Advertisement

ಶೋಷಿತರಿಗೆ ಬೆಳಕು ನೀಡಿದ್ದು ಅಂಬೇಡ್ಕರ್‌; ಸುನಿಲ್‌ ಬೋಸ್‌

06:22 PM Sep 16, 2022 | Team Udayavani |

ತಿ.ನರಸೀಪುರ: ಸಂವಿಧಾನದ ಮೂಲಕ ಶೋಷಿತರಿಗೆ ಬೆಳಕು ನೀಡಿದ ಡಾ.ಅಂಬೇಡ್ಕರ್‌ ಅವರ ಹೋರಾಟದ ಕೆಚ್ಚು ದಕ್ಷತೆಗೆ ಹೆಸರಾದರೆ, ಸಂವಿಧಾನದ ಆಶಯಗಳ ಜಾರಿಗೆ ಶ್ರಮಿಸಿ, ದಲಿತರ ಅಭಿವೃದ್ಧಿಗೆ ದುಡಿದ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್‌ ರಾಂ ರಾಜಕೀಯ ಕಾರ್ಯಕ್ಷಮತೆಯ ಪ್ರತೀಕ ಎಂದು ಕಾಂಗ್ರೆಸ್‌ ಯುವ ಮುಖಂಡ ಸುನಿಲ್‌ ಬೋಸ್‌ ಹೇಳಿದರು.

Advertisement

ತಾಲೂಕಿನ ವ್ಯಾಸರಾಜಪುರ ಗ್ರಾಮದಲ್ಲಿ ಡಾ.ಅಂಬೇಡ್ಕರ್‌, ಡಾ.ಬಾಬು ಜಗಜೀವನ್‌ ರಾಂ ಹವ್ಯಾಸಿ ಯುವಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದಲಿತ ಸಮುದಾಯಗಳು ಭೀಮರಾವ್‌, ಬಾಬೂಜಿ ಅವರಿಬ್ಬರನ್ನೂ ಕಣ್ಣುಗಳಂತೆ ನೋಡಬೇಕು. ಅಂಬೇಡ್ಕರ್‌ ದಲಿತರ ವಿಮೋಚನೆಗೆ ಶ್ರಮಿಸಿದರೆ, ಬಾಬು ಜಗಜೀವನ್‌ ರಾಮ್‌ ಅವರು ವಿಮೋ ಚನಾ ರಥವನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದರು ಎಂದು ತಿಳಿಸಿದರು.

ರಾಜಕೀಯ ಅಭಿವೃದ್ಧಿ ಹೊಂದಿ: ದಲಿತ ಬಲಗೈ ಹಾಗೂ ಎಡಗೈ ಸಮುದಾಯಗಳು ರಾಜಕೀಯವಾಗಿ ಸಂಘಟಿತರಾಗುವ ಮೂಲಕ ಸ್ವಾತಂತ್ರ್ಯ ನಂತರದಲ್ಲೂ ನಡೆಯುತ್ತಿರುವ ಶೋಷಣೆ ತಡೆಗಟ್ಟಬೇಕು. ರಾಜಕೀಯ ಜಾಗೃತಿ ಮೈಗೂಡಿಸಿಕೊಂಡು ಅಧಿಕಾರ ಹಿಡಿಯಬೇಕು. ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.

ಚಿಂತಕ, ಸಾಹಿತಿ ಪೊ›.ಎಚ್‌.ಗೋವಿಂದಯ್ಯ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ವಿಜೇತ, ಸಾವ ಯವ ಕೃಷಿಕ ಎಸ್‌.ಆರ್‌.ಶ್ರೀನಿವಾಸಮೂರ್ತಿ ಅವರನ್ನು ಸನ್ಮಾನಿಸಲಾಯಿತು. ತಾಪಂ ಮಾಜಿ ಸದಸ್ಯ ಶಿವಸ್ವಾಮಿ, ಸೋಸಲೆ ಗ್ರಾಪಂ ಉಪಾಧ್ಯಕ್ಷೆ ಹೇಮಾ, ಗ್ರಾಪಂ ಸದಸ್ಯ ಸುಂದರ, ಪೊಲೀಸ್‌ ಇಲಾಖೆಯ ರಾಜೇಂದ್ರ, ಮುಖಂಡರಾದ ನಟರಾಜು, ಸುರೇಶ, ಸಿದ್ದರಾಜು, ಸಂಘದ ಅಧ್ಯಕ್ಷ ಸಂದೀಪ್‌ ಕುಮಾರ್‌, ಗೌರವಾಧ್ಯಕ್ಷ ಉಪಾಧ್ಯಕ್ಷ ಎಂ.ಪ್ರಸಾದ್‌, ಕಾರ್ಯದರ್ಶಿ
ದಯಾನಂದ್‌, ಸಹ ಕಾರ್ಯದರ್ಶಿ ಪ್ರಮೋದ್‌, ಖಜಾಂಚಿ ಸೋಮರಾಜ್‌, ಶಿವಸ್ವಾಮಿ, ಸಂಚಾಲಕರಾದ ಎಂ.ರಂಗಸ್ವಾಮಿ, ಚನ್ನಕೇಶವಮೂರ್ತಿ, ರಜನಿಕಾಂತ್‌, ಲಕ್ಷ್ಮೀಕಾಂತ್‌, ದಾಸು, ಹರೀಶ, ಬಸವರಾಜು, ರವಿ ಉಪಸ್ಥಿತರಿದ್ದರು.

ದಲಿತರಲ್ಲದೆ, ಎಲ್ಲಾ ಸಮುದಾಯಗಳು ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಹೊಂದಲು ಕಾಂಗ್ರೆಸ್‌ ಅನ್ನು ರಾಜಕೀಯವಾಗಿ ಬಲಗೊಳಿಸಬೇಕು. ಬೆಲೆ ಏರಿಕೆ, ಕಾರ್ಪೊರೇಟ್‌ ವಲಯಕ್ಕೆ ಹೆಚ್ಚಿನ ಮಹತ್ವವನ್ನು ಈಗಿನ ಬಿಜೆಪಿ ಸರ್ಕಾರ ನೀಡುತ್ತಿದೆ. ಇದರಿಂದ ಬಡವರ ಬದುಕು ಕಷ್ಟಕರವಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲಾ ಧರ್ಮ, ಜಾತಿಗಳಿಗೆ ಸಮಾನ ಅವಕಾಶ ಕಲ್ಪಿಸಲಾಗುತ್ತಿದೆ.
●ಎಂ.ಸುಧಾ ಮಹದೇವಯ್ಯ,
ಜಿಪಂ ಮಾಜಿ ಸದಸ್ಯೆ

Advertisement
Advertisement

Udayavani is now on Telegram. Click here to join our channel and stay updated with the latest news.

Next