ಚಿಕ್ಕಮಗಳೂರು: ಹಾವಿನ ಸಂತತಿಯಲ್ಲೇ ಅತ್ಯಂತ ಅಪರೂಪವೆನಿಸಿದ ಬ್ಯಾಂಬೋ ಪಿಟ್ ವೈಫರ್ ಹಾವೊಂದು ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಬಳಿ ಸೆರೆಯಾಗಿದೆ.
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಹಾವು ಈಗ ಅಳಿವಿನಂಚಿಗೆ ತಲುಪಿದೆ, ಹೆಚ್ಚಾಗಿ ಬಿದಿರಿನ ಬಂಬಿನಲ್ಲಿ ವಾಸವಿರುವ ಬ್ಯಾಂಬೋ ಪಿಟ್ ವೈಫರ್ ಹಾವು ಕಳಸೇಶ್ವರ ದೇವಸ್ಥಾನದ ಪಕ್ಕದ ಚಂದ್ರು ಭಟ್ ಅವರ ಮನೆಯ ಅಂಗಳದಲ್ಲಿ ಕಾಣಿಸಿಕೊಂಡಿದೆ.
ತಲೆ ಮೇಲೆ ಬಿದ್ದ ನೀರನ್ನ ಹಾಗೇ ಹೀರಿಕೊಳ್ಳುವ ಅಪರೂಪದ ಲಕ್ಷಣ ಈ ಹಾವಿಗಿದೆ, ಈ ಹಾವುಗಳು ವಿಷಕಾರಿಯಲ್ಲ ಆದರೆ ಕಡಿದರೆ ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತದಂತೆ.
ಈ ಅಪರೂಪದ ಹಾವಿನ ಸೌಂದರ್ಯ ನೋಡಿ ಇಲ್ಲಿನ ಜನ ತಮ್ಮ ಮೊಬೈಲ್ ಗಳಲ್ಲಿ ಚಿತ್ರವನ್ನು ಸೆರೆಹಿಡಿದಿದ್ದಾರೆ. ಬಳಿಕ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದ ರಿಜ್ವಾನ್ ಅರಣ್ಯಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: ನಾನು ಮತ್ತೆ ಸಿಎಂ ಆಗಬೇಕೆ..? ಪ್ರಿಯಾಂಕಾ ಭವಿಷ್ಯದ ಬೆನ್ನಲ್ಲೇ ಜನರಿಗೆ ಚೌಹಾಣ್ ಪ್ರಶ್ನೆ