Advertisement

ಅಂಬೇಡ್ಕರ್‌ ವಿಚಾರದಿಂದ ಭಿನ್ನಾಭಿಪ್ರಾಯ ದೂರ

02:14 PM Jun 25, 2018 | Team Udayavani |

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ವಿಚಾರಗಳನ್ನು ಆರಾಧಿಸಿದರೆ ಭಿನ್ನಾಭಿಪ್ರಾಯಗಳು ದೂರವಾಗಲಿದ್ದು, ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್‌ ಅವರನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಚ್‌.ಎಂ.ರುದ್ರಸ್ವಾಮಿ ಅಭಿಪ್ರಾಯಪಟ್ಟರು.

Advertisement

ವಿಜಯನಗರ ಮತ್ತು ಬೋಗಾದಿ ಉತ್ತರ ಬಡಾವಣೆಯ ಪರಿಶಿಷ್ಟ ಜನಾಂಗದ ಕ್ಷೇಮಾಭಿವೃದ್ಧಿ ಸಂಘದಿಂದ ವಿಜಯನಗರದ ವಿ.ಕೆ. ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್‌ ಅವರ 20ನೇ ಶತಮಾನದ ಮಹಾನ್‌ ಕ್ರಾಂತಿಕಾರಿ ಪುರಷನಾಗಿದ್ದು, ಆರಂಭದಲ್ಲಿ ಅಂಬೇಡ್ಕರ್‌ ಅವರ ತತ್ವಗಳನ್ನು ವಿರೋಧಿಸಿದವರು ಕೊನೆಗೆ ಅವರ ಚಿಂತನೆಗೆ  ಮಾರು ಹೋಗಿದ್ದಾರೆ. ಹೀಗಾಗಿ ಇಂದು ಅಂಬೇಡ್ಕರ್‌ ಅವರನ್ನು ಇಷ್ಟಪಡುವ ಹಾಗೂ ಅವರನ್ನು ಪಾಲಿಸುವ ಮನೋಭಾವಗಳು ಹೆಚ್ಚಾಗುತ್ತಿದ್ದು, ಅಂಬೇಡ್ಕರ್‌ ರಚನೆ ಮಾಡಿರುವ ಪುಸ್ತಕಗಳಿಗೆ ಇಂದಿಗೂ ಬೇಡಿಕೆ ಹೆಚ್ಚಾಗಿದೆ.

ಇಂಗ್ಲಿಷ್‌ ಸೇರಿದಂತೆ ಜಗತ್ತಿನ ಎಲ್ಲಾ ಭಾಷೆಗಳಿಗೆ ಅವರ ಗ್ರಂಥಗಳು ಅನುವಾದಗೊಂಡಿದ್ದು, ಹೆಚ್ಚಾಗಿ ಕನ್ನಡಕ್ಕೆ ಅನುವಾದಗೊಂಡಿವೆ. ಭಕ್ತಿಯಲ್ಲಿ ಧರ್ಮ ಇದ್ದರೆ ಮುಕ್ತಿ ಸಿಗಲಿದ್ದು, ರಾಜಕೀಯದಲ್ಲಿ ಧರ್ಮವಿದ್ದರೆ ಸರ್ವಾಧಿಕಾರ ಲಭಿಸಲಿದೆ. ಹೀಗಾಗಿ ಅಂಬೇಡ್ಕರ್‌ ಹಾಗೂ ಅವರ ವಿಚಾರಗಳನ್ನು ಆರಾಧಿಸಿದರೆ ಯಾವ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲ ಎಂದು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್‌ ಮುಖಂಡ ಜಿ.ಡಿ. ಹರೀಶ್‌ಗೌಡ ಮಾತನಾಡಿ, ಸಂಘ ಸಂಸ್ಥೆಗಳ ಪರಿಕಲ್ಪನೆ ಎಂಬುದು ಆದಿಕಾಲದಿಂದಲೂ ಸಮಾಜದಲ್ಲಿ ಪ್ರಮುಖ ಕಾರ್ಯಗಳನ್ನು ಮಾಡುತ್ತಿವೆ. ಸಂಘ ಸಂಸ್ಥೆಗಳು ಸಮಾಜದಲ್ಲಿ ಶಿಕ್ಷಣ, ಸಾಮಾಜಿಕ ಅರಿವು ಮೂಡಿಸುವ ಜತೆಗೆ ಸಮಾಜವನ್ನು ಅಭಿವೃದ್ಧಿಯ ಕಡೆಗೆ  ಕೊಂಡೊಯ್ಯುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿಜಯನಗರ ಕ್ಷೇಮಾಭಿವೃದ್ಧಿ ಸಂಘ ಸಹ ಇದೇ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಡಾ.ಎನ್‌.ದೊಡ್ಡಸಿದ್ದಯ್ಯ, ಉಪಾಧ್ಯಕ್ಷ ಶಿವಲಿಂಗಯ್ಯ, ಮಾಜಿ ಅಧ್ಯಕ್ಷ ಪ್ರೊ.ಎಚ್‌.ಎಲ್‌. ವೆಂಕಟೇಶ್‌, ಹಿನಕಲ್‌ ಗ್ರಾಪಂ ಸದಸ್ಯ ಕುಮಾರ್‌, ಸಮಾಜ ಸೇವಕ ಮಂಜುನಾಥ್‌, ಡಾ.ವೆಂಕಟೇಶ್ವರಮೂರ್ತಿ, ದಂಸಸ ಸಂಚಾಲಕ ಚೋರನಹಳ್ಳಿ ಶಿವಣ್ಣ  ಇನ್ನಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next