Advertisement

ಸ್ತ್ರೀಯರ ಹಿತಕ್ಕೆ ಮಂತ್ರಿಗಿರಿ ತ್ಯಜಿಸಿದ್ದ ಅಂಬೇಡ್ಕರ್‌

07:15 AM Mar 19, 2019 | |

ಮೈಸೂರು: ದುಡಿಯುವ ವರ್ಗ ಅನುಭವಿಸುವ ಎಲ್ಲಾ ಹಕ್ಕುಗಳ ಹಿಂದೆ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಶ್ರಮ ಮತ್ತು ಕೊಡುಗೆಯಿದೆ ಎಂದು ರಾಜ್ಯ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಹೇಳಿದರು.

Advertisement

ನಗರದ ಯುವರಾಜ ಕಾಲೇಜು ಜ್ಞಾನವಾಹಿನಿ ಪಠ್ಯೇತರ ಚಟುವಟಿಕೆಗಳ ಸಮಿತಿ 2018-19 ವತಿಯಿಂದ ಅಂಬೇಡ್ಕರ್‌ 128ನೇ ಸಂಸ್ಮರಣೆ ಹಾಗೂ ಡಾ.ಎಂ.ರುದ್ರಯ್ಯ ಅವರ “ಮಾನವೀಯ ಮೌಲ್ಯಗಳು ಮತ್ತು ವ್ಯಕ್ತಿತ್ವ ವಿಕಸನ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಿಗಾಗಿ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕಕ್ಕೆ ಅನುಮೋದನೆ ಸಿಗಲಿಲ್ಲವೆಂಬ ಕಾರಣಕ್ಕೆ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ಮಹಿಳೆಯರ ಹಿತಕ್ಕಾಗಿ ಈವರೆಗೆ ಬೇರ್ಯಾವ ಮಂತ್ರಿಯೂ ರಾಜೀನಾಮೆ ಕೊಟ್ಟಿದ್ದಿಲ್ಲ ಎಂದರು. 

ಅಂಬೇಡ್ಕರ್‌ ಉತ್ತಮ ವಕೀಲ, ಅರ್ಥಶಾಸ್ತ್ರಜ್ಞ, ಸಮಾಜ ವಿಜ್ಞಾನಿ, ಆಡಳಿತಗಾರ, ತತ್ವಜ್ಞಾನಿ, ಸಂವಿಧಾನ ಶಿಲ್ಪಿ, ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆ ಮೆರೆದ ಮಹಾನ್‌ ವ್ಯಕ್ತಿ ಎಂದು ಬಣ್ಣಿಸಿದರು. ತಮ್ಮ ಇಡೀ ಜೀವನವನ್ನು ಈ ದೇಶದ ಒಳಿತಿಗಾಗಿ, ಶೋಷಿತ, ದಮನಿತ, ನೊಂದವರ ವಿಮೋಚನೆಗಾಗಿ ಹೋರಾಟ ನಡೆಸಿದರು,

ಅವರ ಈ ಹೋರಾಟ ಕೇವಲ ಲೌಕಿಕ ಹೋರಾಟವಾಗಿರಲಿಲ್ಲ. ಆದರೆ, ಸಂಕುಚಿತ ಮನೋಭಾವದಿಂದ ಈ ದೇಶದಲ್ಲಿ ಅಂಬೇಡ್ಕರ್‌ ಅವರನ್ನು ಕೇವಲ ಒಂದು ಜಾತಿಯ ನಾಯಕನಾಗಿ ಮಾಡುವ ಪ್ರಯತ್ನ ನಡೆಯಿತು. ಇದು ಸತ್ಯಕ್ಕೆ ಎಸಗಿದ ಅಪಚಾರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

Advertisement

ಹರಿದು ಹಂಚಿಹೋಗಿದ್ದ ದಲಿತ ಸಮುದಾಯವನ್ನು ಸಂಘಟಿಸಿ ರಾಷ್ಟ್ರಮಟ್ಟದಲ್ಲಿ ವೇದಿಕೆ ರೂಪಿಸಿದರು. ಕುಂಭಕರ್ಣ ನಿದ್ದೆ ಮಾಡುತ್ತಿದ್ದ ಜನಸಾಮಾನ್ಯರನ್ನು ಎಬ್ಬಿಸಿ ಅವರಲ್ಲಿ ಧೈರ್ಯ, ಸ್ಥೆçರ್ಯ ಆತ್ಮವಿಶ್ವಾಸ ಮೂಡಿಸಿದರು. ನ್ಯಾಯ, ಸಮಾನತೆ ಸ್ವಾಭಿಮಾನದ ಹೋರಾಟಕ್ಕೆ ಹಚ್ಚಿದರು.

ಅವರು ದಲಿತ ಸಮುದಾಯದ ಮಹಾನಾಯಕ ಎನ್ನುವುದು ನಿರ್ವಿವಾದ ಎಂದರು. ಡಾ.ಎಂ.ರುದ್ರಯ್ಯನವರು ವಿಜ್ಞಾನ ಕಲಿಸುವವರಾದರೂ ಕನ್ನಡದಲ್ಲಿ ಕೃತಿಯನ್ನು ಬರೆದು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಅನೇಕ ಕೃತಿ ರಚಿಸಿ ಕನ್ನಡದ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು. 

ಕಾಲೇಜಿನ ಪ್ರಾಂಶುಪಾಲರಾದ ಲೇಖಕ ಡಾ.ಎಂ.ರುದ್ರಯ್ಯ, ಮೈಸೂರು ವಿವಿ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರದ ಸಂಯೋಜನಾಧಿಕಾರಿ ಡಾ.ನರೇಂದ್ರ ಕುಮಾರ್‌, ಆಡಳಿತಾಧಿಕಾರಿ ಡಾ.ಎಚ್‌.ಸಿ.ದೇವರಾಜೇಗೌಡ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಚ್‌.ಬಿ.ಮಹೇಶ್‌, ಸಂಯೋಜಕಿ ಡಾ.ಕೆ.ಸೌಭಾಗ್ಯವತಿ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next