Advertisement

ಅಯೋಧ್ಯೆ:ಶಿಥಿಲ ದೇಗುಲ,ಕಟ್ಟಡಗಳನ್ನು ನೆಲಸಮಗೊಳಿಸಲು ನೊಟೀಸ್‌ 

12:19 PM Dec 15, 2018 | |

ಅಯೋಧ್ಯೆ: ನಗರದಲ್ಲಿರುವ ಶಿಥಿಲಗೊಂಡಿರುವ ದೇವಾಲಯಗಳು ಮತ್ತು ಕಟ್ಟಡಗಳ ನೆಲಸಮಗೊಳಿಸುವ ಸಲುವಾಗಿ ಮುನ್ಸಿಪಲ್‌ ಕಾರ್ಪೋರೇಷನ್‌ ಅಧಿಕಾರಿಗಳು ಮಾಲೀಕರಿಗೆ ಮತ್ತು ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಿಗೆ ನೊಟೀಸ್‌ ನೀಡಿದ್ದಾರೆ.

Advertisement

ಜನರಿಗೆ ಒಂದೋ ಶಿಥಿಲ ಕಟ್ಟಡಗಳನ್ನು ನವೀಕರಿಸಲು ಅವಕಾಶ ನೀಡಲಾಗಿದೆ. ಇಲ್ಲವಾದಲ್ಲಿ ಅಪಾಯಕಾರಿ ಎನಿಸುವ ಕಟ್ಟಡಗಳು ಮತ್ತು ದೇಗುಲಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ.

ಎಎಂಸಿ ಕಮಿಷನರ್‌ ಆರ್‌.ಎಸ್‌.ಗುಪ್ತಾ ಅವರು ಮಾತನಾಡಿ ಹಲವರು ಈಗಾಗಲೇ ಕಟ್ಟಡಗಳನ್ನು ನವೀಕರಿಸಿದ್ದಾರೆ. ಬೇಕಾದರೆ ಶಿಥಿಲ ಕಟ್ಟಡವನ್ನು ನಾವು ಕೂಡ ನೆಲಸಮಗೊಳಿಸಿ ನೀಡುತ್ತೇವೆ ಎಂದು ಹೇಳಿದ್ದಾರೆ. 

Advertisement

176 ಕಟ್ಟಡಗಳನ್ನು ಗುರುತಿಸಿ ನೀಡಲಾಗಿದ್ದು,ಆ ಪೈಕಿ 56 ಕಟ್ಟಡಗಳ ಮಾಲೀಕರು ನವೀಕರಿಸಿದ್ದಾರೆ. 6 ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next