Advertisement

ಆರೋಗ್ಯಕ್ಕೂ, ಸೌಂದರ್ಯಕ್ಕೂ ಅಲೋವೆರಾ ಸಿದ್ದೌಷಧ

06:16 PM Feb 10, 2021 | Team Udayavani |

ಅಲೋವೆರಾವನ್ನು ಹೆಚ್ಚಾಗಿ ಸೌಂದರ್ಯ ವರ್ಧಕಗಳಲ್ಲಿ ಬಳಸಲಾಗುತ್ತದೆ.ಆರೋಗ್ಯಕ್ಕೂ ಅಲೋವೆರಾ ಹೇಳಿಮಾಡಿಸಿದ ಸಸ್ಯ. ಆ್ಯಂಟಿ ವೈರಲ್ ಹಾಗೂ ಆ್ಯಂಟಿ ಬಯೋಟಿಕ್ ಅಂಶವನ್ನು ಹೊಂದಿರುವ ಸಸ್ಯ ಮಲಬದ್ಧತೆಯಿಂದ ಡಯಾಬಿಟಿಸ್ ಅನ್ನೂ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುವುದರೊಂದಿಗೆ ಅನೇಕ ಗುಣಲಕ್ಷಣಗಳನ್ನು ಹೊಂದಿದೆ.

Advertisement

ಅಲೋವೆರಾದ ಆರೋಗ್ಯ ಸಂಬಂಧಿ ಪ್ರಯೋಜನಗಳ ಬಗ್ಗೆ ನೀವು ಈ ಹಿಂದೆ ಕೇಳಿರಬಹುದು ಅಥವಾ ಓದಿರಬಹುದು. ಚರ್ಮ, ತಲೆಕೂದಲು ಉದುರುವಿಕೆಗೆ ಪ್ರಯೋಜನಕಾರಿ ಎಂದು ನಿಮಗೆ ಗೊತ್ತಿರಬಹುದು ಆದರೇ ತೂಕ ಇಳಿಸಿಕೊಳ್ಲು ಇದು ಪ್ರಯೋಜಕಾರಿ ಎಂದು ನಿಮಗೆ ಗೊತ್ತಿರಲಿಕ್ಕಿಲ್ಲ.

ಅಪಾರ ಪೌಷ್ಟಿಕಾಂಶವನ್ನು ಹೊಂದಿರುವ ಅಲೋವೆರಾ ನಮ್ಮ ದೇಹದ ಕೆಲವು ಪೌಂಡ್ ಗಳನ್ನು ಕಡಿಮೆಗೊಳಿಸುವಲ್ಲಿ ನಮಗೆ ಸಹಾಯ ಮಾಡುತ್ತದೆ. ಚರ್ಮದ ಕಾಂತಿ ಮತ್ತು ಕೂದಲಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಅಲೋವೆರಾ ಚಯಾಪಚಯ ಕ್ರಿಯೆಗೆ ಉತ್ತೇಜನ ನೀಡುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ. ಇದು ದೇಹದಿಂದ ಹೆಚ್ಚು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಅಲೋವೆರಾದಲ್ಲಿ ವಿಟಮಿನ ‘ಬಿ’ ಅಂಶವಿರುವುದರಿಂದ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ.

Advertisement

ಉರಿಯೂತಕ್ಕೆ ಅಲೋವೆರಾ ರಾಮಭಾಣ

ಅಲೋವೆರಾ ಆ್ಯಂಟಿ ಆ್ಯಕ್ಸಿಡೆಂಟ್ ಗಳಿಂದ ತುಂಬಿರುವ ಕಾರಣ ನಮ್ಮ ದೇಹದಲ್ಲಿನ ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಜೀರ್ಣ ಕ್ರಿಯೆಗೆ ಸಹಕಾರಿ

ವಿರೇಚಕ ಗುಣವನ್ನು ಹೊಂದಿರುವ ಅಲೋವೆರಾವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದಾಗ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ದೇಹದಿಂದ ಬೇಡವಾದ ತ್ಯಾಜ್ಯವನ್ನು ಹೊರಹಾಕಲು ಉತ್ತಮವಾಗಿ ಔಷಧ.

ದೇಹದ ತೂಕ ಕಡಿಮೆಗೊಳಿಸಿಕೊಳ್ಳಲು ಸಹಕಾರಿ

ಅಲೋವೆರಾದಲ್ಲಿರುವ ನೀರಿನ ಪ್ರಮಾಣಕ್ಕೆ ಸ್ವಲ್ಪ ನಿಂಬೆ/ಲಿಂಬೆಯನ್ನು ಸೇರಿಸಿ ದಿನನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ಇರುವ ವಿಷಕಾರಿ ಅಂಶಗಳು ಬಹು ಬೇಗನೇ ನಮ್ಮ ದೇಹದಿಂದ ಹೊರಹೋಗುತ್ತದೆ.

ಕೂದಲಿನ ಆರೋಗ್ಯಕ್ಕೆ ಹೇಳಿ  ಮಾಡಿಸಿದ ಔಷಧ

ಸಂಜೆ ಚಹ ಕುಡಿಯುವಾಗ ಅಲೋವೆರಾದ ಲೋಳೆ ಅಥವಾ ರಸವನ್ನು ಸೇರಿಸಿ ಕುಡಿಯುವುದರಿಂದ ನಿಮ್ಮ ಎಲ್ಲಾ ದೈಹಿಕ ಸಮಸ್ಯೆಗಳಿಗೆ ಉಪಶಮನವನ್ನುಂಟು ಮಾಡುತ್ತದೆ. ತಲೆ ಕೂದಲಿಗೆ ಅಲೋವೆರಾದ ಲೋಳೆಯನ್ನು ಹಾಕಿಕೊಳ್ಳುವುದರಿಂದ ನಿಮ್ಮ ತಲೆಕೂದಲು ನಯವಾಗಿ ಸದೃಢವಾಗಿ ಬೆಳೆಯುತ್ತದೆ. ಅಂಗಡಿಗಳಲ್ಲಿ ಸಿಗುವ ಅಲೋವೆರಾ ಜೆಲ್ ಗಳನ್ನು ಬಳಸುವುದಕ್ಕಿಂತ ನೀವೆ ಮನೆಯಲ್ಲಿ ಸ್ವತಃ ತಯಾರಿಸಿಕೊಳ್ಳುವುದು ಉತ್ತಮ.

 

 

 

Advertisement

Udayavani is now on Telegram. Click here to join our channel and stay updated with the latest news.

Next