Advertisement

ಅಮೆಜಾನ್‌ ದೊಡ್ಡ ಕಚೇರಿ

10:58 AM Aug 23, 2019 | Sriram |

ಹೈದರಾಬಾದ್‌: ಅಮೆರಿಕ ಮೂಲದ ಇ-ಮಾರಾಟ ಸಂಸ್ಥೆ ಅಮೆಜಾನ್‌, ವಿಶ್ವದಲ್ಲೇ ಅತಿ ದೊಡ್ಡದಾದ ತನ್ನ ಕಚೇರಿಯನ್ನು ಹೈದರಾಬಾದ್‌ನಲ್ಲಿ ನಿರ್ಮಿಸಿದ್ದು, ಬುಧವಾರ ಅದು ಲೋಕಾರ್ಪಣೆಗೊಂಡಿದೆ.

Advertisement

9.5 ಎಕರೆ ವಿಸ್ತೀರ್ಣದಲ್ಲಿ 32 ಲಕ್ಷ ಚದರ ಅಡಿಯಲ್ಲಿ ನಿರ್ಮಾಣವಾಗಿರುವ ಕಚೇರಿಯಲ್ಲಿ ಏಕಕಾಲಕ್ಕೆ 15,000 ಉದ್ಯೋಗಿಗಳು ಕುಳಿತು ಕೆಲಸ ಮಾಡಬಹುದಾಗಿದೆ. ವಿಶ್ವದ ಏಳು ಅದ್ಭುತಗಳಲ್ಲೊಂದಾದ ಐಫೆಲ್‌ ಟವರ್‌ಗೆ ಬಳಸಲಾಗಿರುವ ಉಕ್ಕಿಗಿಂತ (7,000 ಮೆಟ್ರಿಕ್‌ ಟನ್‌) 2.5 ಪಟ್ಟು ಹೆಚ್ಚಿನ ಉಕ್ಕನ್ನು ಈ ಕಚೇರಿ ನಿರ್ಮಾಣಕ್ಕೆ ಬಳಸಲಾಗಿದೆ.

ಕಚೇರಿ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದ ಅಮೆಜಾನ್‌ನ ಗ್ಲೋಬಲ್‌ ರಿಯಲ್‌ ಎಸ್ಟೇಟ್‌ ಆ್ಯಂಡ್‌ ಫೆಸಿಲಿಟೀಸ್‌ ವಿಭಾಗದ ಉಪಾಧ್ಯಕ್ಷ ಜಾನ್‌ ಸ್ಕಾಟ್ಲರ್‌, 2016ರ ಮಾ.30ರಂದು ನೂತನ ಕಚೇರಿ ನಿರ್ಮಾಣ ಆರಂಭವಾಗಿತ್ತು. ಹೈದರಾಬಾದ್‌ನಲ್ಲಿ ಕಚೇರಿಯ 8 ಕಟ್ಟಡಗಳಿವೆ. ಪ್ರತಿಯೊಂದು ಕಟ್ಟಡವೂ 4 ಲಕ್ಷ ಚದರಡಿ ವಿಸ್ತೀರ್ಣದ್ದಾಗಿದ್ದು, ಅದರಲ್ಲಿ ಅತ್ಯಾಧುನಿಕ ಸೌಕರ್ಯ ಕಲ್ಪಿಸಲಾಗಿದೆ. ಅಮೆರಿಕದಲ್ಲಿ ಅಮೆಜಾನ್‌ ತನ್ನದೇ ಕ್ಯಾಂಪಸ್‌ ಹೊಂದಿದ್ದು, ಅದು ಬಿಟ್ಟರೆ ಮತ್ತೂಂದು ಕ್ಯಾಂಪಸ್‌ ನಿರ್ಮಾಣವಾಗಿರುವುದು ಭಾರತದಲ್ಲೇ ಎಂದಿದ್ದಾರೆ. ಭಾರತದಲ್ಲಿ ಅಮೆಜಾನ್‌ ಸಂಸ್ಥೆಯು 62,000 ಪೂರ್ಣಕಾಲಿಕ ಉದ್ಯೋಗಿಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next