ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದುಗಾರ… ಅಪ್ಪಾ…
ಅಪ್ಪಾ ಎಂಬ ಆ ಶಬ್ದದಲ್ಲೇ ಅದೆಂಥ ಹುಮ್ಮಸ್ಸು. ಪುಟ್ಟ ಪುಟ್ಟ ಕಣ್ಣುಗಳನ್ನು ಅರಳಿಸುತ್ತಾ ಈ ಭೂಮಿಗೆ ಕಾಲಿಟ್ಟಾಗ ತಾಯಿಯೊಂದಿಗೆ ಕಾಣಿಸು ವ ಇನ್ನೊಂದು ಜೀವಿಯೆಂದರೆ ಅದು ತಂದೆ.
Advertisement
ಎಷ್ಟೇ ಕಷ್ಟಬಂದರೂ ತೊರಗೊಡದೆ, ತನ್ನೆಲ್ಲಾ ಸುಖವನ್ನು ತ್ಯಾಗಮಾಡುವ ವ್ಯಕ್ತಿತ್ವವೆಂದರೆ ಅದು ತಂದೆಯದು ಮಾತ್ರ ಆಗಿರುತ್ತದೆ. ದಿನನಿತ್ಯದ ಜಂಜಾಟಗಳಿಂದ ದಣಿದು ಒಮ್ಮೊಮ್ಮೆ ಸಿಂಹದಂತೆ ಗರ್ಜಿಸುವ ತಂದೆ ಮತ್ತೂಮ್ಮೆ ಶಾಂತವಾಗಿ ಮಂದಹಾಸ ಬೀರುತ್ತಾರೆ. ಒಮ್ಮೊಮ್ಮೆ ನೋವು, ಹತಾಶೆಗಳಿಂದ ದಿಕ್ಕೇ ತೋಚದೆ ತಲೆಮೇಲೆ ಕೈಹೊತ್ತು ಕುಳಿತಾಗ ಗುರಿ ತೋರುವ ಗುರುವಾಗುತ್ತಾರೆ. ಅಪ್ಪನು ಒಬ್ಬರಿದ್ದರೆ ಅದೇನೋ ಧೈರ್ಯ. ತಾಯಿ-ಮಗುವಿನ ಸಂಬಂಧ ಎಂಬುದು ಶ್ರೇಷ್ಠ ಹಾಗೂ ಪವಿತ್ರವಾದ ಸಂಬಂಧವೆಂದು ಗುರುತಿಸಲಾಗಿದೆ. ಆದರೆ, ತಂದೆ-ಮಗುವಿನ ಸಂಬಂಧವೆಂಬುದು ಅತ್ಯಂತ ಆಳವಾದ ಹಾಗೂ ಅರ್ಥಪೂರ್ಣವಾದ ಸಂಬಂಧವಾಗಿದೆ. ನಮ್ಮೆಲ್ಲ ಸಣ್ಣದೊಡ್ಡ ಬಯಕೆಗಳನ್ನು ಈಡೇರಿಸುವುದು ತಂದೆಯಲ್ಲವೆ? ಪ್ರತಿಯೊಬ್ಬ ಮಕ್ಕಳ ಪಾಲಿಗೆ ಅಪ್ಪನೇ ನಿಜವಾದ ಹೀರೋ.
ದ್ವಿತೀಯ ಬಿಕಾಂ
ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ