿ ಅರ್ಜಿ ಸ್ವೀಕಾರ ಮತ್ತು ಅಂತಿಮ ದಿನಾಂಕ ನಿಗಪಡಿಸಲು ಸರಕಾರ ಚಿಂತನೆ ನಡೆಸಿದೆ.
1964ರ ಕಲಂ 94ಎ (4)ಗೆ 2018ರ ಮಾ. 17ರಂದು ತಿದ್ದುಪಡಿ ತಂದು 2018ರ ಅ. 25ರಂದು ಮಾರ್ಗಸೂಚಿ ಪ್ರಕಟಿಸಲಾಗಿತ್ತು. 2019ರ ಮಾ. 16ಕ್ಕೆ ಅರ್ಜಿ ಸಲ್ಲಿಕೆಗೆ ಕೊನೆ ದಿನ ನಿಗದಿಪಡಿಸಿ ಸುತ್ತೋಲೆ ಹೊರಡಿಸ
ಲಾಗಿತ್ತು. ಮಾ. 10ರಿಂದ ನೀತಿಸಂಹಿತೆ ಜಾರಿಗೊಂಡದ್ದು ಕೊನೆಯ 6 ದಿನ ಅರ್ಜಿ ಸಲ್ಲಿಸಲು ಅಡ್ಡಿಯಾಗಿತ್ತು. ಇದರಿಂದ ಮಾ. 16 ಕೊನೆಯ ದಿನಾಂಕ ಎಂದು ಪರಿಗಣಿಸಲು ಸಾಧ್ಯವಾಗದೆ ಇಡೀ ಪ್ರಕ್ರಿಯೆಯೇ ಅರ್ಧಕ್ಕೆ ನಿಂತುಬಿಟ್ಟಿದೆ. ವಿಲೇವಾರಿಗೂ ತೊಡಕು ಶಾಸಕರ ಅಧ್ಯಕ್ಷತೆಯ ಅಕ್ರಮ-ಸಕ್ರಮ ಸಮಿತಿ ಅರ್ಜಿ ವಿಲೇವಾರಿಯ ಅಧಿಕಾರ ಹೊಂದಿದೆ. ಸರಕಾರ ಕಾಯ್ದೆಗೆ ತಿದ್ದುಪಡಿ ತಂದು, ಹೊಸ ಅಂತಿಮ ದಿನಾಂಕ ನಿಗದಿಪಡಿಸಿದ ಬಳಿಕವೇ ಸಮಿತಿ ಅರ್ಜಿ ವಿಲೇ ಮಾಡಬಹುದು ಅನ್ನುವುದು ಕಂದಾಯ ಅಧಿಕಾರಿಗಳ ಅಭಿಪ್ರಾಯ. ಕಾಯ್ದೆಗೆ ತಿದ್ದುಪಡಿ ತಂದಲ್ಲಿ ಚುನಾವಣ ನೀತಿಸಂಹಿತೆ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇದ್ದವರಿಗೆ ಮತ್ತೆ ಅವಕಾಶ ಸಿಗಲಿದೆ. ಮೂರು ಅವಕಾಶ
1964ರ ಕರ್ನಾಟಕ ಭೂ ಕಂದಾಯ ಕಾಯ್ದೆಗೆ 1991ರಲ್ಲಿ ತಿದ್ದುಪಡಿ ತಂದು ನಮೂನೆ-50ರಲ್ಲಿ ಆರು ತಿಂಗಳ ಕಾಲ ಅರ್ಜಿ ಸ್ವೀಕಾರ ನಡೆದಿತ್ತು. ಬಾಕಿ ಉಳಿದವರಿಗೆ 1998ರ ನ. 1ರಿಂದ 1999ರ ಎ. 30ರ ವರೆಗೆ ನಮೂನೆ-53ರಲ್ಲಿ ಮತ್ತು 2018ರ ನವೆಂಬರ್‌ನಿಂದ ನಮೂನೆ -57ರಲ್ಲಿ ಅರ್ಜಿ ಸಲ್ಲಿಸಲು ನೀಡಲಾಗಿತ್ತು. ಹಾಗಾಗಿ ಇದು ಮೂರನೆಯ ಅವಕಾಶ.
Related Articles
ನಮೂನೆ 50 ಮತ್ತು 53ರಲ್ಲಿ ಉಭಯ ಜಿಲ್ಲೆಗಳಲ್ಲಿ 1,02,934 ಅರ್ಜಿದಾರರ 3.47 ಲಕ್ಷ ಎಕರೆ ಅನಧಿಕೃತ ಸಾಗುವಳಿ ಭೂಮಿ ಸಕ್ರಮವಾಗಿದೆ.
Advertisement
ಗರಿಷ್ಠ-ಕನಿಷ್ಠದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 2.34 ಲಕ್ಷ ಎಕರೆ ಅನಧಿಕೃತ ಸಾಗುವಳಿ ಸಕ್ರಮಕ್ಕೆ 1,26,576 ಅರ್ಜಿ ಸಲ್ಲಿಕೆಯಾಗಿವೆ. ದ.ಕ. ಜಿಲ್ಲೆಯಲ್ಲಿ 158,816.89 ಎಕರೆ ಸಾಗುವಳಿ ಸಕ್ರಮಕ್ಕೆ 88,549 ಅರ್ಜಿ ಮತ್ತು ಉಡುಪಿ ಜಿಲ್ಲೆಯಲ್ಲಿ 76,013.36 ಎಕರೆ ಸಕ್ರಮಕ್ಕೆ 38,027 ಅರ್ಜಿ ಸಲ್ಲಿಸಲಾಗಿದೆ. ಆಯಾ ತಾಲೂಕು ಕಚೇರಿ ಕಡತ ನಿರ್ವಾಹಕರು ನೀಡಿದ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ 31,123 ಅರ್ಜಿ (ಗರಿಷ್ಠ), ಮೂಲ್ಕಿ 125 (ಕನಿಷ್ಠ) ಅರ್ಜಿ ಸಲ್ಲಿಕೆಯಾಗಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ 18,651 (ಗರಿಷ್ಠ), ಕಾಪುವಿನಲ್ಲಿ 206 (ಕನಿಷ್ಠ) ಸಲ್ಲಿಕೆಯಾಗಿದೆ.
ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ-57ರಲ್ಲಿ ಅರ್ಜಿ ಸಲ್ಲಿಕೆ ಸಂದರ್ಭ ಚುನಾವಣೆ ನೀತಿಸಂಹಿತೆ ಜಾರಿ ಆಗಿ ಅವಧಿ ಮುಂದಕ್ಕೆ ಹೋಯಿತು. ಮುಂದುವರಿಸಬೇಕಾದರೆ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ತತ್‌ಕ್ಷಣ ಸರಕಾರ ಪೂರಕ ಕ್ರಮ ಕೈಗೊಳ್ಳಲಿದೆ.
– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ, ದ.ಕ. – ಕಿರಣ್ ಪ್ರಸಾದ್ ಕುಂಡಡ್ಕ