ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್ ಸೋನಾವಣೆ ಅವರನ್ನು ಗುಪ್ತಚರ ವಿಭಾಗಕ್ಕೆ ವರ್ಗಾಯಿಸಲಾಗಿದೆ. ನೂತನ ಎಸ್‌ಪಿಯಾಗಿ ಗುಪ್ತಚರ ವಿಭಾಗದ ಅಮಾಟೆ ವಿಕ್ರಮ್ ಅವರನ್ನು ನಿಯೋಜಿಸಲಾಗಿದೆ.
Advertisement
2015ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಹೃಷಿಕೇಶ್ ಅವರು 2021ರ ಎಪ್ರಿಲ್‌ನಲ್ಲಿ ದ.ಕ. ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಕೊರೊನಾ ಸಂದರ್ಭ ಯಶಸ್ವಿ ನಿರ್ವಹಣೆ, ಕೋಮು ಸಾಮರಸ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಭಾರೀ ಸವಾಲಾಗಿದ್ದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸೇರಿದಂತೆ ಹಕವು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು.