Advertisement

ಚೌಡಯ್ಯ ಕಾಯಕದಲ್ಲಿ ದೈವತ್ವ ಕಂಡ ಶರಣರು

06:03 PM Jan 23, 2021 | Team Udayavani |

ಹರಪನಹಳ್ಳಿ: ಅಂಬಿಗರ ಚೌಡಯ್ಯ ನಾಡು ಕಂಡ ಅಪರೂಪದ ಶರಣ. ಜಾತ್ಯತೀತ ಸಮಾಜ ಕಟ್ಟಬೇಕೆನ್ನುವ ಉದ್ದೇಶದಿಂದ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ಸಮಾಜದಲ್ಲಿನ ಮೂಢನಂಬಿಕೆ, ಡಾಂಭಿಕತನ, ಲೋಪದೋಷ ತೊಲಗಿಸಿ ನೇರ, ನಿಷ್ಠುರ ವಚನ ರಚಿಸುವ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ ಎಂದು ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್‌ ಹೇಳಿದರು.

Advertisement

ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಗುರುವಾರ ಏರ್ಪಡಿಸಲಾಗಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ:  ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

ನಿಜಶರಣ ಅಂಬಿಗರ ಚೌಡಯ್ಯನವರು ಕಾಯಕದಲ್ಲಿ ದೆ„ವತ್ವ ಕಂಡವರು. ಜಾತಿ, ಮತ, ಪಂಥದ ಹೆಸರಿನಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಕಂದಾಚಾರಗಳನ್ನು ತೊಲಗಿಸಿ, ವಚನಗಳ ಮೂಲಕ ಸಮಾಜದಲ್ಲಿ ಲೋಪದೋಷಗಳನ್ನು ತಿದ್ದಿ, ಸಮಾಜ ಸುಧಾರಣೆಗೆ ಶ್ರಮಿಸಿದವರು. ಅಂಬಿಗರ ಚೌಡಯ್ಯನವರ ಹೆಸರೆ ವಚನಗಳ ನಾಮಾಂಕಿತವಾಗಿತ್ತು. ಅದರಕ್ಕೆ ಕವಿ, ಉದರಕ್ಕೆ ಸಿಹಿ ಎನ್ನುವ ಹಾಗೆ ಅವರ ವಚನಗಳು ನೇರ ನಿಷ್ಠುರವಾಗಿದ್ದರೂ ವಚನಗಳಲ್ಲಿನ ಸಾರ ಅರ್ಥಪೂರ್ಣವಾಗಿತ್ತು ಎಂದರು. ತಹಶೀಲ್ದಾರ್‌ ಎಲ್‌.ಎಂ.ನಂದೀಶ್‌ ಮಾತನಾಡಿ, ಕಾಯಕತತ್ವ, ಸದಾಚಾರ, ಸನ್ಮಾರ್ಗದಿಂದ  ಸಂಪಾದನೆ, ಇದ್ದುದರಲ್ಲಿ ತೃಪ್ತಿಪಡುವುದರ ಮೂಲಕ ಆದರ್ಶ ಬದುಕನ್ನು ಸಾಗಿಸಬೇಕು ಎನ್ನುವುದೇ ಅಂಬಿಗರ ಚೌಡಯ್ಯನವರ ಸಂದೇಶವಾಗಿತ್ತು ಎಂದರು.

ವಕೀಲ ಕಣವಿಹಳ್ಳಿ ಮಂಜುನಾಥ, ತಾಲೂಕು ಮಟ್ಟದ ವಿವಿಧ ಅ ಧಿಕಾರಿಗಳು, ಕಂದಾಯ ಇಲಾಖೆಯ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next