Advertisement

ಅಮೆಜಾನ್ ಅಲೆಕ್ಸಾದಲ್ಲಿ ಬಂದಿದೆ ನಿಮ್ಮನ್ನು ಬೆರಗುಗೊಳಿಸುವ ತಂತ್ರಜ್ಞಾನ: ಏನದು ಗೊತ್ತಾ ?

09:34 AM Nov 29, 2019 | Mithun PG |

ಕ್ಯಾಲಿಫೋರ್ನಿಯಾ: ಅಮೆಜಾನ್ ಮಾರಾಟ ಮಾಡುತ್ತಿರುವ ಸ್ಮಾರ್ಟ್ ಸ್ಪೀಕರ್ ಅಲೆಕ್ಸಾ ಇನ್ನಷ್ಟು ಸುಧಾರಿತ ತಂತ್ರಜ್ಞಾನಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ಮೌಖಿಕ ಸೂಚನೆಗಳಿಗೆ ಮತ್ತಷ್ಟು ಅರ್ಥಗರ್ಭಿತವಾಗಿ ಮತ್ತು ನೈಸರ್ಗಿಕವಾಗಿ ಪ್ರತಿಕ್ರಿಯೆ ನೀಡುತ್ತದೆ. ಕೃತಕ ಬುದ್ದಿ ಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ ಸ್ಪೀಕರ್ ಗಳು ಇನ್ನಷ್ಟು ಪ್ರಭಾವಶಾಲಿಯಾಗಿವೆ

Advertisement

ಈ ವಾರದಿಂದ ಅಮೇರಿಕಾದ ಅಲೆಕ್ಸಾ ಬಳಕೆದಾರರು  ಸಂತೋಷ , ದುಃಖ ಮುಂತಾದ ಹಲವು ಭಾವಗಳಲ್ಲಿ ಪ್ರತಿಕ್ರಿಯೆಯನ್ನು ಪಡೆಯಬಹುದಾಗಿದೆ.  ಬಳಕೆದಾರರು ಸೂಚನೆ ನೀಡಿದರೇ ಮಾತ್ರವೇ ಇದು ಕಾರ್ಯನಿರ್ವಹಿಸಲಿದೆ.

ಬಳಕೆದಾರರಿಗೆ ಅಲೆಕ್ಸಾ ಮಾತನಾಡುವ ಭಾವಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿರಲಿದ್ದು ನ್ಯೂಸ್ ಗಳ ಮೂಲಕ, ಸಂಗೀತದ ಮೂಲಕ ಪ್ರತಿಕ್ರಿಯೆ ಪಡೆಯಬಹುದು. ಅದರ ಜೊತೆಗೆ ಕ್ರಿಕೇಟ್ ಪಂದ್ಯ ಸೋತರೆ ಬೇಸರದ ಧ್ವನಿಯಲ್ಲಿ, ಗೆದ್ದರೇ ಸಂತೋಷದ ಧ್ವನಿಯಲ್ಲಿ ತನ್ನ ಭಾವವನ್ನು ಅಲೆಕ್ಸಾ ವ್ಯಕ್ತಪಡಿಸುತ್ತದೆ.

ಅಮೆಜಾನ್‌ ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ, ಮತ್ತು ದೇಶೀಯ ಭಾಷೆಯಲ್ಲಿ ಹೆಚ್ಚು ಮಾಹಿತಿ, ಮನೋರಂಜನೆ ಸೇವೆ ಒದಗಿಸುವ ಸಲುವಾಗಿ ಅಲೆಕ್ಸಾದಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next