ಮಂಗಳೂರು: ನಗರದ ಸ್ಕ್ಯಾನಿಂಗ್ ಸೆಂಟರ್ವೊಂದರಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಜಪ್ಪಿನಮೊಗರು ನಿವಾಸಿ ಜಯರಾಜ್ (34) ನಾಪತ್ತೆಯಾಗಿದ್ದಾರೆ.
Advertisement
ಮೇ 29ರಂದು ಕೆಲಸಕ್ಕೆಂದು ಹೋದವರು ವಾಪಸಾಗಿಲ್ಲ ಎಂದು ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಗೋಧಿ ಮೈಬಣ್ಣ, ದುಂಡು ಮುಖ, 5.11 ಅಡಿ ಎತ್ತರ, ಸಾಧಾರಣ ಶರೀರ, ಕಪ್ಪು ತಲೆಕೂದಲು ಹಾಗೂ ತೆಳುವಾದ ಗಡ್ಡ ಮತ್ತು ಮೀಸೆ ಹೊಂದಿದ್ದಾರೆ. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಂಕನಾಡಿ ನಗರ ಪೊಲೀಸ್ ಠಾಣೆ (0824-2220529) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.