Advertisement
ಲ್ಯಾಂಡ್‌ಮಾರ್ಕ್ ಗ್ರೂಪ್‌ನ ಮುಖ್ಯಸ್ಥೆ ರೇಣುಕಾ ಜಗ್ತಿಯಾನಿ 4.8 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ದೇಶದ ಅತ್ಯಂತ ಶ್ರೀಮಂತರ ಪೈಕಿ 4ನೇ ಸ್ಥಾನದಲ್ಲಿದ್ದರೆ, ಏಷ್ಯನ್ ಪೇಂಟ್ಸ್‌ನ ದನಿ ಫ್ಯಾಮಿಲಿ (8 ಶತಕೋಟಿ ಡಾಲರ್) 22ನೇ ಸ್ಥಾನದಲ್ಲಿದೆ. ಕೆ.ಪಿ.ಆರ್.ಮಿಲ್‌ನ ಮುಖ್ಯಸ್ಥ ಕೆ.ಪಿ. ರಾಮಸ್ವಾಮಿ(2.3 ಶತಕೋಟಿ ಡಾಲರ್) 100ನೇ ಸ್ಥಾನ ಪಡೆದಿದ್ದಾರೆ.ಇದೇ ವೇಳೆ, 8 ಮಂದಿ 100 ಶ್ರೀಮಂತರ ಪಟ್ಟಿಯಿಂದ ಹೊರಗುಳಿದಿದ್ದು, ಈ ಪೈಕಿ ಬೈಜೂಸ್ ಮುಖ್ಯಸ್ಥ ಬೈಜೂ ರವೀಂದ್ರನ್ ಕೂಡ ಒಬ್ಬರು.
ಭಾರತದ ಶ್ರೀಮಂತರ ಪಟ್ಟಿಗೆ ಈ ವರ್ಷ ಮತ್ತೆ ಸೇರ್ಪಡೆಯಾಗಿರುವ 7 ಉದ್ಯಮಿಗಳ ಪೈಕಿ ಮಣಿಪಾಲ್ ಎಜುಕೇಶನ್ ಹಾಗೂ ಮೆಡಿಕಲ್ ಗ್ರೂಪ್ ಮುಖ್ಯಸ್ಥರಾದ ರಂಜನ್ ಪೈ ಅವರೂ ಸೇರ್ಪಡೆಗೊಂಡಿದ್ದಾರೆ. 2.75 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ದೇಶದ 86ನೇ ಅತಿದೊಡ್ಡ ಶ್ರೀಮಂತರೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ದೇಶದ ಅಗ್ರ 5 ಶ್ರೀಮಂತರು
1. ಮುಕೇಶ್ ಅಂಬಾನಿ- 92 ಶತಕೋಟಿ ಡಾಲರ್
2. ಗೌತಮ್ ಅದಾನಿ- 68 ಶತಕೋಟಿ ಡಾಲರ್
3. ಶಿವ ನಾದರ್- 29.3 ಶತಕೋಟಿ ಡಾಲರ್
4. ಸಾವಿತ್ರಿ ಜಿಂದಾಲ್- 24 ಶತಕೋಟಿ ಡಾಲರ್
5. ರಾಧಾ ಕಿಶನ್ ದಮಾನಿ- 23 ಶತಕೋಟಿ ಡಾಲರ್