Advertisement

ಅಂಬೇಡ್ಕರ್‌ ಮೂರ್ತಿ ಅನಾವರಣ

11:11 AM Feb 16, 2018 | Team Udayavani |

ಆಳಂದ: ಸಾಮಾಜಿಕ ನ್ಯಾಯದ ಮೇಲೆ ರಚಿತವಾದ ಸಂವಿಧಾನ ಬದಲಾವಣೆಗೆ ಮುಂದಾದರೆ ಜನರ ದಂಗೆ ಎದುರಿಸಬೇಕಾದಿತು ಎಂದು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದರು. ಕಡಗಂಚಿ ಗ್ರಾಮದ ಭೀಮನಗರದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 12 ಅಡಿ ಎತ್ತರದ ಪಂಚಲೋಹದ ಮೂರ್ತಿ ಅನಾವರಣ ಮಾಡಿ ಅವರು ಮಾತನಾಡಿದರು.

Advertisement

ಮನುವಾದಿಗಳ ಕೈಗೆ ಸಂವಿಧಾನ ಮತ್ತು ಆಡಳಿತ ಸಿಕ್ಕಿದೆ. ಇದರಿಂದಾಗಿ ಅವರು ಮನುಸ್ಮೃತಿ ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಬದಲಾವಣೆಗೆ ಮುಂದಾದರೆ ಜನ ಸಾಮಾನ್ಯರು ಸಮ್ಮನಿರಲಾರರು. ಪ್ರಧಾನಿ ಮೋದಿ ಅವರ ಸುಳ್ಳು ಹೇಳಿ ನೋಟ್‌ ಬ್ಯಾನ್‌, ವಿದೇಶದಿಂದ ಕಪ್ಪು ಹಣ ತಂದು ಬಡವರಿಗೆ ಹಂಚುತ್ತೇನೆ ಎಂದು ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಶಾಸಕ ಬಿ.ಆರ್‌. ಪಾಟೀಲ, ನಿಡಮಾಮಿಡಿ ಮಾನವ ಧರ್ಮ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮಿಗಳು, ಬಸವ ಕಲ್ಯಾಣದ ಬಂತೇ ಧಮ್ಮನಾಗ ಮಾತನಾಡಿರು. ಎಚ್‌.ಎಂ. ಮಹೇಶ್ವರಯ್ಯ, ಸಂಗನಾನಂದ ಭಂತೇ, ಎಸ್‌.ಎಸ್‌. ಪಾಟೀಲ, ಮಾರುತಿರಾವ್‌ ಡಿ. ಮಾಲೆ, ವಿಠ್ಠಲರಾವ್‌ ಪಾಟೀಲ, ಅಲಂ ಪ್ರಭು ಪಾಟೀಲ, ಬಸವರಾಜ ತಡಕಲ್‌, ಚಂದ್ರಕಾಂತ ಭೂಸನೂರ ಇದ್ದರು. 

ಅಕ್ರಮ ಆಸ್ತಿ ಕುರಿತು ತನಿಖೆಗೆ ಸಿದ್ಧ: ಖರ್ಗೆ 
ಆಳಂದ: ಚುನಾವಣೆ ಸಮೀಪಿಸುತ್ತಿರುವಾಗಲೇ ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನ ವಿರುದ್ಧ 50,000 ಕೋಟಿ ರೂ.ಗಳ ಅಕ್ರಮ ಆಸ್ತಿ ಕುರಿತು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಈ ಕುರಿತು ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಘೋಷಿಸಿದರು. ಕಡಗಂಚಿ ಗ್ರಾಮದ ಭೀಮನಗರದಲ್ಲಿ ಡಾ| ಅಂಬೇಡ್ಕರ್‌ ಮೂರ್ತಿ ಅನಾವರಣ ನೆರವೇರಿಸಿ ಮಾತನಾಡಿದ ಅವರು, ಆರೋಪಗಳೇನಾದರೂ ಸಾಬೀತಾದಲ್ಲಿ ನನ್ನನ್ನು ಶಿಲಿಬಿಗೇರಿಸಲಿ ಹಾಗೂ ಅದರಲ್ಲಿನ ಅರ್ಧದಷ್ಟು ಆಸ್ತಿಯನ್ನು ಅವರೇ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು. ಬಿಜೆಪಿಯವರು ಸುಳ್ಳು ಹೇಳುವುದನ್ನು ಕಾಯಕವನ್ನಾಗಿಸಿಕೊಂಡಿದ್ದಾರೆ. ನನ್ನ ವಿರುದ್ಧದ ಅಕ್ರಮ ಆಸ್ತಿ ಆರೋಪದಲ್ಲಿ ಯಾವುದೇ ರೀತಿಯಲ್ಲಿ ಹುರುಳಿಲ್ಲ.

ಧೈರ್ಯವಿದ್ದರೆ ಮುಂದೆ ನಿಂತು ಮಾತನಾಡಲಿ ಎಂದ ಅವರು, ಇದರಲ್ಲಿ ಚುನಾವಣೆ ಸಂದರ್ಭದಲ್ಲಿ ಜನರ ಮನಸ್ಸು ಬೇರಡೆ ಸೆಳೆಯುವ ರಾಜಕೀಯ ಕುತಂತ್ರ ಅಡಗಿದೆ ಎಂದು ಆಕ್ಷೇಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಲ್ಲಿದ್ದಾಗ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾರೆ. 

Advertisement

ಭಾರತದಲ್ಲಿ ಮಾತ್ರ ದೀನ್‌ ದಯಾಳ್‌ ಉಪಾಧ್ಯಾಯ ಹಾಗೂ ಮುಂತಾದವರ ಹೆಸರುಗಳನ್ನು ಮಾತ್ರ ಉಲ್ಲೇಖೀಸುತ್ತಾರೆ
ಎಂದು ಅಸಮಾಧಾನ ವ್ಯಕ್ತಪಡಿಸಿದ ಖರ್ಗೆಯವರು, ಶೋಷಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next