ಮಲ್ಪೆ: ಅಂಬಲಪಾಡಿ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ಗ ಲಯನ್ಸ್ ಜಿಲ್ಲಾ ಗವರ್ನರ್ ಬಿ. ದಿವಾಕರ ಶೆಟ್ಟಿ ಅವರ ಅಧಿಕೃತ ಭೇಟಿ ಕಾರ್ಯಕ್ರಮವು ಮಾ. 26 ರಂದು ನಡೆಯಿತು. ಉಡುಪಿ ಅಜ್ಜರಕಾಡು ಪುರಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು ಪರಸ್ಪರ ಪ್ರೀತಿ ವಿಶ್ವಾಸ, ಸೇ°ಹ ಮತ್ತು ಸೇವೆಯೊಂದಿಗೆ ಉತ್ತಮ ಪ್ರಗತಿ ಸಾಧಿಸುವುದು ಲಯನ್ಸ್‌ನ ಉದೇªಶವಾಗಿದ್ದು ಈ ನಿಟ್ಟಿನಲ್ಲಿ ಅಂಬಲಪಾಡಿ ಲಯನ್ಸ್ ಆರೋಗ್ಯ, ಶಿಕ್ಷಣ, ಪರಿಸರ ಕಾಳಜಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖೀ ಸೇವೆಯಲ್ಲಿ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಂಬಲಪಾಡಿ ವತಿಯಿಂದ ನಡೆಸಲಾದ ಎರಡು ಶೌಚಾಲಯ, ನಿವೇಶನ, ಬಸ್ಸು ನಿಲ್ದಾಣ ದುರಸ್ತಿ, ರಸ್ತೆ ಮಾರ್ಗ ಸೂಚಿ, ಶಾಲೆಗೆ ನೊಟೀಸ್ ಬೋರ್ಡ್ ಫಲಕ ಸೇರಿದಂತೆ ಸುಮಾರು 4 ಲಕ್ಷ ರೂ. ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಇಂದ್ರಾಳಿ ಜಯಕರ ಶೆಟ್ಟಿ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಸಮ್ಮಾನಿಸಲಾಯಿತು. ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಸುನಿಲ್ ಸಾಲ್ಯಾನ್, ಪ್ರಾಂತೀಯ ಅಧ್ಯಕ್ಷ ಮೊಹಮ್ಮದ್ ಹನೀಫ್, ವಲಯ ಕಾರ್ಯದರ್ಶಿ ರಾಜೇಶ್ ಹೆಗ್ಡೆ, ಅಂಬಲಪಾಡಿ ಲಯನ್ಸ್ ಕಾರ್ಯದರ್ಶಿ ಪ್ರಶಾಂತ್ ಭಂಡಾರಿ, ಕೋಶಾಧಿಕಾರಿ ರಾಜೇಶ್ ಶೆಟ್ಟಿ, ಲಯನ್ಸ್ ಅಧ್ಯಕ್ಷೆ ಸುಶೀಲ ಜಗನ್ನಾಥ್, ಕಾರ್ಯದರ್ಶಿ ಜಯಶ್ರೀ ಪ್ರಶಾಂತ್, ಕೋಶಾಧಿಕಾರಿ ಆಶಾಕೇಶವ್, ವಿ.ಎಸ್. ಉಮ್ಮರ್ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷ ಜಗನ್ನಾಥ್ ಕಡೆಕಾರ್ ವಹಿಸಿದ್ದರು. ಸತೀಶ್ ಶೆಟ್ಟಿ ಅತಿಥಿಗಳ ಪರಿಚಯಿಸಿದರು. ಲಯನ್ಸ್ ಗಂಗಾಧರ್ ಜಿ. ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕೇಶವ ಅಮೀನ್ ಧ್ವಜ ವಂದನೆಯನ್ನು ಮಾಡಿದರು. ಕಾರ್ಯದರ್ಶಿ ಪ್ರಶಾಂತ್ ಅವರು ವಂದಿಸಿದರು.