Advertisement
ಕಳೆದ 5 ವರ್ಷಗಳಿಂದ ಚಿಕ್ಕಬಳ್ಳಾಪುರ ಮೂಲದ ಭಕ್ತರಾದ ಮಹಾಕಾಳಿ ಬಾಬು ಅವರ ನೇತೃತ್ವದ ತಂಡ ಪ್ರತೀ ಆಷಾಢದ ಮೂರನೇ ಶುಕ್ರವಾರ ವಿಶೇಷ ಅಲಂಕಾರದ ವಿಶಿಷ್ಟ ಸೇವೆ ಅರ್ಪಿಸುತ್ತಾ ಬಂದಿದೆ. ಈ ಬಾರಿ 2,000 ಕೆಜಿಗೂ ಅಧಿಕ ಹೂವು ಮತ್ತು 400 ಕೆ.ಜಿಯಷ್ಟು ಹಣ್ಣು, ಜೋಳ, ಕ್ಯಾಪ್ಸಿಕಂಗಳಿಂದ ಅಲಂಕಾರ ಮಾಡಲಾಗಿತ್ತು.
ಚಿಕ್ಕಬಳ್ಳಾಪುರದಿಂದ ಗುರುವಾರ ಬೆಳಗ್ಗೆ ಆಗಮಿಸಿರುವ 50 ಮಂದಿಯ ತಂಡ ಬೆಳಗ್ಗೆ 10.30ಕ್ಕೆ ಅಲಂಕಾರ ಆರಂಭಿಸಿದ್ದು, ತಡರಾತ್ರಿ 2.30ಕ್ಕೆ ಪೂರ್ಣಗೊಳಿಸಿತು. ಅಲಂಕಾರಕ್ಕೆ 200 ಕೆ.ಜಿ.ಯಷ್ಟು ಹಳದಿ, ಕೆಂಪು, ಆರೆಂಜ್, ಬಿಳಿ ಸೇರಿದಂತೆ ವಿವಿಧ ಬಣ್ಣಗಳ ಗುಲಾಬಿ, ಗ್ಲಾಡಿಸ್, ಸೇವಂತಿಗೆ, ಚೆಂಡು ಹೂ, ಆಸ್ಟ್ರೇಲಿಯಾ, ಸ್ಟಾರ್, ವಿಲಿಯಮ್ಸ್, ತಾವರೆ, ಜರ್ಬರ್ ಮೊದಲಾದ ಹೂಗಳನ್ನು, ದ್ರಾಕ್ಷಿ ಗೊಂಚಲು, ಅನಾನಸು, ಜೋಳ, ಕ್ಯಾಪ್ಸಿಕಂಗಳನ್ನು ಬಳಸಲಾಗಿದೆ. ಅಲಂಕಾರ ವನ್ನು ಭೈರೇಗೌಡ ಎನ್ನುವವರ ತಂಡ ಮಾಡಿದ್ದು ಚಿಕ್ಕಬಳ್ಳಾಪುರದ ರೈತರಿಂದ, ಬೆಂಗಳೂರಿಂದ ಹೂವು ತಂದಿದ್ದಾರೆ. ಮಹಾಕಾಳಿ ಎಂದು ಹೂವಿನಲ್ಲೇ ಬರೆದಿರುವುದು ಈ ಬಾರಿಯ ವಿಶೇಷವಾಗಿತ್ತು. ಇನ್ನು ದೇವಸ್ಥಾನಕ್ಕೆ ವಿಶೇಷ ಅಲಂಕಾರ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯೂ ಹೆಚ್ಚಿತ್ತು. 2-3 ದಿನ ವೀಕ್ಷಣೆಗೆ ಅವಕಾಶ
ಇಂತಹ ಅಲಂಕಾರ ಚಿಕ್ಕಬಳ್ಳಾಪುರದ ತಂಡದಿಂದ ಮಾತ್ರ ಸಾಧ್ಯವೆನಿಸುತ್ತಿದೆ. ಆ.3ರಂದು ಭಕ್ತರ ಸಂದಣಿ ಅತ್ಯಧಿಕವಾಗಿತ್ತು. ದೇವಳದ ವಿಶೇಷ ಅಲಂಕಾರವನ್ನು ವೀಕ್ಷಿಸಲು ಇನ್ನೂ 2-3 ದಿನಗಳ ಕಾಲ ಭಕ್ತರಿಗೆ ಅವಕಾಶವಿದೆ.
- ಡಾ| ನಿ.ಬಿ.ವಿಜಯ ಬಲ್ಲಾಳ್,ಧರ್ಮದರ್ಶಿಗಳು,
ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ