ಉಡುಪಿ: ಅಂಬಲಪಾಡಿ ಜಂಕ್ಷನ್‌ನಲ್ಲಿ ಮಂಗಳವಾರ ಸಂಚಾರ ದಟ್ಟಣೆ ತಲೆದೋರಿ ವಾಹನ ಸವಾರರು ಪರದಾಡುವಂತಾಯಿತು.
Advertisement
ಜಂಕ್ಷನ್‌ನಲ್ಲಿ ರಾ.ಹೆ. ಪ್ರಾಧಿಕಾರವು ಸೂಚನಾ ಫಲಕ ಅಳವಡಿಸುತ್ತಿರುವುದರಿಂದ ಒಂದು ಕಡೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಕೆಲಸ ನಿರ್ವಹಿಸುವ ಗುತ್ತಿಗೆ ಸಂಸ್ಥೆಯವರು ಏಕಾಏಕಿ ವಾಹನ ಸಂಚಾರ ನಿರ್ಬಂಧಿ ಸಿದ್ದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು.