Advertisement

ಅಂಬೇಡ್ಕರ್‌-ಬಾಬೂಜಿ ಶೋಷಿತರ ಕಣ್ಣುಗಳು

01:03 PM Apr 28, 2017 | |

ದಾವಣಗೆರೆ: ಭಾರತರತ್ನ ಡಾ| ಅಂಬೇಡ್ಕರ್‌, ಮಾಜಿ ಉಪ ಪ್ರಧಾನಿ ಬಾಬು ಜೀವನರಾಂ ದಲಿತ ಸಮುದಾಯ ಮಾತ್ರವಲ್ಲ ಎಲ್ಲ ಸಮಾಜದ ನೊಂದವರ, ಶೋಷಿತರ ಎರಡು ಕಣ್ಣುಗಳು ಎಂದು ಕೋಡಿಹಳ್ಳಿಯ ಆದಿಜಾಂಬವ ಮಠದ ಶ್ರೀ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದ್ದಾರೆ. 

Advertisement

ಭಾರತರತ್ನ ಡಾ| ಅಂಬೇಡ್ಕರ್‌ರವರ 126ನೇ, ಮಾಜಿ ಉಪ ಪ್ರಧಾನಿ ಬಾಬು ಜೀವನರಾಂರವರ 110 ನೇ ಜಯಂತಿ ಅಂಗವಾಗಿ ಕರ್ನಾಟದ ದಲಿತ ಸಂಘರ್ಷ ಸಮಿತಿ (ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಏರ್ಪಡಿಸಿದ್ದ ಗುರುವಾರ ರೋಟರಿ ಬಾಲಭವನದಲ್ಲಿ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದಲಿತರು ಭಾರತರತ್ನ ಡಾ| ಅಂಬೇಡ್ಕರ್‌, ಮಾಜಿ ಉಪ ಪ್ರಧಾನಿ ಬಾಬು ಜೀವನರಾಂರವರನ್ನು ತಮ್ಮ ಬಾಹು ಬಂಧನದಲ್ಲಿಯೇ ಇಟ್ಟುಕೊಳ್ಳದೆ ಅವರನ್ನು ವಿಶ್ವಮಾನ್ಯರಾಗಲು ಬಿಡಬೇಕು ಎಂದರು. ಭಾರತರತ್ನ ಡಾ| ಬೇಡ್ಕರ್‌, ಮಾಜಿ ಉಪ ಪ್ರಧಾನಿ ಬಾಬು ಜೀವನರಾಂ ಒಳಗೊಂಡಂತೆ ಮಹಾನ್‌ ಸಾಧಕರ ಜಯಂತಿಯ ಸಂಭ್ರಮದಲ್ಲಿ ನಮ್ಮ ಬದುಕನ್ನು ಹಸನು ಮಾಡಿಕೊಳ್ಳುವುದನ್ನ ಮರೆಯಬಾರದು.

ಹೊಟ್ಟೆಗೆ ಏನೂ ಇಲ್ಲದಿದ್ದರೂ ಸಾವಿರಾರು ರೂಪಾಯಿ ಹೂವಿನ ಹಾರ ಹಾಕಿ ಸಂಭ್ರಮಿಸುತ್ತೇವೆ. ಅದಕ್ಕಿಂತಲೂ ಪ್ರತಿಯೊಬ್ಬ ದಲಿತರು, ಶೋಷಿತರು, ನೋವುಂಡವರು ತಮ್ಮ ಬದುಕನ್ನ ಹಸನು ಮಾಡಿಕೊಂಡು ಸಂಭ್ರಮಿಸಿದಾಗ ಸಾಧಕರ ಜಯಂತಿ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಹಾನ್‌ ಸಾಧಕರ ಜಯಂತಿ, ಇತರೆ ಕಾರ್ಯಕ್ರಮಗಳು ಹೊಸತನದಿಂದ ಕೂಡಿರಬೇಕು. ಜಯಂತ್ಯುತ್ಸವಗಳ ವೈಭವೀಕರಣಕ್ಕಿಂತಲೂ ಸಾಧಕರ ಸಾಧನೆಯ ನೆನಪು, ಆರಾಧನೆ ಮನದಲ್ಲಿರಬೇಕು. ಅವರ ನಡೆ, ನುಡಿ, ತತ್ವ, ಆದರ್ಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಕಟ್ಟುನಿಟ್ಟಾಗಿ ಪಾಲಿಸಬೇಕು. 

Advertisement

ನವ ನಾಗರಿಕತೆಯಲ್ಲಿ ಇರುವ ಪ್ರತಿಯೊಬ್ಬರು ಆದರ್ಶವಂತರಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ದಲಿತರು ಸಮಾನತೆ ಸಮಾಜ ನಿರ್ಮಾಣದಲ್ಲಿ ಮುಂದಾಗಬೇಕು. ಅದಕ್ಕಾಗಿ ರಾಜಕೀಯ ಅಧಿಕಾರ ಪಡೆಯುವುದು ಸಹ ಮುಖ್ಯ ಎಂಬುದನ್ನ ಮರೆಯಬಾರದು. ಅಧಿಕಾರದ ಆಸೆಯಲ್ಲಿ ಮಹತ್ವದ ಅವಕಾಶ ಕಳೆದುಕೊಳ್ಳುವ ಸನ್ನಿವೇಶ ತಂದುಕೊಳ್ಳದಂತೆ ಜಾಣ್ಮೆ ವಹಿಸಬೇಕು.

ಸರ್ವರು ಒಪ್ಪಿತ ನಾಯಕರಾಗಿ ರೂಪುಗೊಳ್ಳಬೇಕು. ಅಂಬೇಡ್ಕರ್‌ ಒಳಗೊಂಡಂತೆ ಮಹಾನ್‌ ನಾಯಕರ ಆಶಯವನ್ನು ಜಾರಿಗೊಳಿಸುವ ಮೂಲಕ ಬದುಕನ್ನ ಹಸನು ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸಾಹಿತಿ ಬುಳಸಾಗರದ ಸಿದ್ದರಾಮಣ್ಣ ಮಾತನಾಡಿ, ಪ್ರೊ. ಬಿ. ಕೃಷ್ಣಪ್ಪ ಅವರು ದಲಿತ ಸಂಘರ್ಷ ಸಮಿತಿ ಕಟ್ಟದೇ ಹೋಗಿದ್ದಲ್ಲಿ ದಲಿತ ಸಮುದಾಯಗಳ ಸ್ಥಿತಿ ಕಷ್ಟವಾಗಿರುತ್ತಿತ್ತು.

ಈ ರೀತಿ ಸಭೆ ನಡೆಸಿ, ನಮ್ಮ ವಿಚಾರ ಹಂಚಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ. ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧ, ಬಗರ್‌ ಹುಕುಂ ಸಾಗುವಳಿದಾರರ ಪರ…ಹೀಗೆ ಹಲವಾರು ಹೋರಾಟದ ಮೂಲಕ ಕ್ರಾಂತಿ ಉಂಟು ಮಾಡಿದ ಪ್ರೊ. ಬಿ. ಕೃಷ್ಣಪ್ಪ ಕರ್ನಾಟಕದ ಅಂಬೇಡ್ಕರ್‌ ಎಂದು ಬಣ್ಣಿಸಿದರು.

ಸಂಘಟನೆ ಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ| ಎ.ಬಿ. ರಾಮಚಂದ್ರಪ್ಪ, ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ಕುಮಾರ್‌, ಎಂ.ಕೆ. ನಾಗಪ್ಪ, ಎಂ. ಹಾಲೇಶ್‌, ಉದಯ್‌, ರಮೇಶ್‌, ಪರಮೇಶ್‌, ಎ.ಕೆ. ಭೂಮಪ್ಪ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next