Advertisement

ಅಮೆಜಾನ್​ ಪ್ರೈಮ್​ ಡೇ ಸೇಲ್ :  ಜೂನ್​ 21ರಿಂದ ಆರಂಭ​ ?!  

04:23 PM May 28, 2021 | Team Udayavani |

ನವ ದೆಹಲಿ : ಕಳೆದ ವರ್ಷ ಕೋವಿಡ್ ಸೋಂಕಿನ ಕಾರಣದಿಂದಾಗಿ ಲಾಕ್ಡೌನ್ ಇದ್ದದ್ದರಿಂದಾಗಿ ಅಮೆಜಾನ್ ಪ್ರೈಮ್ ಡೇಸ್ ಗೆ ಸಾಕಷ್ಟು ಪರಿಣಾಮ ಬೀರಿತ್ತು ಮತ್ತು ಅದರ ಆಯೋಜನಯಲ್ಲೂ ಕೂಡ ವ್ಯತ್ಯಾಸ ಉಂಟಾಗಿತ್ತು.

Advertisement

ಆದರೇ ಈ ವರ್ಷ ಅಮೆಜಾನ್ ಪ್ರೈಮ್ ಡೇಸ್ ಬಗ್ಗೆ ದಿನಾಂಕ ಸೂಚಿಸಿದರು ಅಧಿಕೃತ ಘೋಷಣೆಯಾಗುವವರೆಗೆ ಮಾಹಿತಿಯನ್ನು ಗೌಪ್ಯವಾಗಿಡುವಂತೆ ತನ್ನ ನೌಕಕರಿಗೆ ತಿಳಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಜಿಲ್ಲೆಯ ಜನರಿಗೆ ಯಡಿಯೂರಪ್ಪ ಸರಕಾರದಿಂದ “ಕತ್ತಲೆ ಭಾಗ್ಯ” : ದೀಪಕ್ ಕೋಟ್ಯಾನ್ ವಾಗ್ದಾಳಿ

ಫ್ಲಿಪ್ ​ಕಾರ್ಟ್ ಹೋಮ್ ಡೇಸ್ ಆಯೋಜಿಸಿದ್ದು, ಅದರಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ವಸ್ತುಗಳನ್ನು ಗ್ಯಾಜೆಟ್​ಗಳನ್ನು ಮಾರಾಟ ಮಾಡುತ್ತಿದೆ. ರಸಪ್ರಶ್ನೆಯನ್ನು ಹಮ್ಮಿಕೊಂಡಿದೆ. ವಿಜೇತರಿಗೆ ಆಕರ್ಷಕ ಬಹುಮಾನವನ್ನು ನೀಡುತ್ತಿರುವುದನ್ನು ಅಮೆಜಾನ್ ಕೂಡ  ಅನುಸರಿಸಿದೆ.

ಅಮೆಜಾನ್ ಕೂಡ ಆ್ಯಪ್ ಕ್ಚಿಜ್ ನಡೆಸುತ್ತಿದೆ. 5 ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಅಮೆಜಾನ್ 20 ಸಾವಿರ ಬಹುಮಾನವಾಗಿ ನೀಡಲಿದೆ.

Advertisement

ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಅಮೆಜಾನ್ ಹಲವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಅಂತೆಯೇ, ಅಮೆಜಾನ್ ಪ್ರೈಮ್ ಡೇಸ್ ನನ್ನು ಈ ವರ್ಷ ಅದ್ಧೂರಿಯಾಗಿ ಆಯೋಜಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಕೋವಿಡ್ ಸೋಂಕಿನ ಕಾರಣದಿಂದಾಗಿ ಅಮೆಜಾನ್ ಕೆನೆಡಾ ಮತ್ತು ಭಾರತದಲ್ಲಿ ಪ್ರೈಮ್ ಡೇಸ್ ಸೇಲ್ ನಡೆಸುವ ಕುರಿತು ಇದುವರೆಗೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೇ, ಜೂನ್ 21 ರಂದು ಆಯೋಜಿಸಲು ಯೋಜಿಸುತ್ತಿದೆ ಎಂದು ಸಂಸ್ಥೆಯ ಆಂತರಿಕ ಮೂಲಗಳಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ.

ಇನ್ನು, ಅಮೆಜಾನ್ ಪ್ರೈಮ್ ಡೇಸ್ ನಲ್ಲಿ ಯಾವೆಲ್ಲಾ ವಸ್ತುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಿದೆ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ : ಜಿಲ್ಲೆಯ ಜನರಿಗೆ ಯಡಿಯೂರಪ್ಪ ಸರಕಾರದಿಂದ “ಕತ್ತಲೆ ಭಾಗ್ಯ” : ದೀಪಕ್ ಕೋಟ್ಯಾನ್ ವಾಗ್ದಾಳಿ

Advertisement

Udayavani is now on Telegram. Click here to join our channel and stay updated with the latest news.

Next