Advertisement

ಅಂಬೇಡ್ಕರ್‌ ಒಂದು ಜಾತಿಗೆ ಸೀಮಿತವಾದ ನಾಯಕರಲ್ಲ

12:01 PM May 02, 2019 | Suhan S |

ಚನ್ನಪಟ್ಟಣ: ಭಾರತರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಒಂದು ಜಾತಿಗೆ ಸೀಮಿತ ವಾದ ನಾಯಕರಲ್ಲ ಅವರೊಬ್ಬ ಸರ್ವ ಜನಾಂಗದ ಮಹಾನ್‌ ನಾಯಕರು ಎಂದು ಹಾಪ್‌ಕಾಮ್ಸ್‌ ನಿರ್ದೇಶಕ ಬೋರ್‌ವೆಲ್ ರಂಗನಾಥ್‌ ಹೇಳಿದರು.

Advertisement

ತಾಲೂಕಿನ ಹೊಂಗನೂರು ಗ್ರಾಮ ದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ, ಪ್ರಪಂಚದ ಯಾವ ರಾಷ್ಟ್ರದಲ್ಲಿಯೂ ದೊರೆಯದ ಮಹಾನ್‌ ಗ್ರಂಥವಾದ ಸಂವಿಧಾನವನ್ನು ರಚನೆ ಮಾಡಿದ ಕೀರ್ತಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರದಾಗಿದ್ದು, ಅವರು ರಚಿಸಿದ ಸಂಧಾನದ ಅಡಿಯಲ್ಲಿ ಶೋಷಿತ ಸಮು ದಾಯ ಹಾಗೂ ಹಿಂದುಳಿದ ಸಮು ದಾಯಗಳು ಬೆಳಕು ಕಾಣಲು ಸಾಧ್ಯವಾಯಿತು ಎಂದರು.

ಮಹಾನ್‌ ಪುರುಷ: ತನ್ನ ಬಾಲ್ಯದಿದಲೇ ಹಲವಾರು ರೀತಿಯ ತೊಂದರೆಗಳನ್ನು ಜ್ವಲಂತವಾಗಿ ಕಂಡು ಸ್ವೀಕರಿಸಿದ ಬಾಬಾ ಸಾಹೇಬರು, ಪ್ರಪಂಚದ ಬಲಿಷ್ಠ ದೇಶದ ಕಾನೂನು ರಚನೆಯಲ್ಲಿ ಪ್ರಮುಖ ಪಾತ್ರವಹಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾನ ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಿದ ಮಹಾನ್‌ ಪುರುಷ ಎಂದು ತಿಳಿಸಿದರು.

ಶಿಕ್ಷಣದಿಂದ ಮಾತ್ರ ಸಾಧ್ಯ: ಮುಖ್ಯ ಅತಿಥಿ ಕಾಂಗ್ರೆಸ್‌ ಯುವ ಮುಖಂಡ ಚಂದ್ರಸಾಗರ್‌ ಮಾತನಾಡಿ, ಕೆಳವರ್ಗದ ಸಮುದಾಯಗಳು ಸಮಾಜದಲ್ಲಿ ಸಾಮಾನ್ಯರಂತೆ ಪ್ರತಿಯೊಂದು ಕ್ಷೇತ್ರ ದಲ್ಲಿಯೂ ತಮ್ಮ ಸಾಧನೆಯನ್ನು ಮೆರೆಯಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಸಾರಿ ಹೇಳಿದ ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಭಾರತೀಯರ ಮೇರು ಪರ್ವತದ್ದಂತೆ ಎಂದು ಬಣ್ಣಿಸಿದರು.

ವಿದ್ಯೆ ಅಮೂಲ್ಯ ಸಂಪತ್ತು: ಎಲ್ಲಾ ಸಂಪತ್ತುಗಳಿಗಿಂದ ವಿದ್ಯಾಸಂಪತ್ತು ಅಮೂಲ್ಯವಾಗಿದೆ. ಮನುಷ್ಯ ಮನುಷ್ಯ ನಿಂದ ಏನು ಬೇಕಾದರೂ ಕದಿಯ ಬಹುದು ಆದರೆ ಕಲಿತ ವಿದ್ಯೆಯನ್ನು ಮಾತ್ರ ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ಬಾಬಾ ಸಾಹೇಬರು ಅಂದಿನ ದಿನಗಳಲ್ಲಿ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿ ಕೀರ್ತಿ ಶಿಖರವೇರಿದ್ದರು ಎಂದರು.

Advertisement

ಯಶಸ್ಸು ಸಾಧಿಸಿ: ಬಾಬಾ ಸಾಹೇಬರ ಪುತ್ಥಳಿಯನ್ನು ಅನಾವರಣ ಮಾಡಿದ ಗ್ರಾಮದ ಯುವಕರ ಕಾಳಜಿಯನ್ನು ಪ್ರಶಂಸೆ ಮಾಡಿದ ಅವರು ನಾವೆಲ್ಲಾ ಮಹಾನ್‌ನಾಯಕರ ಪ್ರತಿಮೆ ಅನಾ ವರಣ ಮಾಡಿದಂತೆ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ಹೇಳಿದರು.ಅಂಬೇಡ್ಕರ್‌ರವರ ಪುತ್ಥಳಿ ಅನಾವರಣ ಮಾಡಿದ ಮೈಸೂರು ಸಂಸ್ಥಾನದ ಉರಿಲಿಂಗ ಪೆದ್ದೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಆಶೀರ್ವಚನ ನೀಡಿದರು.

ಜೈ ಭೀಮ್‌ ಯುವಕರ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್‌, ಪ್ರತಾಪ್‌, ಕುಮಾರ್‌, ಅರುಣ್‌, ಮಹೇಶ್‌, ಮಧು, ಪ್ರವೀಣ, ಪ್ರಮೋದ್‌, ಹಾಗೂ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next