Advertisement
ಸ್ಪರ್ಧಾತ್ಮಕ ವಿರೋಧಿ ನಡೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಸಿಸಿಐ ತನಿಖೆಯನ್ನು ಪ್ರಶ್ನಿಸಿ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿರಿಯ ನ್ಯಾಯಮೂರ್ತಿ ಸತೀಶ್ ಚಂದ್ರಶರ್ಮಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
Related Articles
Advertisement
ಅಲ್ಲದೆ, ಒಂದೊಮ್ಮೆ ಮೇಲ್ಮನವಿದಾರರು ಪ್ರತಿಸ್ಪರ್ಧಾ ಕಾಯ್ದೆಯ ನಿಯಮಗಳನ್ನು ಉಲ್ಲಂ ಸದಿದ್ದರೆ ಸಿಸಿಐ ತನಿಖೆ ಎದುರಿಸಲು ಹಿಂದೇಟು ಹಾಕುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿಗಳನ್ನು ವಜಾಗೊಳಿಸಿದೆ.
ಪ್ರಕರಣವೇನು?ದೆಹಲಿ ವ್ಯಾಪಾರ ಮಹಾಸಂಘವು ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಸಂಸ್ಥೆಗಳ ವಿರುದ್ಧ ಸಿಸಿಐಗೆ ದೂರು ನೀಡಿತ್ತು. ಈ ಎರಡೂ ಸಂಸ್ಥೆಗಳು ಆಯ್ದ ವ್ಯಾಪಾರಿಗಳ ಅದರಲ್ಲೂ ವಿಶೇಷವಾಗಿ ಸ್ಮಾರ್ಟ್‌ಫೋನ್ ವ್ಯಾಪಾರಿಗಳ ಕಾರ್ಯಚರಣೆಗಳ ಮೇಲೆ ಪರೋಕ್ಷವಾಗಿ ನಿಯಂತ್ರಣ ಸಾಧಿಸಿ ಅವರಿಗೆ ಆದ್ಯತೆ ಮೇರೆಗೆ ಅವಕಾಶ ನೀಡುತ್ತಿವೆ. ಕೆಲ ನಿರ್ದಿಷ್ಟ ಬ್ರ್ಯಾಂಡ್‌ನವರು ಈ ಎರಡೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕವೇ ಮಾರಾಟ ಮಾಡುತ್ತವೆ. ಅಂತಹ ವ್ಯಾಪಾರಿಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತಿದೆ. ಈ ಮೂಲಕ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಸಂಸ್ಥೆಗಳು ಸ್ಪರ್ಧಾತ್ಮಕ ವಿರೋಧಿ ನಡೆ ಅನುಸರಿಸುತ್ತಿವೆ ಎಂದು ಆರೋಪಿಸಿತ್ತು. 2020ರ ಜನವರಿಯಲ್ಲಿ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ವಿರುದ್ಧದ ಆರೋಪಗಳ ಸಂಬಂಧ ತನಿಖೆಗೆ ಸಿಸಿಐ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಎರಡೂ ಸಂಸ್ಥೆಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಅವುಗಳನ್ನು ಏಕ ದಸ್ಯ ನ್ಯಾಯಪೀಠ 2021ರ ಜೂ.11ರಂದು ವಜಾಗೊಳಿಸಿತ್ತು.